ADVERTISEMENT

ನೀರಿನ ಕೊರತೆ: ಪ್ರಕೃತಿಯ ಶಾಪ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:13 IST
Last Updated 18 ಏಪ್ರಿಲ್ 2017, 7:13 IST

ಬೈಂದೂರು: ‘ವಾರ್ಷಿಕವಾಗಿ 4000 ಮಿಮೀ ಮಳೆಯಾಗುವ ಕರಾವಳಿಯಲ್ಲಿ ಬೇಸಿಗೆ ಬರುತ್ತಿದ್ದಂತೆ ನೀರಿನ ಕೊರತೆ ಕಾಣಿಸಿಕೊಂಡು, ಹಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ದುರಂತದ ಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ನೀರು ನಿರ್ವಹಣೆಯ ಬಗ್ಗೆ ಜನರೂ, ಸರ್ಕಾರಗಳೂ ತೋರುತ್ತಿರುವ ನಿರ್ಲಕ್ಷ್ಯ ಕಾರಣ’ ಎಂದು ಜಲ ಸಂವರ್ಧನ ತಜ್ಞ ಶ್ರೀಪಡ್ರೆ ಹೇಳಿದರು.

ಇಲ್ಲಿನ ಲಾವಣ್ಯ ಕಲಾ ಕುಟುಂಬ, ಯಡ್ತರೆ ಮತ್ತು ಪಡುವರಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಶಾರದಾ ವೇದಿಕೆಯಲ್ಲಿ ನಡೆದ ‘ನೆಲ ಜಲ ಉಳಿಸಿ’ ಅಭಿಯಾ ನದಲ್ಲಿ ಮಾತನಾಡಿದರು.‘ನೀರಿನ ಕ್ಷಾಮ ಸೃಷ್ಟಿಯಾಗಲು ನಾವೇ ಕಾರಣ. ಮಳೆನೀರನ್ನು ತಡೆದು ಮಣ್ಣಿನೊಳಗೆ ಇಂಗಿಸಿ ಮತ್ತೆ ಜಿನು ಗುವಂತೆ ಮಾಡುವ ನಿಸರ್ಗದತ್ತ ವ್ಯವ ಸ್ಥೆಯಾದ ಕಾಡನ್ನು ನದಿಗಳ ತಾಯಿ ಎಂದು ಪರಿಗಣಿಸುತ್ತಾರೆ. ಅಂತಹ ಕಾಡನ್ನು ಕಡಿಯಲಾಗಿದೆ.

ಸಾಂಪ್ರದಾ ಯಿಕ ಜಲಸಂವರ್ಧನ ವಿಧಾನಗಳಾದ ಮದಗ, ಕೆರೆ, ಕಟ್ಟಗಳನ್ನು ಹಾಳು ಗೆಡವಲಾಗಿದೆ. ಇದರ ಪರಿಣಾಮವಾಗಿ ದೇಶ ಬರಗಾಲದ ಹೊಸ್ತಿಲಿಗೆ ಬಂದು ನಿಂತಿದೆ. ಇದು ನಿಸರ್ಗಕ್ಕೆ ಎಸಗುವ ದ್ರೋಹಕ್ಕೆ ಪ್ರತಿಯಾಗಿ ಅದು ನೀಡಿದ ಶಾಪ. ಕೊಳವೆ ಬಾವಿಗಳನ್ನು ಕೊರೆ ಯುವುದು ಖಂಡಿತ ಇದಕ್ಕೆ ಪರಿಹಾ ರವಲ್ಲ. ಪ್ರತಿ ಗ್ರಾಮವೂ ಮತ್ತೆ ನೀರಿಂಗಿ ಸುವ ಕ್ರಮಗಳಿಗೆ ಮರಳಬೇಕು. ಹೆಚ್ಚು ಹೆಚ್ಚು ಇಂಗುಗುಂಡಿಗಳ ನಿರ್ಮಾಣ, ನೀರಿನ ಬಳಕೆಯ ಮೇಲೆ ಮಿತಿ ಹೇರಿಕೆ ಆಗಬೇಕು’ ಎಂದು ಹೇಳಿದರು.

ADVERTISEMENT

ಜಲ ಸಂವರ್ಧನೆಯ ಪಾರಂಪರಿಕ ಮತ್ತು ಕೃತಕ ಕ್ರಮಗಳ, ಆ ನಿಟ್ಟಿನ ಯಶೋ ಗಾಥೆಗಳ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿ ತಮ್ಮ ವಿಚಾರಗಳನ್ನು ಅವರು ಸಮರ್ಥಿ ಸಿದರು.
ತಕ್ಷಣದ ಕಾರ್ಯಕ್ರಮ:  ‘ಮಳೆಗಾಲ ಸಮೀಪಿಸುತ್ತಿರುವಾಗ ಮಳೆನೀರು ಸಂಗ್ರಹಕ್ಕೆ, ನೀರಿಂಗಿಸುವಿಕೆಗೆ ಸಿದ್ಧತೆ ನಡೆಸಬೇಕು. ಒಂದೇ ಮಳೆಗಾಲದಲ್ಲಿ ಅದರ ಫಲ ಸಿಗುತ್ತದೆ. ಮನೆಮನೆಗಳಲ್ಲಿ ಇದನ್ನು ಮಾಡುವ ಮೂಲಕ ಕುಡಿ ಯುವ ನೀರಿನ ಕೊರತೆಗೆ ಶಾಶ್ವತ ಪರಿ ಹಾರ ಪಡೆಯಬಹುದು’ ಎಂದು ಶ್ರೀಪಡ್ರೆ ಹೇಳಿದರು.

ಲಾವಣ್ಯದ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಪಡುವರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಶೆಟ್ಟಿ, ಯಡ್ತರೆ ಸದಸ್ಯ ಸುಧಾಕರ ದೇವಾಡಿಗ, ಸಂಘಟನೆಗಳ ಪ್ರತಿನಿಧಿಗಳಾದ ದಯಾ ನಂದ ಬೈಂದೂರು, ಸುಜಾತಾ ರವಿ ರಾಜ್, ದಿನೇಶ್ ಮೊದಲಾದವರು ಇದ್ದರು.ಲಾವಣ್ಯ ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ ಸ್ವಾಗತಿಸಿ. ಅಧ್ಯಕ್ಷ ಗಿರೀಶ್ ಬೈಂದೂರು ವಂದಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.