ADVERTISEMENT

ಹಿಂದೂ ಕೊಲೆಗಳ ಹಿಂದೆ ಜೆಹಾದಿ ಭಯೋತ್ಪಾದನೆ

ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಉಲ್ಲಾಸ್ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 8:49 IST
Last Updated 13 ಜುಲೈ 2017, 8:49 IST

ಪುತ್ತೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಯ ಹಿಂದೆ ಜೆಹಾದಿ ಭಯೋತ್ಪಾದನೆಯ ಮುಖವಾ ಡವಿದೆ’ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಉಲ್ಲಾಸ್ ಕೆ.ಟಿ  ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿಯನ್ ಮುಜಾಯಿದ್ದೀನ್ ಮತ್ತು ಆಲ್‌ಖೈದಾ ಜತೆ ನಂಟು ಹೊಂದಿರುವ ಪಿಎಫ್‍ಐ ನಂತಹ ಸಂಘಟನೆಗಳು ಬಲಗೊಂಡಿರುವ ಪ್ರದೇಶಗಳಲ್ಲಿ ಮಾತ್ರ ಇಂತಹ ಕೃತ್ಯಗಳು ನಡೆಯುತ್ತಿದ್ದು, ಇಸ್ಲಾಮೀಕ ರಣದ ಉದ್ದೇಶದಿಂದ ಹಿಂದೂ ಸಮಾ ಜದಲ್ಲಿ ಭಯದ ವಾತಾರಣ ಸೃಷ್ಟಿಸಲು ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ’ ಆರೋಪಿಸಿದರು.

‘ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ಕೊಲೆ ಮಾಡಿದ ಸಂಘಟನೆಯ ವರೇ ಶವ ಯಾತ್ರೆಯ ಸಂದರ್ಭದಲ್ಲಿ ಕಲ್ಲೆಸೆದು ಕ್ರೂರತನ ಪ್ರದರ್ಶನ ಮಾಡಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಶವಯಾತ್ರೆಯ ಸಂದರ್ಭದಲ್ಲಿ ಮುಸ್ಲಿಂ ದುಷ್ಕರ್ಮಿಗಳು ಕಲ್ಲೆಸೆಯ ತೊಡಗಿದಾಗ ನಿಯಂತ್ರಿಸಲು ಹೋದ ಹಿಂದೂ ನಾಯಕರಾದ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‌ ವೆಲ್, ಮುರಳಿಕೃಷ್ಣ ಹಸಂತ್ತಡ್ಕ ಮೊದಲಾದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ’ ಬಂಧಿಸಲು ಎಂದು ದೂರಿದರು.

ADVERTISEMENT

‘ಶರತ್ ಕೊಲೆಯನ್ನು ಪಿಎಫ್‍ಐ ಸಂಘಟನೆಯೇ ಮಾಡಿರುವ ಅನುಮಾನ ಗಳಿದ್ದು, ಕರ್ನಾಟಕವನ್ನು ಇಸ್ಲಾಮೀಕ ರಣಗೊಳಿಸುವ ಉದ್ದೇಶ ಹೊಂದಿರುವ ಈ ಸಂಘಟನೆ ಉದ್ದೇಶ ಪೂರ್ವಕವಾಗಿ ಮತ್ತು ಯೋಜನಾಬದ್ಧವಾಗಿ ರಾಜ್ಯದ ಅಲ್ಲಲ್ಲಿ ಕೋಮು ಗಲಭೆಯನ್ನು ನಡೆಸುತ್ತಿದೆ.

ಕೇರಳದ ಕಾಸರಗೋಡಿನ ಕೆಲ ಮಂದಿ ಐಸಿಸಿ ಭಯೋತ್ಪಾದನಾ ಸಂಘ ಟನೆಗೆ ಸೇರಿಕೊಂಡಿರುವ ಪ್ರಕರಣಗಳು ಈಗಾಗಲೇ ನಡೆದಿರುವುದರಿಂದ ಪಕ್ಕದ ನಮ್ಮ ಜಿಲ್ಲೆಯಲ್ಲೂ ಇದರ ಪ್ರಭಾವ ವಿರುವ ಸಾಧ್ಯತೆ ಹೆಚ್ಚಿದೆ’ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಜನತೆಯ ಭಾವನೆ ಗಳಿಗೆ ಸ್ಪಂದಿಸಬೇಕು. ನೈಜ ಕೊಲೆಗ ಡುಕರನ್ನು ತಕ್ಷಣ ಬಂಧಿಸಬೇಕು. ಸಾಮಾಜಿಕ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ಹೊಸ ಮನೆ, ಪುತ್ತೂರು ತಾಲ್ಲೂಕು ಅಧ್ಯಕ್ಷ ಸಚಿನ್ ಪಾಪೆಮಜಲು, ತಾಲ್ಲೂಕು ಸಂಚಾಲಕ ಚಿನ್ಮಯ್ ರೈ, ತಾಲ್ಲೂಕು ಹೋರಾಟ್ ಪ್ರಮುಖ್ ಅವಿನಾಶ್ ಪುರುಷರಕಟ್ಟೆ ಅವರು ಸುದ್ದಿಗೋಷ್ಠಿ ಯಲ್ಲಿ ಹಾಜರಿದ್ದರು.

***

‘ಪ್ರತಿಭಟನೆಗೆ ಪೂರ್ಣ ಬೆಂಬಲ’
ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಹಿಂದೂ ನಾಯಕರ ಮೇಲೆಯೇ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಹಿಂದೂ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದು, ಇದರ ವಿರುದ್ದ ಹೋರಾಟ ಅನಿವಾರ್ಯತೆ ಬಂದಿದೆ. ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ನಡೆಯುವ ಪ್ರತಿಭಟನೆಗೆ ಹಿಂದೂ ಜಾಗರಣಾ ವೇದಿಕೆ ಪೂರ್ಣ ಬೆಂಬಲ ನೀಡಲಿದೆ ಎಂದು ಉಲ್ಲಾಸ್‌ ಕೆ.ಟಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.