ADVERTISEMENT

ಸುಳ್ಳು ಸಂದೇಶಕ್ಕೆ ಕಿವಿಗೊಡದಿರಿ:ಪಾಷಾ

ದಡಾರ– ರೆಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಕಲ ಸಿದ್ಧತೆ: ಡಿಎಚ್ಒ ಡಾ. ರೋಹಿಣಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 4:56 IST
Last Updated 4 ಫೆಬ್ರುವರಿ 2017, 4:56 IST
ಉಡುಪಿ: ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಇದೇ 7ರಿಂದ ಮಾರ್ಚ್‌ 1ರವರೆಗೆ ನಡೆಯಲಿದ್ದು 9ತಿಂಗಳಿನಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಲಸಿಕೆ ಹಾಕಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ. ರೋಹಿಣಿ ಮನವಿ ಮಾಡಿದರು.
 
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕಾ ಕಾರ್ಯ ಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದ್ದು ಒಟ್ಟು ನಾಲ್ಕು ತಂಡಗಳು ಇದಕ್ಕಾಗಿ ಕೆಲಸ ಮಾಡಲಿವೆ. ಸ್ಟಾಫ್‌ ನರ್ಸ್‌, ಆಶಾ ಕಾರ್ಯಕರ್ತೆಯರು, ಅಂ ಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರು ಕೆಲಸ ಮಾಡುವರು.
 
ಅಗತ್ಯವಿರುವಷ್ಟು ಲಸಿಕೆಗಳು ಈಗಾಗಲೇ ಬಂದಿವೆ ಮತ್ತು ಸಿರಿಂಜ್ ಹಾಗೂ ಇನ್ನಿತರ ಪರಿಕರಗಳೂ ಸಾಕಷ್ಟು ಪ್ರಮಾ ಣದಲ್ಲಿ ಲಭ್ಯವಿದೆ. ಸುರಕ್ಷತೆಯ ದೃಷ್ಟಿ ಯಿಂದ ಒಮ್ಮೆ ಬಳಸಿದ ಸಿರಿಂಜ್ ಅನ್ನು ಮತ್ತೊಮ್ಮೆ ಬಳಸುವುದಿಲ್ಲ, ಇದಕ್ಕೆ ಪೂರಕವಾಗಿ ಒಮ್ಮೆ ಮಾತ್ರ ಬಳಸಲು ಸಾಧ್ಯವಿರುವಂತಹ ಸಿರಿಂಜ್‌ಗಳನ್ನು ಬಳಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
 
ಲಸಿಕೆಗೆ ಅರ್ಹರಿರುವ ಮಕ್ಕಳಲ್ಲಿ ಶೇ 70ರಷ್ಟು ಮಕ್ಕಳು ಶಾಲೆಗಳಲ್ಲಿಯೇ ಸಿಗುವುದರಿಂದ ಮೊದಲ ಒಂದು ವಾರಗಳ ಕಾಲ ಶಾಲೆಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಆ ನಂತರ ಅಲ್ಲಲ್ಲಿ ಬೂತ್‌ ಗಳನ್ನು ತೆರೆದು ಲಸಿಕೆ ಹಾಕಲಾಗುತ್ತದೆ. ತಂಡವೊಂದು ದಿನವೊಂದಕ್ಕೆ 200 ಮಕ್ಕಳಿಗೆ ಮಾತ್ರ ಲಸಿಕೆ ಹಾಕಲಿದೆ, ಹೆಚ್ಚಿನ ಒತ್ತಡವನ್ನು ಸಿಬ್ಬಂದಿ ಮೇಲೆ ಹಾಕಿದರೆ ಅದರಿಂದ ಏನಾದರೂ ವ್ಯತಿ ರಿಕ್ತ ಪರಿಣಾಮ ಆಗಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಒ ಟ್ಟಾರೆ ಈ ಅಭಿಯಾನ ಸಂಪೂರ್ಣ ಯಶ ಸ್ವಿಯಾಗುವ ವಿಶ್ವಾಸ ಇದೆ ಎಂದರು.
 
ಮಕ್ಕಳ ತಜ್ಞ ಡಾ. ಅಮರನಾಥ ಶಾಸ್ತ್ರಿ, ಡಾ. ಬಿ.ಜಿ. ನಾಯಕ್‌, ಡಾ. ಎಂ.ಜಿ. ರಾಮ ಇದ್ದರು.
 
**
ದಡಾರ– ರುಬೆಲ್ಲಾ ಲಸಿಕೆ ಗುರಿ ಎಷ್ಟು, ಅಭಿಯಾನ ಹೇಗೆ?
* ಜಿಲ್ಲೆಯಲ್ಲಿರುವ 9ತಿಂಗಳಿಂದ 15 ವರ್ಷದೊಳಗಿನ ಮಕ್ಕಳ ಸಂಖ್ಯೆ– 2,41,392 
  ಶಾಲೆಗೆ ಹೋಗುತ್ತಿರುವ ಮಕ್ಕಳು ಸಂಖ್ಯೆ –  1,72,771 
 
* ಈಗಾಗಲೇ ಉಡುಪಿಗೆ ಬಂದಿರುವ ಲಸಿಕೆ ಸಂಖ್ಯೆ – 1,40,000  
  ಜಿಲ್ಲೆಯಾದ್ಯಂತ ಇರುವ ಒಟ್ಟು ಬೂತ್‌ಗಳು– 2,993 
 
**
ಕಡ್ಡಾಯವಾಗಿ ಲಸಿಕೆ ಹಾಕಿಸಿ
ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು ಮುಸ್ಲಿಮರು ಹಾಕಿಸಿಕೊಳ್ಳಬಾರದು ಎಂಬ ಸಂದೇಶಗಳು ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
 
ಮುಸ್ಲಿಮರು ಲಸಿಕೆಯಿಂದ ವಂಚಿತರಾಗಬೇಕು ಎಂಬ ಉದ್ದೇಶದಿಂದ ಇಂತಹ ಸುಳ್ಳು ಸಂದೇಶಗಳನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ಆದ್ದರಿಂದ ಯಾವುದೇ ಅಡ್ಡಪರಿಣಾಮ ಇಲ್ಲದ ಮತ್ತು ಯಾವುದೇ ರೀತಿಯಿಂದಲೂ ದುಷ್ಪರಿಣಾಮ ಬೀರದ ಲಸಿಕೆಯನ್ನು ಎಲ್ಲ ಮುಸ್ಲಿಮರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಿ ಮಾರಣಾಂತಿಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಿ ಎಂದು ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಮೊಯಿದ್ದೀನ್ ಪಾಷಾ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.