ADVERTISEMENT

ಬ್ರಹ್ಮಾವರ ಕಾಲೇಜಿಗೆ ಪ್ರಶಸ್ತಿಯ ಗರಿ

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:41 IST
Last Updated 27 ಮೇ 2017, 6:41 IST

ಬ್ರಹ್ಮಾವರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗುವ ರಾಜ್ಯಮಟ್ಟದ ಉತ್ತಮ ರಾಷ್ಟ್ರೀಯ ಸೇವಾ ಯೋಜನೆ ಘಟಕ ಪ್ರಶಸ್ತಿ ಬ್ರಹ್ಮಾ ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಲಭಿಸಿದ್ದು, ಕಾಲೇಜಿನ ಎನ್‌ಎಸ್‌ ಎಸ್‌. ಯೋಜನಾಧಿಕಾರಿ ಸವಿತಾ ಎರ್ಮಾಳ್‌ ಅವರಿಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿದರು.ರಾಷ್ಟ್ರೀಯ ಸೇವಾ ಯೋಜನೆ ಮೂಲಕ ವಿದ್ಯಾರ್ಥಿಗಳನ್ನು ಸಂಘಟಿಸಿ, ಹಳ್ಳಿಗಳಲ್ಲಿ ಶ್ರಮದಾನ ಮಾಡಿಸುವ ಮೂಲಕ ರಸ್ತೆ, ಚರಂಡಿ ದುರಸ್ತಿ ಗೊಳಿಸುವುದು, ಪೈಪ್ ಕಾಂಪೋಸ್ಟ್ ರಚನೆ, ಶೌಚಾಲಯ ನಿರ್ಮಾಣದ ಮುಖೇನ ಗ್ರಾಮ ನೈರ್ಮಲ್ಯಕ್ಕೆ ಪ್ರಯತ್ನಿಸಲಾಯಿತು.

ವ್ಯಕ್ತಿತ್ವ ವಿಕಸನ, ನಾಯಕತ್ವ, ಜೀವನ ಮೌಲ್ಯ ತರಬೇತಿ, ರಕ್ತದಾನ ಶಿಬಿರ, ಏಡ್ಸ್ ಜಾಗೃತಿ ಜಾಥಾ, ಮಾದಕ ವ್ಯಸನ ವಿರೋಧಿ ಜಾಥಾ, ಆರೋಗ್ಯ ಜಾಗೃತಿ ಜಾಥಾ, ಹದಿಹರೆಯದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ, ಪ್ರಾಥಮಿಕ ಶಾಲಾ ಮಕ್ಕಳನ್ನು ದತ್ತು ಸ್ವೀಕರಿಸಿ ಅವರಿಗೆ ವ್ಯಕ್ತಿತ್ವ ವಿಕಸನ ತರಬೇತಿ, ಹೀಗೆ ಹಲವಾರು ಕಾರ್ಯ ಕ್ರಮಗಳನ್ನು ಸಂಘಟಿಸಿ ಜನಜಾಗೃತಿ ಮೂಡಿಸುವ ಮೂಲಕ ಘಟಕದ ಕಾರ್ಯಗಳು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ADVERTISEMENT

ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಪ್ರತಿಭಾ ಕಾರಂಜಿ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಆಟೋಟ ಸ್ಪರ್ಧೆಗಳ ಆಯೋಜನೆಯಲ್ಲಿ ಸಕ್ತಿಯವಾಗಿ ಭಾಗವಹಿಸಿ ಕಾರ್ಯ ಕ್ರಮದ ಯಶಸ್ಸಿಗೆ ಶ್ರಮಿಸುವ ಎನ್‌ ಎಸ್‌ಎಸ್‌ ತಂಡದ ಕಾರ್ಯಗಳು ಪ್ರಶಸ್ತಿ ಸಿಗುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ಈ ಸಾಧನೆ ಮತ್ತು ಯೋಜನಾಧಿಕಾರಿ ಅವರ ಈ ಯಶಸ್ಸಿಗೆ ಕಾಲೇಜಿನ ಅಭಿ ವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಉಪಪ್ರಾಂಶುಪಾಲರು, ಅಧ್ಯಾಪಕ ವರ್ಗ, ಪೋಷಕರು ಮತ್ತು ಜನಪ್ರತಿ ನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.