ADVERTISEMENT

‘ಪಾಶ್ಚಿಮಾತ್ಯ ಶೈಲಿ ಅಪಾಯಕಾರಿ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:18 IST
Last Updated 4 ಮಾರ್ಚ್ 2017, 6:18 IST

ಉಡುಪಿ: ಪಾಶ್ಚಿಮಾತ್ಯ ಜೀವನ ಶೈಲಿಯ ಅಪಾಯವನ್ನು ಅರಿತ ಭಾರತೀಯರು, ಮತ್ತೆ ನಮ್ಮ ಸಂಪ್ರದಾಯ, ಪದ್ದತಿಯ ಕಡೆಗೆ ಮುಖ ಮಾಡಿರುವುದು ಆರೋಗ್ಯಕರ ಬೆಳವಣಿಗೆ ಎಂದು ಆರ್ಟ್‌ ಫಸ್ಟ್‌ ಪ್ರತಿಷ್ಠಾನದ ನಿರ್ದೇಶಕಿ ವನಿತಾ ಪೈ ಹೇಳಿದರು.

ಮಣಿಪಾಲ ವಿಶ್ವವಿದ್ಯಾಲಯದ ಸ್ಕೂಲ್ ಆಫ್‌ ಕಮ್ಯೂನಿಕೇಷನ್‌ ಸ್ನಾತ ಕೋತ್ತರ ಕೇಂದ್ರದ ಈವೆಂಟ್‌ ಮ್ಯಾನೇಜ್‌ ಮೆಂಟ್‌ ಹಾಗೂ ಪ್ಲಾನಿಂಗ್ ವಿಭಾಗದ ವಿದ್ಯಾರ್ಥಿಗಳು ‘ನಮ್ಮ ಭೂಮಿ’ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ‘ನಮ್ಮ ಅಂಗಡಿ’ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ 14ನೇ ಆವೃತ್ತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತ ನಾಡಿದರು.

ದೇಶಿ ಉತ್ಪನ್ನಗಳ ಬೇಡಿಕೆಯನ್ನು ಪುನರುಜ್ಜೀವಗೊಳಿಸಲು ಭಾರತೀಯರು ಮುಂದಾಗಿದ್ದಾರೆ. ಹಿಂದೆ ಹತ್ತಿ (ಕಾಟನ್‌) ಬಟ್ಟೆಗಳಿಗೆ ಅಷ್ಟೊಂದು ಬೆಲೆ ಇರಲಿಲ್ಲ. ಆದರೆ, ಈಗ ಅದರ ಮಹತ್ವ ಎಲ್ಲರಿಗೂ ಅರಿವಾಗಿದೆ. ಎಲ್ಲ ಕಡೆಗ ಳಲ್ಲೂ ಉತ್ತಮ ಬೆಲೆ ಸಿಗುತ್ತಿರುವುದು ಉತ್ತಮ ಬೆಳವಣಿಗೆ  ಎಂದು ಹೇಳಿದರು.

ಭಾರತದಲ್ಲಿ ಹಿಂದೆ ದೇಶಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಈಗ ಕಾಲ ಬದಲಾಗಿದ್ದು, ಸಾಂಪ್ರದಾ ಯಿಕ ವಸ್ತುಗಳಿಗೂ ಹೆಚ್ಚಿನ ಬೇಡಿಕೆ ಬಂದಿದೆ. ಈ ದಿಸೆಯಲ್ಲಿ ಹೊಸ ಕ್ರಾಂತಿ ಯೇ ಆರಂಭವಾಗಿದೆ. ನಮ್ಮ ತನವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಅಂಗಡಿ ಯಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು. 

ಸತತ 14 ವರ್ಷಗಳಿಂದ ನಾವು ಈ ಮಾರಾಟ ಮೇಳ ಆಯೋಜಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನಿರ್ವಹಣೆ ಎಂಬ ಪ್ರತ್ಯೇಕ ವಿಷಯ ಇರುವುದರಿಂದ ಇದರ ಮೂಲಕ ಅವರು ಕಾರ್ಯಕ್ರಮ ನಿರ್ವಹಣೆಯ ಬಗ್ಗೆ ಪ್ರಾಯೋಗಿಕ ಅನುಭವ ಪಡೆದುಕೊಳ್ಳುತ್ತಾರೆ. ಕರಕುಶ ಕರ್ಮಿಗಳಿಗೆ ಉತ್ತೇಜನ ನೀಡಿ, ಅವರ ಬದುಕಿಗೆ ಕಾಯಕಲ್ಪ ಕಲ್ಪಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.

ಪ್ರತಿ ಬಾರಿ ಯೂ ವಿದ್ಯಾರ್ಥಿಗಳೇ ಹೆಚ್ಚು ಆಸಕ್ತಿ ವಹಿಸಿ ಈ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳುತ್ತಾರೆ ಎಂದು ಸ್ಕೂಲ್‌ ಆಫ್ ಕಮ್ಯೂನಿಕೇಷನ್‌ ನಿರ್ದೇಶಕಿ ನಂದಿನಿ ಲಕ್ಷ್ಮೀಕಾಂತ ಅವರು ಹೇಳಿದರು.

ನಮ್ಮ ಭೂಮಿಯ ಸಂಸ್ಥೆಯ ನಿರ್ದೇ ಶಕ ಶಿವಾನಂದ್‌ ಶೆಟ್ಟಿ, ಸ್ಕೂಲ್‌ ಆಫ್‌ ಕಮ್ಯೂನಿಕೇಷನ್‌ನ ವಿಭಾಗ ಮುಖ್ಯಸ್ಥ ಪದ್ಮಕುಮಾರ್‌, ಸೌಪರ್ಣಿಕಾ ಅತ್ತಾವರ್‌ ಉಪಸ್ಥಿತರಿದ್ದರು. ನಮ್ಮ ಅಂಗಡಿ ವಿದ್ಯಾರ್ಥಿ ಸಂಯೋ ಜಕಿಯರಾದ ರೀಚಾ ಶ್ರೀವಾತ್ಸವ ಸ್ವಾಗತಿಸಿ, ಸ್ನೇಹದೀಪ್ತ ಪೈನ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.