ADVERTISEMENT

‘ಯಕ್ಷಗಾನಕ್ಕೆ ನವರಸಗಳನ್ನು ತುಂಬಿದ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:08 IST
Last Updated 24 ಮಾರ್ಚ್ 2017, 5:08 IST

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರು ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದರು. ಯಕ್ಷಗಾನಕ್ಕೆ ನವರಸಗಳನ್ನು ತುಂಬಿದ ಕಲಾವಿದ ಅವರಾಗಿದ್ದರು ಎಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾ ನದ ಪ್ರಧಾನ ಅರ್ಚಕ ಹರಿ ನಾರಾಯಣದಾಸ ಆಸ್ರಣ್ಣ ಹೇಳಿದರು.

ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಹಾಗೂ ಹೆರಿಟೇಜ್ ವಿಲೇಜ್‌ನ ನಿರ್ಮಾತೃ ವಿಜಯನಾಥ ಶೆಣೈ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.

ಎಲ್ಲ ಪದ್ಯಗಳನ್ನು ಅವರು ಬಾಯಿ ಪಾಠ ಮಾಡಿಕೊಂಡಿದ್ದರು. ಕಟೀಲು ಮೇಳದಲ್ಲಿ ಅವರು ಒಟ್ಟು 49 ವರ್ಷಗಳ ತಿರುಗಾಟ ಮಾಡಿದರು ಎಂದರು.
ಯಕ್ಷಗಾನ ಕಲಾರಂಗದ ಕಾರ್ಯ ದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನ ಕಲಾರಂಗದ ಎಲ್ಲ ಸಮಾ ವೇಶಗಳಿಗೂ ಅವರು ಬರುತ್ತಿದ್ದರು.

ಕಲಾರಂಗದ ಕೆಲಸವನ್ನು ಅವರು ತುಂಬಾ ಮೆಚ್ಚಿಕೊಂಡಿದ್ದರು. ಗಂಗಯ್ಯ ಶೆಟ್ಟಿ ಅವರಿಗೆ ಬಿ.ಬಿ. ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ನೆನಪು ಮಾಡಿಕೊಂಡರು.

ವಿಜಯನಾಥ ಶೆಣೈ ಅವರ ಬಗ್ಗೆ ಮಾತನಾಡಿದ ಕಲಾವಿದ ಪುರುಷೋ ತ್ತಮ ಅಡ್ವೆ, ವಿಜಯನಾಥ ಶೆಣೈ ಅವರು ಸಾಮಾನ್ಯರಂತೆ ಕಾಣುತ್ತಿದ್ದರೂ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.

ಅವರು ಹಣಕ್ಕಾಗಿ ಹೆರಿಟೇಜ್ ವಿಲೇಜ್ ನಿರ್ಮಾಣ ಮಾಡಲಿಲ್ಲ. ಜನರ ಜೀವನ ವನ್ನು ಅವರು ಅಧ್ಯಯನ ಮಾಡುತ್ತಿ ದ್ದರು. ಪಾರಂಪರಿಕ ಕಟ್ಟಡಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಯಾರಾದರೂ ಮನೆ ಕೆಡವಲು ಮುಂ ದಾದರೆ ಅವರ ಮನವೊಲಿಸಿ ಮನೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದರು.

ಸಂಗೀತಾ ಸಭಾ ಆರಂಭಿಸಿದ ವಿಜಯನಾಥ ಶೆಣೈ ಅವರು ದಿಗ್ಗಜ ಸಂಗೀತ ಕಲಾವಿದರನ್ನು ಉಡುಪಿಗೆ ಆಹ್ವಾನಿಸಿದರು. ಮಹಾನ್‌ ಕಲಾವಿದ ರನ್ನು ನೋಡುವ ಅವಕಾಶವನ್ನು ಉಡುಪಿ ಜನರಿಗೆ ಕಲ್ಪಿಸಿದರು ಎಂದು ಹೇಳಿದರು. ಕೆ.ಪಿ. ರಾವ್‌, ಪುಂಡರೀಕಾಕ್ಷ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT