ADVERTISEMENT

ಶೀಘ್ರ ಪೂರ್ಣಕ್ಕೆ ಆಗ್ರಹ

ಮಲ್ಪೆ – ಪಡುಕೆರೆ ಸಂಪರ್ಕ ಸೇತುವೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 5:25 IST
Last Updated 28 ಜನವರಿ 2017, 5:25 IST
ಶೀಘ್ರ ಪೂರ್ಣಕ್ಕೆ ಆಗ್ರಹ
ಶೀಘ್ರ ಪೂರ್ಣಕ್ಕೆ ಆಗ್ರಹ   

ಉಡುಪಿ: ಮಲ್ಪೆ–ಪಡುಕೆರೆ ಸಂಪರ್ಕ ಸೇತುವೆ ಕಾಮಗಾರಿಯನ್ನು 15 ದಿನಗಳ ಅವಧಿಯೊಳಗೆ ಪೂರ್ಣಗೊಳಿಸಿ, ಸಾರ್ವ ಜನಿಕರ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೇತುವೆ ಕಾಮಗಾರಿಗೆ 2013ರ ಜನವರಿ 21 ರಂದು ಬಿಜೆಪಿ ಆಡಳಿತಾವಧಿಯಲ್ಲಿಯೇ ಶಿಲಾನ್ಯಾಸ ಮಾಡಲಾಗಿತ್ತು. ಹೆಚ್ಚುವರಿ ಅನುದಾನ ಸೇರಿದಂತೆ ಒಟ್ಟು ₹13.50 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಯೋಜನೆಯ ನೀಲನಕ್ಷೆಯಂತೆ 2015ರ ಜನವರಿ ವೇಳೆಗೆ ಕಾಮಗಾರಿ ಪೂರ್ಣ ಗೊಳ್ಳಬೇಕಿತ್ತು. ಆದರೆ, 2017ರ ಜನ ವರಿ ತಿಂಗಳು ಕಳೆಯುತ್ತಾ ಬಂದಿದ್ದರೂ ಕಾಮಗಾರಿ ಮುಕ್ತಾಯಗೊಂಡಿಲ್ಲ. ಇದಕ್ಕೆ ಸರ್ಕಾರ ಮತ್ತು ಅಧಿಕಾರಗಳ ನಿರ್ಲಕ್ಷ್ಯತನ ಹಾಗೂ ಗುತ್ತಿಗೆದಾರರ ಅಸಹಕಾರವೇ ಮುಖ್ಯ ಕಾರಣ ಎಂದು ದೂರಿದರು.

ಇತ್ತೀಚೆಗೆ ಸೇತುವೆಯ ಕಾಮಗಾರಿ ಯನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು 45 ದಿನಗಳೊಳಗೆ ಕಾಮಗಾರಿ ಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದರು.ಅವರು ನೀಡಿದ ಗಡುವು ಮುಗಿದು 55 ದಿನಗಳು ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೇವಲ ಒಂದು ವಾರಗಳ ಅವಧಿಯ ಕಾಮಗಾರಿ ಬಾಕಿ ಇದೆ.

ಆದರೆ, ಸಚಿ ವರು ರಾಜಕೀಯ ದುರುದ್ದೇಶದಿಂದ ಸೇತುವೆಯ ಉದ್ಘಾಟನೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಕ್ಷಣ ಸೇತುವೆಯನ್ನು ಉದ್ಘಾಟನೆ ಮಾಡಿದರೆ, ಜನರು ಮರೆತು ಬಿಡುತ್ತಾರೆ ಎಂಬ ದುರಾಲೋಚನೆಯಿಂದ ಸಚಿ ವರು ಸೇತುವೆಯ ಉದ್ಘಾಟನೆಯನ್ನು ಮುಂದೂಡುತ್ತಿದ್ದಾರೆ. ಇಂತಹ ಕೀಳು ಅಭಿರುಚಿಯನ್ನು ಬಿಟ್ಟು, ಮೊದಲು ಸೇತುವೆಯನ್ನು ಸಾರ್ವಜನಿಕರ ಸಂಚಾ ರಕ್ಕೆ ಮುಕ್ತವಾಗಿಸಲಿ. ಆ ನಂತರ ಬೇಕಾ ದರೂ ಅವರು ಸೇತುವೆಯನ್ನು ಉದ್ಘಾ ಟನೆ ಮಾಡಲಿ ಎಂದರು. 

ಗುತ್ತಿಗೆದಾರರಿಗೆ ನೀಡಲು ಬಾಕಿ ಇರುವ ₹3.50 ಕೋಟಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಿ, ಜನರಿಗೆ ತೀವ್ರ ಅಗತ್ಯವಾಗಿರುವ ಮಲ್ಪೆ–ಪಡುಕರೆ ಸಂಪರ್ಕ ಸೇತುವೆಯನ್ನು ಶೀಘ್ರವೇ ಸಂಚಾ ರಕ್ಕೆ ಮುಕ್ತಗೊಳಿಸಬೇಕು. ಇದಕ್ಕಾಗಿ 15 ದಿನಗಳ ಗಡುವು ನೀಡುತ್ತೇವೆ. ಆ ಅವ ಧಿಯೊಳಗೆ ಸೇತುವೆ ಕಾಮಗಾರಿ ಮುಗಿ ಯದಿದ್ದರೆ, ಪಡುಕೆರೆಯ ನಾಗರಿಕ ರೊಂದಿಗೆ ಸೇರಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಂಬಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್‌ ಸಾಲಿಯಾನ್‌, ಕಡೆ ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ನಾಥ್‌ ಕೋಟ್ಯಾನ್‌, ಬಿಜೆಪಿ ಮುಖಂಡ ಪ್ರಭಾಕರ ಪೂಜಾರಿ, ಪಡುಕೆರೆ ನಿವಾಸಿ ರಾಮ ಕಾಂಚನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.