ADVERTISEMENT

ಹೆಚ್ಚಿನ ಭದ್ರತೆಗೆ ಪೊಲೀಸ್ ಇಲಾಖೆ ಕ್ರಮ

ಗ್ರಾಮ ಪಂಚಾಯಿತಿ ಚುನಾವಣೆ: ನಕ್ಸಲ್‌ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಬಂಕರ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 29 ಮೇ 2015, 11:26 IST
Last Updated 29 ಮೇ 2015, 11:26 IST

ಹೆಬ್ರಿ: ಗ್ರಾಮ ಪಂಚಾಯಿತಿ ಚುನಾವ ಣೆಯ ಹಿನ್ನಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ವ್ಯಾಪ್ತಿಯ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.

ಕಾರ್ಕಳ ತಾಲ್ಲೂಕಿನ ಕಾರ್ಕಳ ಗ್ರಾಮಾಂತರ, ಅಜೆಕಾರು ಮತ್ತು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತಗ ಟ್ಟೆಗಳಿಗೆ ಹೆಚ್ಚಿನ ಭದ್ರತೆ ಅಳವಡಿಸಲಾಗಿದೆ.

ಕಾಸನಮಕ್ಕಿ, ನಾಡ್ಪಾಲಿನ ಮೇಗದ್ದೆ, ಸೋಮೇಶ್ವರ, ಸೀತಾನದಿ, ಕಬ್ಬಿನಾಲೆಯ ಕೊಂಕಣಾರಬೆಟ್ಟು, ಮೇಲ್ಮಠ, ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮುಟ್ಲುಪಾಡಿ, ಶಿರ್ಲಾಲು, ಕೆರ್ವಾಸೆ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಈದು ಹೊಸ್ಮಾರು ಸೇರಿದಂತೆ ನಕ್ಸಲ್ ಭಾದಿತ ಪ್ರದೇಶಗಳಿಗೆ ಮಂಗಳ ವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಬೇಟಿ ಪರಿಶೀಲನೆ ನಡೆಸಿದ್ದಾರೆ.

ಭದ್ರತೆಗಾಗಿ ಬಂಕರ್ಗಳನ್ನು ಅಳವಡಿ ಸಲಾಗಿದೆ. ಕಾರ್ಕಳ ತಾಲ್ಲೂಕಿನಲ್ಲಿ ಪೊಲೀಸ್ ಉಪಾಧೀಕ್ಷಕ ವಿನಯ ನಾಯಕ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್ ನೇತ್ರತ್ವದಲ್ಲಿ ಪೊಲೀಸ್ ಠಾಣಾಧಿಕಾರಿಗಳು ಭದ್ರತೆಯ ಹೊಣೆ ಹೊತ್ತಿದ್ದಾರೆ.

ಸ್ಥಳೀಯ ಪೊಲೀಸರು, ನಕ್ಸಲ್ ನಿಗ್ರಹ ಪಡೆಯ ಯೋಧರು, ನಕ್ಸಲ್ ನಿಗ್ರಹ ಸ್ಕ್ವಾಡ್ ಜೊತೆಗೆ ಕೇರಳ ರಾಜ್ಯ ಪೊಲೀಸರು ಮತ್ತು ಕೈಗಾರಿಕ ಭದ್ರತಾ ಪಡೆಯ ಯೋಧರು ಭದ್ರೆತೆಗಾಗಿ ನಿಯೋಜನೆಗೊಂಡಿದ್ದಾರೆ.

ಇತ್ತೀಚೆಗೆ ಶೃಂಗೇರಿಯಲ್ಲಿ ನಕ್ಸಲರ ಚಲನವಲನದ ನಿಮಿತ್ತ ಕಟ್ಟೆಚ್ಚರ ವಹಿಸಲಾಗಿದ್ದು ಮತದಾರರು ಭಯ ಮುಕ್ತವಾಗಿ ಶಾಂತಿ ಯುತವಾಗಿ ಮತದಾನ ಮಾಡಲು ಸಮರ್ಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾರ್ಕಳ: ಗ್ರಾಂ.ಪಂ. ಚುನಾವಣೆಗೆ ಸಕಲ ಸಿದ್ಧತೆ
ಕಾರ್ಕಳ: ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗೆ ಶುಕ್ರವಾರ ನಡೆಯಲಿ ರುವ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು 34 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಾಗಿದ್ದು ಅವುಗಳಲ್ಲಿ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದರಿಂದ ಈಗ 32 ಗ್ರಾಮ ಪಂಚಾಯಿತಿಗಳ 172 ಮತಗಟ್ಟೆಗಳಲ್ಲಿ ವಿವಿಧ ರೀತಿಯ ಕರ್ತವ್ಯ ನಿರ್ವಹಿಸಲು 1259ಮಂದಿ ಸಿಬ್ಬಂದಿ ಸಿದ್ಧರಾಗಿದ್ದಾರೆ.

ಮತಗಟ್ಟೆ ಗೊಬ್ಬ ಅಧ್ಯಕ್ಷಾಧಿ ಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ ಗ್ರೂಪ್ ಡಿ ಸಿಬ್ಬಂದಿ, 378 ಮಂದಿ ಮತಗಟ್ಟೆ ಅಧಿಕಾರಿಗಳು, 32 ಮಂದಿ ಚುನಾವಣಾದಿಕಾರಿಗಳು,  ಸಹಾಯಕ ಚುನಾವಣಾದಿ ಕಾರಿಗಳು ಮತ್ತು 250ಮಂದಿ ಪೊಲೀಸ್ ಸಿಬ್ಬಂದಿ ಗುರುವಾರ ಮಸ್ಟರಿಂಗ್ ಕೇಂದ್ರದಲ್ಲಿ ತಮ್ಮ ತಮ್ಮ ಕರ್ತವ್ಯ ನಿರ್ವಹಣೆ ಹಾಗೂ ಸಲಕರಣೆ  ಸಂಗ್ರಹ, ಅವುಗಳ ತಪಾಸಣೆ ನಡೆಸಿ ಚುನಾವಣೆ ಕೇಂದ್ರಗಳಿಗೆ ವಾಹನಗಳಲ್ಲಿ ತೆರಳಲು ಸಿದ್ಧತೆ ನಡೆಸುತ್ತಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.