ADVERTISEMENT

ಟ್ರೋಫಿ ಗೆದ್ದ ದೊಡ್ಡಣಗುಡ್ಡೆಯ ಲೋಕಲ್ ಬಾಯ್ಸ್ ತಂಡ

ಆರ್‌ಸಿ ಟ್ರೋಫಿ ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 11:53 IST
Last Updated 6 ಏಪ್ರಿಲ್ 2018, 11:53 IST

ಉಡುಪಿ: ಅಂಗವಿಕಲರು ಹಾಗೂ ಬಡಜನರ ಸಹಾಯಾರ್ಥ ಮಣಿಪಾಲದ ರಾಜೀವನಗರ ಕ್ರಿಕೆಟರ್ಸ್ ಆರ್‌ಸಿ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಏಳನೇ ವರ್ಷದ ‘ಆರ್‌ಸಿ ಟ್ರೋಫಿ–2018’ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ದೊಡ್ಡಣಗುಡ್ಡೆಯ ಲೋಕಲ್ ಬಾಯ್ಸ್ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು. ಪ್ರಥಮ ಬಹುಮಾನ ₹44,444 ಒಳಗೊಂಡಿದೆ.

ರನ್ನರ್‌ ಅಪ್ ಪ್ರಶಸ್ತಿ ಗಳಿಸಿದ ಅಲೆವೂರಿನ ಬಿಜಿ ಫ್ರೆಂಡ್ಸ್ ತಂಡ ₹22,222 ನಗದು ಬಹುಮಾನ ತನ್ನದಾಗಿಸಿಕೊಂಡಿತು. ಲೋಕಲ್ ಬಾಯ್ಸ್ ತಂಡದ ಇಮ್ರಾನ್ ಮಲ್ಪೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಅದೇ
ತಂಡದ ಸಂತೋಷ್ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಹಾಗೂ ಬಿಜಿ ಫ್ರೆಂಡ್ಸ್ ತಂಡದ ಪ್ರಜ್ವಲ್ ಗಂಗೊಳ್ಳಿ ಉತ್ತಮ ಬೌಲರ್‌ ಪ್ರಸಸ್ತಿ ಪಡೆದುಕೊಂಡರು.

ಆರ್‌ಸಿ ತಂಡದ ವತಿಯಿಂದ  ಐವರು ಅಂಗವಿಕಲರಿಗೆ ತಲಾ ₹11,000 ವಿತರಿಸಿಲಾಯಿತು. ಕೊರಗ ಸಮುದಾಯದ 30  ಯುವಕರಿಗೆ ಸಮವಸ್ತ್ರವನ್ನು ನೀಡಲಾಯಿತು. ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಮೆಂಟ್‌ಗೆ ಬಡಗುಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತರಾಮ್ ಶೆಟ್ಟಿ ಚಾಲನೆ ನೀಡಿದರು.

ADVERTISEMENT

ಸಮಾರೋಪ ಸಮಾರಂಭದಲ್ಲಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯ ವಿಠಲ್ಅಮಿನ್, ಮತ್ಸ್ಯೋದ್ಯಮಿ ಶಶಿ ಮಲ್ಪೆ, ಸುಮತಿ ಶೇರಿಗಾರ್, ಆರ್‌ಸಿ ತಂಡದ ಸಂಚಾಲಕ ಸುನಿಲ್ ಶೇರಿಗಾರ್, ಮುಖ್ಯಸ್ಥ ನಾಗರಾಜ ಶೇರಿಗಾರ್, ಸದಸ್ಯರಾದ ಸುಧೀರ್, ಶಿವಪ್ರಸಾದ್, ಸಂದೀಪ್, ಧನಂಜಯ,ಸುಧೀರ್ ಶೇರಿಗಾರ್, ಸುಕೇತ್, ಕಲ್ಫಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.