ADVERTISEMENT

ನೀಲಾವರದಲ್ಲಿ ಗದ್ದೆಗೆ ಇಳಿದ ಇಂಗ್ಲೆಂಡ್ ವಿ.ವಿ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 9:24 IST
Last Updated 9 ಸೆಪ್ಟೆಂಬರ್ 2017, 9:24 IST
ಇಂಗ್ಲೆಂಡಿನ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಧ್ಯಯನ ತಂಡ ಬ್ರಹ್ಮಾವರ ಬಳಿಯ ನೀಲಾವರದಲ್ಲಿ ಭತ್ತದ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು.
ಇಂಗ್ಲೆಂಡಿನ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಧ್ಯಯನ ತಂಡ ಬ್ರಹ್ಮಾವರ ಬಳಿಯ ನೀಲಾವರದಲ್ಲಿ ಭತ್ತದ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು.   

ಬ್ರಹ್ಮಾವರ: ಭತ್ತದ ಕೃಷಿಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ, ದೇಶದಲ್ಲಿ ಈ ಕೃಷಿಯಲ್ಲಿ ತೊಡಗಿರುವವರ ಒಟ್ಟು ಸಂಖ್ಯೆ ಹಾಗೂ ಉತ್ಪಾದನೆ ಹೀಗೆ ಹಲವಾರು ವಿಷಯಗಳನ್ನು ಇಂಗ್ಲೆಂಡಿನ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಧ್ಯಯನ ತಂಡ ತಿಳಿದುಕೊಂಡಿತು.

ನೀಲಾವರದ ಪ್ರಗತಿಪರ ಕೃಷಿಕ ಸೀತಾರಾಮ ಅಚಾರ್ಯ ಅವರ ಕೃಷಿ ಭೂಮಿಗೆ ಇತ್ತೀಚೆಗೆ ಭೇಟಿ ನೀಡಿದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕೋಟ ಪಡುಕೆರೆ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಅವರೊಂದಿಗೆ ಮಾತುಕತೆ ನಡೆಸಿಸರು. ಭತ್ತ ಬೆಳೆಯುವ ಪ್ರಮುಖ ಬೆಳೆಗಳು, ಬೇಕಾಗುವ ಅಗತ್ಯ ಮಳೆಯ ಪ್ರಮಾಣ, ಸೂಕ್ತವಾದ ಕಾಲ, ಹವಾಮಾನ ಉಷ್ಣತೆ ಬಗ್ಗೆ ಮಾಹಿತಿ ಪಡೆದರು.

ಭಾರತದಲ್ಲಿ ಭತ್ತ ಬೆಳೆಯುವ ಮತ್ತು ಆಧುನಿಕ ವಿಧಾನಗಳ ಸವಿವರವನ್ನು ಚಿತ್ರಗಳ ಮೂಲಕ ತಿಳಿದುಕೊಂಡ ತಂಡ, ಭತ್ತದ ಕೃಷಿಯ ಸವಾಲುಗಳ ಬಗ್ಗೆ ಚರ್ಚಿಸಲಾಯಿತು.
ಸಖಾರಾಮ ಮಧ್ಯಸ್ಥ, ಸಂತೋಷ ದೇವಾಡಿಗ, ಮಣಿಪಾಲ ಯುರೋಪಿಯನ್ ಸ್ಟಡೀಸ್‌ನ ಸಂಯೋಜಕಿ ಪೂಜಾ, ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ, ಹಿರಿಯ ಕೃಷಿಕರಾದ ಸೀತಾರಾಮ ಆಚಾರ್ಯ, ರಾಬರ್ಟ್‌ ಡಿಸೋಜ, ಪ್ರಗತಿಪರ ಕೃಷಿಕ ಬ್ಯಾಪ್ತಿಸ್‌ ಡಿಸೋಜ, ನಾಗರಾಜ್‌ ಪೂಜಾರಿ, ಚೈತನ್ಯ ಯುವಕ ಮಂಡಲದ ಹರೀಶ್ ಆಚಾರ್ಯ, ಕರುನಾಕರ ರಾವ್, ಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.