ADVERTISEMENT

‘ನಮ್ಮ ವೇದನೆಗಳಿಗೆ ಮಾತು ದಿವ್ಯ ಔಷಧ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 6:11 IST
Last Updated 2 ಮಾರ್ಚ್ 2017, 6:11 IST

ಕಾರ್ಕಳ : ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಲು, ನಮ್ಮ ವೇದನೆಗಳನ್ನು ನಾವೇ ನಿವಾರಿಸಿಕೊಳ್ಳಲು ಮಾತು ದಿವ್ಯ ಔಷಧ ಎಂದು  ಉಡುಪಿಯ  ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋರೋಗ ತಜ್ಞ  ಡಾ.ವಿರೂಪಾಕ್ಷ ದೇವರಮನೆ ಹೇಳಿದರು.

ನಗರದ ಅನಂತಶಯನದ ಹೊಟೇಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ನಗರ ಸಾಹಿತ್ಯ ಸಂಘದ ಆಶ್ರಯದಲ್ಲಿ ಸಾಹಿತ್ಯ ಸಂಘದ ವಿಂಶತಿ ಆಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಸಂಬಂಧಗಳು ಮತ್ತು ಸಂವಹನ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು
ಮಾನಸಿಕ ಸಮಸ್ಯೆ ಹಾಗೂ ವೇದನೆಗಳನ್ನು ಕೇಳುವಾಗ ಇವರಿಗೆ ಬೇಕಾಗಿರೋದು ಮಾತು ಹೊರತು, ವೈದ್ಯರ ಮಾತ್ರೆಯಲ್ಲ ಅನ್ನಿಸುತ್ತದೆ.

ಇಂದು ನಾನಾ ಬಗೆಯ ಬಿಂಕ, ಅಹಂ ಕಾರ, ಅಧಿಕಾರ, ಬಿಗುಮಾನ ಗಳಿಂದ ಮಾತುಗಳು ಹುಟ್ಟುತ್ತಿಲ್ಲ. ಮಾತಿಲ್ಲದ ಸಂಬಂಧಗಳು ಜಾಸ್ತಿಯಾಗುತ್ತಿವೆ. ಹೆತ್ತವ ರಿಂದ ಮಾತನ್ನು ಕಲಿಯಬೇಕಾದ ಮಕ್ಕ ಳಿಗೆ ಇಂದು ಈ ಕುರಿತು ಹೆತ್ತವರಿಂದ ಮಾರ್ಗದರ್ಶನವೇ ಸಿಗುತ್ತಿಲ್ಲ ಎಂದರು.

ಸಾಹಿತ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನಕ್ರೆ ಶಿವರಾಯ ಸ್ವಾಗತಿ ಸಿದರು. ಪ್ರೊ. ಎಂ.ರಾಮಚಂದ್ರ ಪ್ರಾಸ್ತಾ ವಿಕ ಮಾತನಾಡಿದರು. ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣ ಭಟ್ ಅತಿಥಿಗಳನ್ನು ಸತ್ಕರಿಸಿದರು. ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ ಇದ್ದರು. ಕನ್ನಡ ಉಪನ್ಯಾಸಕ ಬಿ.ಕೆ. ಈಶ್ವರಮಂಗಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.