ADVERTISEMENT

ನೋಟು ಅಮಾನ್ಯದ ತೊಂದರೆ ತಾತ್ಕಾಲಿಕ: ಭಾರತಿ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 8:42 IST
Last Updated 17 ಜನವರಿ 2017, 8:42 IST
ನೋಟು ಅಮಾನ್ಯದ ತೊಂದರೆ ತಾತ್ಕಾಲಿಕ: ಭಾರತಿ ಶೆಟ್ಟಿ
ನೋಟು ಅಮಾನ್ಯದ ತೊಂದರೆ ತಾತ್ಕಾಲಿಕ: ಭಾರತಿ ಶೆಟ್ಟಿ   

ನಾಗೂರು (ಬೈಂದೂರು): ಹೆರಿಗೆಯ ನೋವನ್ನು ಅನುಭವಿಸುವ ಮಾತೆ ಮುಂದೆ ಮಗುವಿನ ಮುಖ ನೋಡಿ ಸಂತಸಪಡುತ್ತಾಳೆ. ನರೇಂದ್ರ ಮೋದಿ ಅವರು ಕೈಗೊಂಡ ಅಧಿಕ ಮುಖಬೆಲೆ ನೋಟು ರದ್ಧತಿ ಅಂತಹ ಒಂದು ಕ್ರಮ. ಅದ್ದರಿಂದ ಅನುಭವಿಸಿರಬಹುದಾದ ತೊಂದರೆ ತಾತ್ಕಾಲಿಕ. ನಿಕಟ ಭವಿಷ್ಯದಲ್ಲಿ ಅದರ ಸತ್ಪರಿಣಾಮಗಳು ಗೋಚರಿಸ ಲಿದ್ದು ಸಂತಸದ ದಿನ ಬರಲಿವೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.

ನಾಗೂರಿನ ಕೃಷ್ಣಲಲಿತಾ ಕಲಾ ಮಂದಿರದಲ್ಲಿ ಸೋಮವಾರ ನಡೆದ ಬೈಂದೂರು ಮಹಿಳಾ ಮೋರ್ಚಾ ಕಾರ್ಯಕಾರಿಣಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನೋಟು ರದ್ದತಿಯ ಹಿಂದೆ ಭಯೋತ್ಪಾದನೆ ನಿವಾರಿಸುವ, ವಿದೇಶದಿಂದ ವಾರ್ಷಿಕವಾಗಿ ಹರಿದು ಬರುವ ₹ 50 ಸಾವಿರ ಕೋಟಿ ಕಪ್ಪುಹಣವನ್ನು ನಿಯಂತ್ರಿಸುವ, ದೇಶದೊಳಗೆ ತೆರಿಗೆ ವಂಚಿಸಿ ನಡೆಸುವ ಕರಾಳ ವ್ಯವಹಾರವನ್ನು ತಡೆಯುವ ದೂರದೃಷ್ಟಿ ಇದೆ ಎಂದು ಸಮರ್ಥನೆ ನೀಡಿದ ಅವರು. ಮಹಿಳೆಯರು ಮನೆಮನೆಗೆ ತೆರಳಿ ಮೋದಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟುಮಾಡಬೇಕು ಎಂದರು.

ಕ್ಷೇತ್ರ ಬಿಜೆಪಿ ಅಧ್ಯಕ್ಷ ಯು. ಸದಾನಂದ ಅಧ್ಯಕ್ಷತೆ ವಹಿಸಿದ್ದರು. ದೀಪಾ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು. ಮಾಲಿನಿ ವರದಿ ಓದಿದರು. ಜಯಂತಿ ನಿರೂಪಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸದಸ್ಯರಾದ ಗೀತಾಂಜಲಿ ಸುವರ್ಣ, ಶೋಭಾ ಪುತ್ರನ್, ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಶರತ್‌ಕುಮಾರ ಶೆಟ್ಟಿ, ಮಹಿಳಾ ಮೋರ್ಚಾ ಪದಾಧಿಕಾರಿ ಗಳಾದ ಸಂಧ್ಯಾ ರಮೇಶ್, ವೀಣಾ ಶೆಟ್ಟಿ, ರಶ್ಮಿ ಶೆಟ್ಟಿ, ಶ್ಯಾಮಲಾ ಕುಂದರ್ ಇದ್ದರು. ರೇವತಿ ಪೂಜಾರಿ, ತುಂಗಾಕಿಣಿ, ತುಂಗಾ ಶೆಟ್ಟಿ, ಅನಸೂಯಾ ಗಾಣಿಗ ಪಕ್ಷಕ್ಕೆ ಸೇರ್ಪಡೆಯಾದರು. ಭಾರತಿ ಶೆಟ್ಟಿ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.