ADVERTISEMENT

ಸುಸಜ್ಜಿತ ನಳ, ಬೋರ್ಡ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2016, 4:55 IST
Last Updated 2 ಜುಲೈ 2016, 4:55 IST

ನಾವುಂದ (ಬೈಂದೂರು): ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳ ನೆರವಿನಿಂದ ನಿರ್ಮಿಸಿದ ಸುಸಜ್ಜಿತ ನಳ ಹಾಗೂ ತರಗತಿ ಗ್ರೀನ್ ಬೋರ್ಡ್‌ಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ ಬುಧವಾರ ಉದ್ಘಾಟಿಸಿ, ಶಿಕ್ಷಣ ಸಂಸ್ಥೆಗೆ ನೀಡುವ ಕೊಡುಗೆಗಳಿಗೆ ಹೆಚ್ಚಿನ ಸಾರ್ಥಕತೆ ಇದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸದಸ್ಯರಾದ ಶ್ಯಾಮಲಾ ಕುಂದರ್, ಜಗದೀಶ ಪೂಜಾರಿ ಇದ್ದರು. ದಾನಿಗಳಾದ ಮಂಗಳೂರಿನ ವಿನಾಯಕ ಅಸೋಸಿಯೇಟ್ಸ್‌ನ ಪ್ರಮೋದ ಪೂಜಾರಿ, ಸ್ಥಳೀಯರಾದ ಎನ್. ನರಸಿಂಹ ಕಾರಂತ, ಡಾ. ಕೆ. ವಿ. ನಂಬಿಯಾರ್, ಹಕ್ಕಾಡಿಮನೆ ಮುತ್ತು ಪೂಜಾರಿ, ಎಕ್ಸ್ಟ್ರೀಮ್ ಬಾಡಿ ಬಿಲ್ಡರ್ಸ್‌ನ ಲಿಕ್ಸನ್ ಝೇವಿಯರ್ ಅವರನ್ನು ಸನ್ಮಾನಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ಅರುಣಕುಮಾರ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಜಿ. ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ನಯನಾ ವಂದಿಸಿದರು.ವಿಶಾಲಾಕ್ಷಿ ನಿರೂಪಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಡಿ, ಸದಸ್ಯರಾದ ರಾಮ ಖಾರ್ವಿ, ಗಣೇಶ ಪೂಜಾರಿ, ದಿನೇಶ ಗಾಣಿಗ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ ದೇವಾಡಿಗ, ಸದಸ್ಯರು, ಖಂಬದಕೋಣೆ ವೃತ್ತದ ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರ, ಸಮೂಹ ಸಂಪನ್ಮೂಲ ವ್ಯಕ್ತಿ ಸುನಿಲ್ ಶೆಟ್ಟಿ, ಶಿಕ್ಷಕಿಯರಾದ ಶಶಿಕಲಾ, ಲೀಲಾ, ಪ್ರತೀಕಾ, ಚೈತ್ರಾ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.