ADVERTISEMENT

ರಾಜೀವ ಗಾಂಧಿ ಪುಣ್ಯತಿಥಿ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2016, 4:34 IST
Last Updated 28 ಮೇ 2016, 4:34 IST

ಉಡುಪಿ: ಇಂದು ಭಾರತ ದೇಶ ಅಭಿವೃದ್ಧಿ ಹೊಂದಿದ ದೇಶಗಳಿಗೆ ಪೈಪೋಟಿ ನೀಡುವಷ್ಟು ಬಲಿಷ್ಠವಾಗಿ ದ್ದರೆ, ರಾಜೀವ ಗಾಂಧಿ  ಪ್ರಧಾನಿಯಾಗಿ ದ್ದಾಗ ಮಾಹಿತಿ ತಂತ್ರ ಜ್ಞಾನವನ್ನು ಅಳವಡಿಸಲು ತೆಗೆದು ಕೊಂಡ ದಿಟ್ಟ ನಿರ್ಧಾರವೇ ಕಾರಣ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಹಾಗೂ ವಿವಿಧ ಘಟಕಗಳ ವತಿಯಿಂದ ಉಡುಪಿ ಕಾಂಗ್ರೆಸ್‌ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ 25ನೇ ಪುಣ್ಯತಿಥಿ ಆಚರಣೆ ಕಾರ್ಯಕ್ರಮದಲ್ಲಿ ಮಾತ ನಾಡಿ, ಯುವಕರಿಗೆ ಸಾಮಾಜಿಕ ಪ್ರಜ್ಞೆ ಮೂಡಬೇಕೆಂಬ ಉದ್ದೇಶದಿಂದ 18 ವರ್ಷಕ್ಕೆ ಮತದಾನದ ಹಕ್ಕನ್ನು ಅವರು ನೀಡಿದರು. ಯುವಕರಲ್ಲಿ ರಾಜಕೀಯ ಜಾಗೃತಿ ಮೂಡಲು ಈ ನಿರ್ಧಾರ ಕಾರಣವಾಯಿತು ಎಂದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿ ಬಿ. ನರಸಿಂಹಮೂರ್ತಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ಮತ್ತು ರಾಜೀವ ಗಾಂಧಿ ಈ ದೇಶಕ್ಕೆ ನೀಡಿದ ಕೊಡುಗೆಗಳನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದರು.

ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಕಾರ್ಯಕ್ರವನ್ನು ಉದ್ಘಾಟಿಸಿದರು. ಪಕ್ಷದ ಮುಖಂಡರಾದ ದಿನೇಶ್‌ ಪುತ್ರನ್‌, ವೆರೋನಿಕಾ ಕರ್ನೇಲಿಯೊ, ಹರೀಶ್‌ ಕಿಣಿ, ಸತೀಶ್‌ ಅಮೀನ್‌ ಪಡುಕೆರೆ, ಭಾಸ್ಕರ ರಾವ್‌ ಕಿದಿಯೂರು, ಜ್ಯೋತಿ ಹೆಬ್ಬಾರ್‌, ಪ್ರಖ್ಯಾತ್‌ ಶೆಟ್ಟಿ, ಮನೋಜ್‌ ಕರ್ಕೇರ, ರಮೇಶ್‌ ಕಾಂಚನ್‌, ನಾರಾಯಣ ಕುಂದರ್‌, ಶಾಂತಾರಾಮ್‌ ಸಾಲ್ವಾಂಕರ್‌, ಪ್ರಶಾಂತ ಪೂಜಾರಿ, ಸುಜಯ ಪೂಜಾರಿ, ಗಣೇಶ್‌ ನೆರ್ಗಿ, ಯಜ್ಞೇಶ್‌ ಆಚಾರ್ಯ, ಸದಾಶಿವ ಕಟ್ಟೆಗುಡ್ಡೆ, ಲಕ್ಷಣ ಪೂಜಾರಿ, ಗಣಪತಿ ಶೆಟ್ಟಿಗಾರ್‌ ಉಪಸ್ಥಿತರಿದ್ದರು. ಜನಾರ್ದನ ಭಂಡಾರ್ಕರ್‌ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.