ADVERTISEMENT

ಟೋಲ್‌ಗೇಟ್‌ ಬಳಿ ಪ್ರತಿಭಟನಾಕಾರರ ಎಚ್ಚರಿಕೆ

ಬೇಡಿಕೆ ಈಡೇರಿಸದೆ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡಲ್ಲ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:31 IST
Last Updated 2 ಫೆಬ್ರುವರಿ 2017, 6:31 IST
ಟೋಲ್‌ಗೇಟ್‌ ಬಳಿ ಪ್ರತಿಭಟನಾಕಾರರ ಎಚ್ಚರಿಕೆ
ಟೋಲ್‌ಗೇಟ್‌ ಬಳಿ ಪ್ರತಿಭಟನಾಕಾರರ ಎಚ್ಚರಿಕೆ   

ಪಡುಬಿದ್ರಿ: ವಿವಿಧ ಬೇಡಿಕೆ ಈಡೇರಿಸದೆ ರಾಷ್ಟ್ರೀಯ ಹೆದ್ದಾರಿ 66 ರ ಹೆಜ ಮಾಡಿಯಲ್ಲಿ ನಿರ್ಮಾಣಗೊಂಡಿರುವ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಿ ಮಾಡಬಾರದು ಎಂದು ಒತ್ತಾಯಿಸಿ ಮಂಗಳವಾರ ತಡರಾತ್ರಿ ವಿವಿಧ ಸಂಘ ಟನೆಗಳು, ಸಂಘ ಸಂಸ್ಥೆಗಳು ರಾಜಕೀಯ ಮುಖಂಡರ ನೇತೃತ್ವದಲ್ಲಿ ಟೋಲ್‌ ಗೇಟ್‌ ಎದುರು  ಪ್ರತಿಭಟನೆ ನಡೆಯಿತು.

ಪಡುಬಿದ್ರಿ, ಮೂಲ್ಕಿ ಸಹಿತ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ವಿಸ್ತರಣೆ ಕಾಮಾಗಾರಿ ಪೂರ್ಣ ಗೊಳ್ಳದಿದ್ದು, ಹಲವು ಕಡೆ ಸರ್ವಋತು ರಸ್ತೆ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಹೆಜಮಾಡಿ ಟೋಲ್‌ಗೇಟ್‌ ಪರಿಸರದಲ್ಲಿ ಸ್ಕೈವಾಕ್ ಸೇರಿದಂತೆ ಜಿಲ್ಲೆಯ ಜನರ ವಿವಿಧ ಬೇಡಿಕೆ ಈಡೇರಿಸದೆ ಹೋದಲ್ಲಿ ಫೆ. 4ರಂದು ಪ್ರಾರಂಭಗೊಳ್ಳಲಿರುವ ಟೋಲ್ ಸಂಗ್ರಹ ಪ್ರಕ್ರಿಯೆ ವಿರುದ್ಧ ಹೆಜಮಾಡಿ ನಾಗರಿಕ ಹೋರಾಟ ಸಮಿತಿ ಸಹಿತ ಉಭಯ ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ರುವ ಪ್ರತಿಭಟನಕಾರರು ಈ ಭಾಗದ ಶಾಸಕರು ಮತ್ತು ಸಂಸದರ ಮೌನದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಹೆಜಮಾಡಿ ನಾಗರಿಕ ಸಮಿತಿ ಶೇಖರ್ ಹೆಜ್‌ಮಾಡಿ ಮಾತನಾಡಿ, ಹೆದ್ದಾರಿ ಕಾಮಗಾರಿಯು ಅವೈಜ್ಞಾನಿಕ ವಾಗಿ ಮಾಡಲಾಗಿದ್ದು, ಈ ಭಾಗದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಕಾಮಗಾರಿ ಪೂರ್ಣಗೊಳಿಸದೆ ಸಾರ್ವಜನಿಕ ಹಿತಾಸಕ್ತಿ ಕಾಯ್ದುಕೊಳ್ಳದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಕ್ರಮ ಸರಿಯಾದುದ್ದು ಅಲ್ಲ. ವಿವಿಧ ಬೇಡಿಕೆಗಳನ್ನು ಈಡೇರಿಸದೆ ಟೋಲ್ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವು ದಿಲ್ಲ ಎಂದು ಎಚ್ಚರಿಸಿದರು. 

ಉಡುಪಿ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಕಿನ್ನಿಗೋಳಿ ಬಸ್‌್ಸು ಮಾಲೀಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಪಿ.ರವೀಂದ್ರ ನಾಥ್‌ ಜಿ. ಹೆಗ್ಡೆ, ಮೂಲ್ಕಿ ಕಾರು ಚಾಲಕ ಮಾಲೀಕಕ ಸಂಘದ ಮಧು ಆಚಾರ್ಯ, ಕಾಪು ಜೆಡಿಎಸ್ ಅಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ, ಹೋರಾಟ ಸಮಿತಿ ಗುಲಾಮ್ ಮೊಹಮ್ಮದ್, ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಸಹಿತ ಹಲವು ಮುಖಂಡರು ಮಾತನಾಡಿದರು.

ಜಿಲ್ಲೆಯ ವಾಹನಗಳಿಗೆ ವಿನಾಯಿತಿ ನೀಡಿ: ಜಿಲ್ಲೆಯಾದ್ಯಂತ ಹಲವು ಮುಖಂಡರು ಮತ್ತು ಸಾರ್ವಜನಿಕರಿಂದ ಉಡುಪಿ ಜಿಲ್ಲಾ ನೋಂದಾಯಿತ ವಾಹ ನಗಳಿಗೆ ಟೋಲ್ ವಿನಾಯಿತಿ ನೀಡ ಬೇಕು ಎಂಬ ಕೂಗು ಕೇಳಿ ಬಂದಿದ್ದು ಸ್ಥಳೀಯರ ಜೀವನಾಡಿಯಾಗಿರುವ ರಾ.ಹೆ 66 ಬಿಟ್ಟು ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದೇ ಕಾರಣ ಸ್ಥಳೀಯ ವಾಹನಗಳಿಗೆ ಟೋಲ್ ಮುಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹ ಹಿಸಿದರು.

ಆದರೆ ದ್ವಿಚಕ್ರ, ರಿಕ್ಷಾಗಳಿಂದ ಟೋಲ್ ಸಂಗ್ರಹ ಮಾಡಲಾಗುವುದಿಲ್ಲ. ಅಲ್ಲದೇ ಟೋಲ್‌ಗೇಟ್‌ನಿಂದ 20 ಕಿ.ಮೀ ವ್ಯಾಪ್ತಿಯ ಸ್ಥಳೀಯರಿಗೆ ₹ 235 ರಂತೆ ಶುಲ್ಕ ರಿಯಾಯಿತಿ ಇರುತ್ತದೆ ಎಂದು ತಿಳಿದು ಬಂದಿದೆ.

ಹೈಟೆಕ್ ಟೋಲ್‌ಗೇಟ್‌: ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಾಹನಗಳ ಸಂಚಾ ರಕ್ಕೆ 7 ಲೇನ್‌ಗಳು ಮತ್ತು ವಾಹನ ನಿರ್ಗಮನಕ್ಕೆ 7 ಲೇನ್ ಸೇರಿ ಒಟ್ಟು 14 ಲೇನ್‌ಗಳಿವೆ. ಪ್ರತಿಯೊಂದು ಲೇನ್‌ಗೂ ತಲಾ 2ರಂತೆ ಹಾಗೂ ಹೊರ ಭಾಗಗಳಿಗೆ ಎರಡರಂತೆ ಸುಮಾರು 30ರಷ್ಟು ಅತ್ಯಾ ಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ಸುಂಕ ಪಾವತಿ,  ಸ್ವಯಂ ಚಾಲಿತ ಬಾಗಿಲುಗಳು, 24 ತಾಸು ಭದ್ರತಾ ಸಿಬ್ಬಂದಿ ವ್ಯವಸ್ಥೆ, ವೈದ್ಯಕೀಯ ನೆರವು, ಶೌಚಾಲಯ ವ್ಯವಸ್ಥೆ, ಕ್ಷಿಪ್ರ ಟೋಲ್ ಸಂಗ್ರಹಕ್ಕಾಗಿ ನಗದು ರಹಿತವಾಗಿ ಇಟಿಸಿ (ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್) ಮೂಲಕ ಟೋಲ್ ಪಾವತಿಸುವ ವ್ಯವಸ್ಥೆ, ಫಾಸ್ಟ್ಟ್ಯಾಗ್ ಲೇನ್ ನಂಥಹ ಹಲವು ಅತ್ಯಾಧುನಿಕ ವ್ಯವಸ್ಥೆ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.