ADVERTISEMENT

‘ಸೋಡ್ತಿ ಹಬ್ಬಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 6:03 IST
Last Updated 21 ಜನವರಿ 2017, 6:03 IST
‘ಸೋಡ್ತಿ ಹಬ್ಬಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ’
‘ಸೋಡ್ತಿ ಹಬ್ಬಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ’   

ಕಾರ್ಕಳ:  ತುಳುನಾಡಿನ ಜಿಲ್ಲೆಗಳಲ್ಲಿರುವ ಪ್ರತೀ ಗ್ರಾಮಗಳ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಉತ್ಸವ ಮುಗಿದ ನಂತರ ನಡೆಯುವ ಸೋಡ್ತಿ (ಕೋಳಿ ಅಂಕ)ಗೆ ಅಡ್ಡಿ ಪಡಿ ಸುವುದು ಸರಿಯಲ್ಲ ಎಂದು ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಇದು ಪಾರಂಪರಿಕವಾಗಿ ನಡೆದು ಕೊಂಡು ಬಂದಿರುವ ಧಾರ್ಮಿಕ ನಂಬಿ ಕೆಯ ಆಚರಣೆ. ಹೊಸದಾಗಿ ಪ್ರಾರಂಭಿ ಸಿದ ಆಟ ಅಲ್ಲ. ಇದು ಯಾವಾಗಿನಿಂದ ಪ್ರಾರಂಭವಾಗಿದೆ ಎಂಬುದಕ್ಕೆ ಇತಿಹಾ ಸದಲ್ಲಿ ದಾಖಲೆಯೂ ಸಿಕ್ಕಿಲ್ಲ.

ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆಯು ಅನವಶ್ಯಕವಾಗಿ ಅಡ್ಡಿ ಪಡಿಸುತ್ತಿರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಆದ್ದರಿಂದ ಪಾರಂಪರಿಕವಾಗಿ ನಡೆದು ಬಂದಿರುವ ಈ ಧಾರ್ಮಿಕ ಕಾರ್ಯಕ್ರ ಮಕ್ಕೆ ಅಡ್ಡಿ ಪಡಿಸಿ ತೊಂದರೆ ಕೊಡ ಬಾರದು. ಇಲ್ಲಿ ಹರಕೆ ರೂಪದಲ್ಲಿ ಕೋಳಿ ಗಳೊಂದಿಗೆ ಭಾಗವಹಿಸುವ ಮಂದಿ ಯೂ ಇರುತ್ತಾರೆ.

ಉತ್ಸವದ ಪ್ರದೇ ಶದಲ್ಲಿ ಮದ್ಯಪಾನ ನಡೆಸುವವರ ಮತ್ತು ಜೂಜಾಡುವವರ ವಿರುದ್ಧ ಕ್ರಮ ಕೈಗೊ ಳ್ಳಲು ನಮ್ಮ ಅಭ್ಯಂತರ ಇರುವುದಿಲ್ಲ. ನಿಗದಿತ ಅವಧಿಯಲ್ಲಿ ಸಾಮಾಜಿಕ ಅಶಾಂತಿಗೆ ಕಾರಣವಾಗದ ರೀತಿಯಲ್ಲಿ ಅವಕಾಶ ಮಾಡಿಕೊಡುವುದರಿಂದ ಜನರ ಧಾರ್ಮಿಕ  ಭಾವನೆಗಳಿಗೆ ಬೆಲೆ ಕೊಟ್ಟಂತಾಗುತ್ತದೆ. ಹಾಗಾಗಿ, ಅನವಶ್ಯಕ ವಾಗಿ ಅಡ್ಡಿಪಡಿಸದೆ ಅನುಮತಿ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT