ADVERTISEMENT

ದತ್ತಮಾಲಾ ಅಭಿಯಾನ ನಾಳೆ ಆರಂಭ

ಬಜರಂಗದಳದ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 6:54 IST
Last Updated 3 ಡಿಸೆಂಬರ್ 2016, 6:54 IST
ಉಡುಪಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳದ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌ ಮಾತನಾಡಿದರು.   ಪ್ರಜಾವಾಣಿ ಚಿತ್ರ
ಉಡುಪಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳದ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಸ್ವಾಮಿಯ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿಯ ಅಂಗವಾಗಿ ದತ್ತಮಾಲಾ ಅಭಿಯಾನವು ಇದೇ 4ರಿಂದ ಆರಂಭಗೊಳ್ಳಲಿದೆ ಎಂದು ಬಜರಂಗದಳ ಪ್ರಾಂತ ಸಂಯೋ ಜಕ ಶರಣ್‌ ಪಂಪ್‌ವೆಲ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಬಜರಂಗ ದಳದ ಕಾರ್ಯಕರ್ತರಿಗೆ ದತ್ತ ಮಾಲಾ ಧಾರಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡುವರು. ಕರಾವಳಿ ಭಾಗದಿಂದ  20 ಸಾವಿರ ಕಾರ್ಯಕರ್ತರು ದತ್ತಮಾಲಾ ಧಾರಣೆ ಮಾಡಿ ದತ್ತಪೀಠಕ್ಕೆ ತೆರಳಲಿ ದ್ದಾರೆ. ಈ ದತ್ತ ಮಾಲಾ ಅಭಿಯಾನದಲ್ಲಿ ರಾಜ್ಯ ದಿಂದ 50 ಸಾವಿರಕ್ಕಿಂತಲೂ ಹೆಚ್ಚಿನ ದತ್ತಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಇದೇ 11ರಂದು ದತ್ತಪೀಠದಲ್ಲಿ ಶ್ರೀ ಅನಸೂಯ ದೇವಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ ನೆರವೇರ ಲಿದ್ದು, ಅಂದು ಬೆಳಿಗ್ಗೆ ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಮತ್ತು ದತ್ತಪೀಠದ ದರ್ಶನ ನಡೆಯ ಲಿದೆ. ಅದೇ ದಿನ ಮಂಗಳೂರು ವಿಭಾ ಗದ ಎಲ್ಲ ತಾಲ್ಲೂಕು ಕೇಂದ್ರ ಮತ್ತು ನಗ ರಗಳಲ್ಲಿ ದತ್ತಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ಜರುಗಲಿದೆ ಎಂದರು.

12ರಂದು ಚಿಕ್ಕಮಗಳೂರು ನಗರ ದಲ್ಲಿ ದತ್ತಮಾಲಾಧಾರಿಗಳಿಂದ ದತ್ತಾತ್ರೇ ಯರ ಉತ್ಸವದೊಂದಿಗೆ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ವಿಶ್ವಹಿಂದೂ ಪರಿಷತ್‌ನ ಅಖಿಲ ಭಾರತೀಯ ಸಹಕಾರ್ಯದರ್ಶಿ ಡಾ. ಸುರೇಂದ್ರ ಕುಮಾರ್‌ ಜೈನ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. 13ರಂದು ದತ್ತಾತ್ತೇಯ ಜಯಂತಿ ಹಾಗೂ ದತ್ತಪಾದುಕೆಯ ದರ್ಶನದೊಂ ದಿಗೆ ದತ್ತಮಾಲಾ ಅಭಿಯಾನ ಮುಕ್ತಾ ಯಗೊಳ್ಳಲಿದೆ ಎಂದು ಹೇಳಿದರು.

ಬಜರಂಗದಳದ ಮಂಗಳೂರು ವಿಭಾಗ ಸಹಸಂಯೋಜಕ ಕೆ.ಆರ್‌. ಸುನೀಲ್‌, ಉಡುಪಿ ಜಿಲ್ಲಾ ಸಂಯೋಜಕ ದಿನೇಶ್‌ ಮೆಂಡನ್‌, ಕಾರ್ಯಕರ್ತ ಅನಿಲ್‌ ಇದ್ದರು.

ಸರ್ಕಾರದ ಸ್ಪಂದನೆ ಇಲ್ಲ: ಟೀಕೆ
ದತ್ತಪೀಠದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ದತ್ತಪೀಠವನ್ನು ಹಿಂದೂಗಳಿಗೆ ನೀಡುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ ಎಂದು ಬಜರಂಗದಳದ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌ ಹೇಳಿದರು. 

ಆ ಹಿನ್ನೆಲೆಯಲ್ಲಿ ಈ ಶ್ರದ್ಧಾ ಕೇಂದ್ರವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಮಾತ್ರ ಪೂರಕವಾಗಿ ಸಹಕರಿಸುತ್ತಿಲ್ಲ. ದತ್ತಪೀಠ ಆವರಣದಲ್ಲಿ ಮಾಂಸ ಸೇವನೆ ಇತ್ಯಾದಿ ಚಟುವಟಿಕೆಗಳನ್ನು ಸರ್ಕಾರ ನಿಷೇಧಿಸಿದೆ. ಆದರೆ, ಅಲ್ಲಿ ತ್ರಿಕಾಲ ಪೂಜೆ ನಡೆಯಬೇಕೆನ್ನುವ ತಮ್ಮ ಬೇಡಿಕೆಗೆ ಸರ್ಕಾರ ಇನ್ನೂ ಸರಿಯಾಗಿ ಸ್ಪಂದಿಸಿಲ್ಲ. ಆದ್ದರಿಂದ ತಮ್ಮ ಬೇಡಿಕೆ ಕೂಡಲೇ ಈಡೇರಿಸ ಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT