ADVERTISEMENT

₹20.35 ಕೋಟಿ ಮಂಜೂರು

ರಸ್ತೆ ಸೇತುವೆ ನಿರ್ಮಾಣ, ಶಾಲಾ ಕಟ್ಟಡಗಳ ನಿರ್ವಹಣೆ: ಶಾಸಕ ಪ್ರಮೋದ ಮಧ್ವರಾಜ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2015, 5:07 IST
Last Updated 23 ಏಪ್ರಿಲ್ 2015, 5:07 IST

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ರಸ್ತೆ ಸೇತುವೆ ನಿರ್ಮಾಣ ಮತ್ತು ಶಾಲಾ ಕಟ್ಟಡಗಳ ನಿರ್ವಹಣೆಗೆ ಒಟ್ಟು ₹20.35 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುತ್ತದೆ. ಸಿಂಬ್ರಾ– ಪರಾರಿ ಸೇತುವೆ ನಿರ್ಮಾಣ ವಾಗಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಸುಮಾರು ₹10 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ₹2.50 ಕೋಟಿ ರೂಪಾಯಿ ಖರ್ಚು ಮಾಡಿ ಕುಕ್ಕಿಕಟ್ಟೆ ಅಲೆವೂರು ರಸ್ತೆಯನ್ನು ದ್ವಿಪಥ ಮಾಡ ಲಾಗುತ್ತದೆ (150.30 ಕಿ.ಮೀ. ನಿಂದ 153.30 ಕಿಮೀ ವರೆಗೆ) ಎಂದು ಮಾಹಿತಿ ನೀಡಿದರು.

ಅಂಬಾಗಿಲು ಪೆರಂಪಳ್ಳಿ– ಮಣಿ ಪಾಲ, ಉಳಿಯಾರಗೋಳಿ ಪಡುಕೆರೆ– ಮಲ್ಪೆ, ಕೊಕ್ಕರ್ಣೆ (ಗ್ರಾಮ ಪರಿಮಿತಿ), ಭದ್ರಗಿರಿ– ಬೈಕಾಡಿ ರಸ್ತೆ, ಬ್ರಹ್ಮಾವರ ಪೇಟೆ ಭಾಗದ ರಸ್ತೆ ಹಾಗೂ ಸಂತೆಕಟ್ಟೆ ಹತ್ತಿರ ತಿರುವು ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕರ್ಜೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮಲ್ಪೆ ಫಿಶರೀಸ್‌ ಪ್ರೌಢಶಾಲೆಯ ಕೊಠಡಿ ಮತ್ತು ಕಟ್ಟಡ ದುರಸ್ಥಿ ಮಾಡಲಾಗುತ್ತದೆ ಎಂದರು.

ಸುಮಾರು ₹20 ಕೋಟಿ ರೂಪಾಯಿ ಕಾಮಗಾರಿಗೆ ಏಪ್ರಿಲ್‌ 24ರಂದು ಶಂಕು ಸ್ಥಾಪನೆ ಮಾಡಲಾಗುತ್ತದೆ ಎಂದರು. ಜೆನರ್ಮ್‌ ಬಸ್‌ಗಳ ಓಡಾಟವನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಹಳೆಯ ಡಿಡಿಪಿಐ ಕಚೇರಿ ಜಾಗವನ್ನು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹಸ್ತಾಂತ ರಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆ ಜಾಗ ದಲ್ಲಿ ಸಿಟಿ ಬಸ್‌ ನಿಲ್ದಾಣ ನಿರ್ಮಿಸಲಾ ಗುತ್ತದೆ ಎಂದು ಪ್ರಮೋದ್‌ ಹೇಳಿದರು.

ನಗರಸಭೆ ಅಧ್ಯಕ್ಷ ಪಿ. ಯುವರಾಜ ಮಾತನಾಡಿ ಸಿ.ಟಿ. ಬಸ್‌ ನಿಲ್ದಾಣವನ್ನು 25 ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನಗರ ಸಭೆಯ ಹಿಂದಿನ ಆಡಳಿತ ಮೂವಾ ಎಂಬ ಸಂಸ್ಥೆಗೆ ನೀಡಿತ್ತು.  ಆ ಸಂಸ್ಥೆಯ ಟೆಂಡರ್‌ ಅನ್ನು ರದ್ದು ಮಾಡಲಾಗಿದೆ. ಹೊಸ ಟೆಂಡರ್‌ ಕರೆದು ನಿರ್ವಹಣೆಯ ಜವಾಬ್ದಾರಿ ವಹಿಸಲಾಗುತ್ತದೆ. ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕ ಕರ್ನೇ ಲಿಯೊ, ಉಡುಪಿ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಭಾಸ್ಕರ್‌ ರಾವ್‌ ಕಿದಿಯೂರು ಉಪಸ್ಥಿತರಿದ್ದರು.
*
ಉಡುಪಿ ತಾಲ್ಲೂಕಿಗೆ ದಿನದ 24 ಗಂಟೆ ನಿರಂತರ ವಿದ್ಯುತ್‌ ಪೂರೈಕೆ ಮಾಡ ಬೇಕು ಎಂಬ ಮನವಿಗೆ ಇಂಧನ ಸಚಿ ವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.   ಈ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ.
ಪ್ರಮೋದ್‌ ಮಧ್ವರಾಜ್‌
ಉಡುಪಿ ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.