ADVERTISEMENT

ಶಿರ್ವ: ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:52 IST
Last Updated 9 ನವೆಂಬರ್ 2017, 9:52 IST

ಶಿರ್ವ: ಬಂಟಕಲ್ಲಿನ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ವಿಭಾಗ ಹಾಗೂ ರೋಟರ್‍ಯಾಕ್ಟ್ ಘಟಕಗಳ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯು ಕಾಲೇಜಿನ ಆವರಣದಲ್ಲಿ ಈಚೆಗೆ ನಡೆಯಿತು.

ಕಾಲೇಜಿನ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಮಾತನಾಡಿ, ಕನ್ನಡದಲ್ಲಿ ಮಾತನಾಡುವಾಗ ಜನರು ಆಂಗ್ಲ ಮತ್ತು ಇತರ ಭಾಷೆಗಳ ಪದಗಳನ್ನು ಉಪಯೋಗಿಸುತ್ತಾರೆ.

ಅಂದ ಮೇಲೆ ಇತರ ಭಾಷೆ ಮಾತನಾಡುವಾಗ ಕನ್ನಡ ಪದಗಳ ಬಳಕೆ ಏಕೆ ಬಳಸಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ರೋಟರ್‍ಯಾಕ್ಟ್ ಘಟಕದ ಸಂಯೋಜಕ ಕಿಶೋರ್ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಸ್ಥೆಯ ಸಾಂಸ್ಕೃತಿಕ ಸಂಯೋಜಕ, ಮೆಕ್ಯಾನಿಕಲ್ ವಿಭಾಗದ ಅನಂತೇಶ್ ರಾವ್ ಉಪಸ್ಥಿತರಿದ್ದರು. ಸಹನಾ ಉಡುಪ ಹಾಗೂ ಶ್ರೇಯಾ ಭಟ್ ನಾಡಗೀತೆ ಹಾಡಿದರು. ತನುಷಾ ಶೆಟ್ಟಿ ನಿರೂಪಿಸಿದರು. ಶ್ರೀನಾಥ್ ಪಾಟ್ಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.