ADVERTISEMENT

‘ಗೋ ಸಂಪತ್ತು ಸಮೃದ್ಧಿಯಿಂದ ಸುಭಿಕ್ಷೆ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 5:50 IST
Last Updated 25 ಅಕ್ಟೋಬರ್ 2014, 5:50 IST
ಬೈಂದೂರು ವಲಯ ಗೋಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ನಾವುಂದದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ ಸಾಮೂಹಿಕ ಗೋಪೂಜೆ ನಡೆಯಿತು.
ಬೈಂದೂರು ವಲಯ ಗೋಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ನಾವುಂದದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ ಸಾಮೂಹಿಕ ಗೋಪೂಜೆ ನಡೆಯಿತು.   

ನಾವುಂದ (ಬೈಂದೂರು): ’ಯಾವ ದೇಶದಲ್ಲಿ ಗೋ ಸಂಪತ್ತು ಸಮೃದ್ ಧವಾಗಿರುವುದೋ ಅಲ್ಲಿ ಸುಭಿಕ್ಷೆ ನೆಲೆ ಸುತ್ತದೆ. ಭಾರತೀಯ ಸನಾತನ ಸಂಸ್ಕೃತಿ ಯಲ್ಲಿ ಗೋವುಗಳಿಗೆ ಪವಿತ್ರ ಸ್ಥಾನವಿದೆ. ಗೋವನ್ನು ದೇವತೆಗಳ ಆವಾಸವೆಂದು ಭಾವಿಸಲಾಗುತ್ತದೆ. ಇಲ್ಲಿ ಗೋ ಸಂತ ತಿಯ ಪೋಷಣೆ ಮತ್ತು ವೃದ್ಧಿಗೆ ಆದ್ಯತೆ ದೊರೆಯ ಬೇಕು’ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಬೈಂದೂರು ವಲಯ ಗೋ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ನಾವುಂದದ ಗೋಪಾಲಕೃಷ್ಣ ದೇವ ಸ್ಥಾನದಲ್ಲಿ ಶುಕ್ರವಾರ ನಡೆದ ಸಾಮೂ ಹಿಕ ಗೋಪೂಜಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಗೋಸಂರಕ್ಷಣಾ ನಿಧಿ ಸಂಗ್ರಹಕ್ಕೂ ಅವರು ಚಾಲನೆ ನೀಡಿದರು.

ಜಿಲ್ಲಾ ಆರ್‌ಟಿಐ ಕಾರ್ಯಕರ್ತರ ಒಕ್ಕೂಟದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ವಲಯ ಗೋಸಂರಕ್ಷಣಾ ಸಮಿತಿಯನ್ನು ಉದ್ಘಾ ಟಿಸಿ ’ದೇಶ ಸ್ವತಂತ್ರವಾದಾಗ ಇಲ್ಲಿ ವಿವಿಧ ತಳಿಯ 47 ಕೋಟಿ ಗೋ ಸಂಪತ್ತು ಇದ್ದಿತ್ತು. ಅದು ಈಗ 9.6 ಕೋಟಿಗೆ ಇಳಿದಿದೆ. ಈ ಅವಧಿಯಲ್ಲಿ ಕಸಾಯಿಖಾನೆಗಳ ಸಂಖ್ಯೆ 306ರಿಂದ 3840ಕ್ಕೇರಿದೆ. ಈ ಹಿನ್ನೆಲೆಯಲ್ಲಿ ಗೋಸಂಪತ್ತಿನ ರಕ್ಷಣೆ ಮತ್ತು ವೃದ್ಧಿಗೆ ಜನರು ಶ್ರಮಿಸಬೇಕಾಗಿದೆ’ ಎಂದರು.

ಅಶೋಕ ಆಚಾರ್ಯ ಸ್ವಾಗತಿಸಿ ದರು. ರಾಘವೇಂದ್ರ ನಿರೂಪಿಸಿ ವಂದಿಸಿ ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ನಾವುಂದ ಗೋಸಂರಕ್ಷಣಾ ಸಮಿತಿ ಅಧ್ಯಕ್ಷ ವಿನಯಕುಮಾರ ನಾಯರಿ, ಗೋಪಾಲಕೃಷ್ಣ ದೇವ ಸ್ಥಾನದ ಅರ್ಚಕ ರಾಘವೇಂದ್ರ ಕಾರಂತ, ಇತರರು ಇದ್ದರು. ಸಾಮೂ ಹಿಕ ಗೋಪೂಜೆಯ ಬಳಿಕ ಗೋರಕ್ಷಣೆ ಸಂಬಂಧ ಘೋಷಣೆಗಳೊಂದಿಗೆ ಮರ ವಂತೆಯ ರಾಮ ಮಂದಿರದ ವರೆಗೆ ಮೆರವಣಿಗೆ ನಡೆಸಿ, ಗೋಸಂರಕ್ಷಣಾ ನಿಧಿ ಸಂಗ್ರಹ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.