ADVERTISEMENT

ತಡೆಗೋಡೆ ನಿರ್ಮಾಣ ಕಾಮಗಾರಿ ಶೀಘ್ರ: ಸಚಿವ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:20 IST
Last Updated 9 ಮಾರ್ಚ್ 2017, 10:20 IST
ಬ್ರಹ್ಮಾವರ: ಕರಾವಳಿಯ ಬಂದರುಗಳ ಸ್ಥಿತಿ-ಗತಿಯ ಕುರಿತು ಅವಲೋಕನ ನಡೆಸಿ ಅಭಿವೃದ್ಧಿಗೆ ಅಗತ್ಯ ಕ್ರಮಕೈ ಗೊಳ್ಳಲಾಗುವುದು ಎಂದು ಲೋಕೋಪ ಯೋಗಿ ಮತ್ತು ಬಂದರು, ಒಳನಾಡು ಸಚಿವ ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದರು. 
 
ಬಂದರುಗಳ ವೀಕ್ಷಣೆಯ ಸಲುವಾಗಿ ಹಂಗಾರಕಟ್ಟೆ ಮೀನುಗಾರಿಕೆ ಜಟ್ಟಿಗೆ ಮಂಗಳವಾರ ಬಂದಿದ್ದ ಸಂದರ್ಭ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಹಂಗಾರಕಟ್ಟೆಯಲ್ಲಿ  ತಡೆಗೋಡೆ ನಿರ್ಮಾಣ ಕುರಿತು ಬೇಡಿಕೆ ಇದೆ.  ಈ ಕುರಿತು  ಸರ್ವೆ ನಡೆಸಲು ಕ್ರಮಕೈಗೊಳ್ಳ ಲಾಗಿದೆ. ಆದಷ್ಟು  ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.
 
ಕೋಡಿಬೆಂಗ್ರೆಯ ಮೀನುಗಾರಿಕೆ ಜಟ್ಟಿ ವಿಸ್ತರಣೆ ಹಾಗೂ ಅಭಿವೃದ್ಧಿ ಕುರಿತು ಕ್ರಮಕೈಗೊಳ್ಳುವಂತೆ ಹಂಗಾರಕಟ್ಟೆ- ಕೋಡಿಬೆಂಗ್ರೆ ಯಾಂತ್ರೀಕೃತ ಮೀನು ಗಾರರ ಸಂಘದ ಅಧ್ಯಕ್ಷ ಬಿ.ಬಿ.ಕಾಂಚನ್ ಸಚಿವರಲ್ಲಿ ಮನವಿ ಮಾಡಿದರು. 
 
ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಂದ್ರ ಸುವರ್ಣ, ಮೀನುಗಾರ ಮುಖಂಡರಾದ  ಕೇಶವ ಕುಂದರ್, ಬಂದರು ಇಲಾಖೆಯ ಅಧಿಕಾರಿಗಳಾದ ಕೆ.ಎಸ್.ಜಂಬೋಳ, ಕೆ.ಆರ್.ದಯಾನಂದ, ಎ.ಎಸ್. ನಾಗರಾಜ್ ಹಾಗೂ ಮೀನುಗಾರ ಮುಖಂಡರಾದ ಕ್ಯಾಪ್ಟನ್ ಕೃಷ್ಣಪ್ಪ, ರಾಜ್ ಕುಮಾರ್, ಜಯಂತ್, ಬಸವ ಕುಂದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.