ADVERTISEMENT

ಮನೆಯಂಗಳದಲ್ಲಿ ಬೆಳೆಸಿದ ತರಕಾರಿ ಆರೋಗ್ಯವೃದ್ಧಿಗೆ ಪೂರಕ: ಧನಂಜಯ

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:42 IST
Last Updated 27 ಮೇ 2017, 6:42 IST

ಉಡುಪಿ: ಮನೆಯ ಕೈತೋಟದಲ್ಲಿ ಬೆಳೆಸಿದ ತರಕಾರಿಗಳು ಆರೋಗ್ಯವೃದ್ಧಿಗೆ ಪೂರಕ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞ ಡಾ. ಧನಂಜಯ ಹೇಳಿದರು.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಒಂದು ದಿನದ ಕೈ ತೋಟ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಾವಯವ ಗೊಬ್ಬರ ಬಳಸಿ ತರಕಾರಿ ಬೆಳೆಸಲು ಹೆಚ್ಚಿನ ಜನರು ಆಸಕ್ತಿ ತೋರುತ್ತಿರು ವುದು ಒಳ್ಳೆಯ ಬೆಳವಣಿಗೆ. ಮನೆಯ ಲ್ಲಿಯೇ ಬೆಳೆಸಿದ ತಾಜಾ ತರಕಾರಿಯನ್ನು ದೈನಂದಿನ ಆಹಾರದಲ್ಲಿ ಉಪಯೋಗಿ ಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಮಳೆಗಾಲಕ್ಕಿಂತಲೂ ಮೊದಲು ಮನೆಯ ಕೈತೋಟದಲ್ಲಿ ತರಕಾರಿ ಗಿಡಗ ಳನ್ನು ಬೆಳೆಸುವ ಯೋಜನೆ ಹಾಕಿಕೊ ಳ್ಳಬೇಕು. ಮಳೆ ಸುರಿಯಲು ಆರಂಭಿಸಿದ ನಂತರ ಗಿಡಗಳ ಬೆಳವಣಿಗೆಗೆ ಪೂರಕ ವಾತಾವರಣ ಲಭ್ಯವಾಗುತ್ತದೆ. ತರಕಾರಿ ಗಿಡಗಳನ್ನು ಬೆಳೆಸುವಾಗ ಆಧುನಿಕ ಕೃಷಿ ಪದ್ಧತಿಯ ಕೆಲವು ಅಂಶಗಳನ್ನು ಗಮ ನದಲ್ಲಿಟ್ಟುಕೊಂಡಲ್ಲಿ ಉತ್ತಮ ತರಕಾರಿ ನಮ್ಮ ಮನೆಯ ಅಂಗಳದಲ್ಲಿಯೇ ಸಿಗುತ್ತದೆ ಎಂದು ಹೇಳಿದರು.

ADVERTISEMENT

ಬಿವಿಟಿಯ ಹಿರಿಯ ಸಲಹೆಗಾರ ಬಿ. ಸೀತಾರಾಮ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಚ್‌.ಎಸ್‌. ಚೈತನ್ಯ ಉಪಸ್ಥಿತರಿದ್ದರು. ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ. ಲಕ್ಷ್ಮೀಬಾಯಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಕಟ್ಗೇರಿ ವಂದಿಸಿದರು.

ಈ ಸಂದರ್ಭದಲ್ಲಿ ಕಾರ್ಯಾಗಾರ ದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳಿಗೆ ಉಚಿತ ತರಕಾರಿ ಬೀಜಗಳನ್ನು ವಿತರಿ ಸಲಾಯಿತು. ಜಿಲ್ಲೆಯ ವಿವಿಧ ಕಡೆಗ ಳಿಂದ ಸುಮಾರು 90ಕ್ಕೂ ಹೆಚ್ಚಿನ ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.