ADVERTISEMENT

ವೃಂದಾವನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:06 IST
Last Updated 24 ಮಾರ್ಚ್ 2017, 5:06 IST

ಕುಂದಾಪುರ: ಇಲ್ಲಿನ ವ್ಯಾಸರಾಜ ಮಠದಲ್ಲಿ ತಾಲ್ಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ನವೀಕೃತಗೊಂಡ ರಾಮಚಂದ್ರತೀರ್ಥ ಹಾಗೂ ಹಯಗ್ರೀವ ತೀರ್ಥ ಸ್ವಾಮೀಜಿಗಳ ವೃಂದಾವನಗಳ ಲೋಕಾರ್ಪಣೆಯನ್ನು ವ್ಯಾಸರಾಜ ಮಠದ ಮಠಾಧೀಶ ಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿ ನೆರವೇರಿಸಿದರು.

ವಿಜಯ ಪೆಜತ್ತಾಯ ಇವರ ನೇತೃತ್ವದಲ್ಲಿ ವೃಂದಾವನಗಳ ಸ್ಥಾನ ಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೊಘ್ನ ಹೋಮ, ಪುಣ್ಯಾಹವಾಚನ, ವೃಂದಾವನ ಶುದ್ಧಿ, ಪವಮಾನ ಹೋಮ, ವಿರಾಜಮಂತ್ರ ಹೋಮ, ನವಕ ಪ್ರಧಾನ ಹೋಮ, ಆಶ್ಲೇಷಾ ಬಲಿ ಸೇರಿದಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಸಮಾಜದ ವರಿಂದ ಗುರುಗಳ ಪಾದಪೂಜೆ, ಹಾಗೂ ಗುರುಗಳಿಂದ ಮುದ್ರಾಧಾರಣೆ ಕಾರ್ಯಕ್ರಮ ನಡೆಸಲಾಯಿತು.

ತಾಲ್ಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ  ಶ್ರೀನಿವಾಸ ಗಾಣಿಗ, ಕಾರ್ಯ ದರ್ಶಿ ಶಿವಾನಂದ ರಾವ್, ಕೋಶಾಧಿ ಕಾರಿ ಶಂಕರನಾರಾಯಣ ಗಾಣಿಗ, ಉದ್ಯಮಿಗಳಾದ ಹಳ್ಳಿಮನೆ ಸಂಜೀವ ರಾವ್, ಜನಾರ್ದನ್‌ ರಾವ್ ಬೆಂಗ ಳೂರು, ಬೆಂಗಳೂರಿನ ವೇಣುಗೋಪಾಲ ಕೃಷ್ಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಗೋಪಾಲ ಕೃಷ್ಣ ,

ಬೆಂಗಳೂರು ಸೋಮ ಕ್ಷತ್ರೀಯ ಗಾಣಿಗ ಸೇವಾ ಸಂಘದ ಅಧ್ಯಕ್ಷ ಎಚ್.ಟಿ.ನರಸಿಂಹ, ಗೌರವಧ್ಯಕ್ಷ ಬಿ.ಎಸ್.ಮಂಜುನಾಥ್, ಸಮಾಜದ ಪ್ರಮುಖರಾದ ಸುಧೀರ್ ಪಂಡಿತ್, ಕೆ.ಎಂ.ಶೇಖರ್‌, ಕೆ.ಎಂ.ಲಕ್ಷ್ಮಣ, ಕೆ.ಎಂ.ಶೇಖರ, ಜಿ.ಆರ್. ಚಂದ್ರಯ್ಯ ಇದ್ದರು.
ಸಭಾ ಕಾರ್ಯಕ್ರಮದ ಬಳಿಕ  ಬಿ.ಸಿ.ರಾವ್ ಶಿವಪುರ ಇವರಿಂದ ಹರಿಕಥೆ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.