ADVERTISEMENT

‘ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು’

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 8:56 IST
Last Updated 17 ಜನವರಿ 2017, 8:56 IST
‘ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು’
‘ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು’   

ಬ್ರಹ್ಮಾವರ : ಕೋಟ ಸಿಟಿ ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಕಾರ್ಕಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ವಾಷ್ ಇನ್ ಸ್ಕೂಲ್’ ವಿಶೇಷ ಕಾರ್ಯಕ್ರಮ ನಡೆಯಿತು.

ಕೋಟ ಸಿಟಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಡಾ.ಗಣೇಶ್ ಯು. ಮಾತನಾಡಿ, ಮಕ್ಕಳು ಆರೋಗ್ಯವಂತರಾಗಿರಬೇಕೆಂದರೆ ಅವರು ವಾಸಿಸುವ ಮನೆಯ ಪರಿಸರ, ಶಾಲೆಯ ಪರಿಸರ ಸ್ವಚ್ಛವಾಗಿರುವುದು ಅತ್ಯಂತ ಅಗತ್ಯ. ಕೊಳೆ ಕೈಯಲ್ಲಿ ಆಹಾರ ಸೇವನೆ ಮಾಡುವುದು ರೋಗಗಳಿಗೆ ದಾರಿ ಮಾಡಿಕೊಟ್ಟಂತೆ. ಆಹಾರ ಸೇವಿಸುವ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದುಕೊಂಡು ಆಹಾರ ಸೇವನೆ ಮಾಡಿದರೆ ಅನೇಕ ಕಾಯಿಲೆಗಳು ಬಾರದಂತೆ ಎಚ್ಚರ ವಹಿಸಬಹುದು ಎಂದು ಹೇಳಿದರು.

ರೋಟರಿ ಅಧ್ಯಕ್ಷ ನಿತ್ಯಾನಂದ ನಾಯರಿ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷ ಸುಬ್ರಾಯ ಆಚಾರ್, ಸದಸ್ಯರಾದ ರಾಧಾಕೃಷ್ಣ, ಸುರೇಶ್ ಬಂಗೇರ, ಶಾಲಾ ಶಿಕ್ಷಕಿಯರಾದ ಲೀಲಾವತಿ ಮತ್ತು ಭಾಗೀರಥಿ ಉಪಸ್ಥಿತರಿದ್ದರು.

ಮಕ್ಕಳಿಗೆ ಸ್ವಚ್ಛವಾಗಿ ಕೈ ತೊಳೆಯುವುದರ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಶಾಲೆಯ ಎಲ್ಲ ಮಕ್ಕಳಿಗೆ ಉಚಿತವಾಗಿ ಸೋಪ್, ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.