ADVERTISEMENT

‘ಮಧುಮೇಹ ಜಗತ್ತನ್ನು ಕಾಡುತ್ತಿದೆ’

ಹೆಬ್ರಿ: ಸೀತಾನದಿ ಸೌಖ್ಯಯೋಗ ಟ್ರಸ್ಟ್ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 13:03 IST
Last Updated 15 ಜನವರಿ 2018, 13:03 IST

ಹೆಬ್ರಿ: ಜಗತ್ತನ್ನು ಭೀಕರವಾಗಿ ಕಾಡುತ್ತಿರುವ ಮಧುಮೇಹ ಕಾಯಿಲೆಯ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಆರೋಗ್ಯವಾಗಿ ಬದುಕುವುದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ ಮಧುಮೇಹ ರೋಗ ತಜ್ಞ, ಉಡುಪಿ ಅನುಗ್ರಹ ಮೆಡಿಕಲ್ ಸೆಂಟರಿನ ಮುಖ್ಯಸ್ಥ ಡಾ.ಎನ್.ಆರ್.ರಾವ್ ಹೇಳಿದರು.

ಅವರು ಹೆಬ್ರಿಯ ಅನಂತ ನಗರ ಸೌಖ್ಯ ಯೋಗ ಮಂದಿರದಲ್ಲಿ ಭಾನುವಾರ ನಡೆದ ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಸಂಸ್ಥಾಪನಾ ದಿನಾಚರಣೆ ಮತ್ತು ಉಚಿತ ಮಧುಮೇಹ ಮಾಹಿತಿ ಹಾಗೂ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರಬಾಬು ಕಾರ್ಯಕ್ರಮ ಉದ್ಘಾಟಿಸಿ, ಸೀತಾನದಿ ವಿಠ್ಠಲ ಶೆಟ್ಟಿ ನೇತೃತ್ವದ ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯದ ಸೇವೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

ADVERTISEMENT

ಮುನಿಯಾಲು ಉದು ಕೃಷ್ಣಯ್ಯ ಶೆಟ್ಟಿ ಚಾರಿಟಬಲ್‌ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ‘ಇಂದು ಒಬ್ಬ ವ್ಯಕ್ತಿಯಲ್ಲಿ ಒಂದೆರಡು ನಿಮಿಷ ಮಾತನಾಡಿದರೆ ಆತ ಕೊನೆಗೆ ನಿಮಗೆ ಶುಗರ್ ಉಂಟ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಂಡು ಬದುಕುವುದು ಇಂದು ಅವಶ್ಯವಾಗಿದೆ’ ಎಂದರು.

ಸೀತಾನದಿ ಸೌಖ್ಯಯೋಗ ಟ್ರಸ್ಟ್ ಸಂಸ್ಥಾಪಕರಾದ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿ, ‘ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯದ ಸೇವೆ ನೀಡುವ ಮಹತ್ವದ ಉದ್ದೇಶದಿಂದ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಯೋಗ ಮಂದಿರದಲ್ಲಿ 100 ಜನ ಶಿಬಿರಾರ್ಥಿಗಳಿದ್ದು ನಿತ್ಯ 30 ಮಂದಿ ಯೋಗದಲ್ಲಿ ನಿರತರಾಗಿದ್ದಾರೆ. ಹಲವಾರು ಮಂದಿ ಯೋಗ ಕೋರ್ಸ್ ಮಾಡಿ ಮನೆಯಲ್ಲೇ ಯೋಗದಲ್ಲಿ ನಿರತರಾಗಿದ್ದಾರೆ’ ಎಂದರು.

ಡಾ.ಎನ್.ಆರ್.ರಾವ್, ಯೋಗಪಟು ನಿಧಿ ಮತ್ತು ನೃತ್ಯ ಸಾಧಕಿ ಅವಶ್ಯ ಹೆಗ್ಡೆ, ಯೋಗ ಸಾಧನೆ ಮಾಡುತ್ತಿರುವ ಹೊಸೂರು ದಿನೇಶ ಶೆಟ್ಟಿ, ಸವಿತಾ ರಮಾನಂದ ಹೆಗ್ಡೆ, ಎಚ್. ವಾದಿರಾಜ ಶೆಟ್ಟಿ, ಡಾ.ರಾಮಚಂದ್ರ ಐತಾಳ್, ಶಕುಂತಳಾ ಆರ್. ಬಲ್ಲಾಳ್, ಡಾ.ರವಿಪ್ರಸಾದ ಹೆಗ್ಡೆ, ಎಚ್. ಶೇಖರ ಶೆಟ್ಟಿ, ಹರ್ಷ ಶೆಟ್ಟಿ, ರೂಪಾ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಅನುಗ್ರಹ ಮೆಡಿಕಲ್ ಸೆಂಟರಿನ ಮುರುಳಿ, ಶುಭಾ, ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ಮುಖ್ಯಸ್ಥ ಡಾ.ರಾಮಚಂದ್ರ ಐತಾಳ್, ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆ ಅಭಿವೃದ್ಧಿ ವಿಭಾಗದ ಡೀನ್ ಹೆಬ್ರಿಯ ಡಾ.ರವಿಪ್ರಸಾದ ಹೆಗ್ಡೆ, ಡಾ.ಶೋಭಿತ್ ಶೆಟ್ಟಿ ಸೀತಾನದಿ, ಸೀತಾನದಿ ಸೌಖ್ಯ ಯೋಗ ಟ್ರಸ್ಟಿನ ಉಪಾಧ್ಯಕ್ಷ ಎಚ್.ವಾದಿರಾಜ ಶೆಟ್ಟಿ, ವಿಶ್ವಸ್ಥರಾದ ಬಿ.ರಮಾನಂದ ಹೆಗ್ಡೆ, ಎಚ್.ಯೋಗೀಶ್ ಭಟ್, ಎಚ್.ಗುರುದಾಸ ಶೆಣೈ, ಹರ್ಷ ಶೆಟ್ಟಿ, ಸುಚಿತ್ರಾ ಎಸ್.ಶೆಟ್ಟಿ, ವಿಮಲ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ಸುಚಿತ್ರಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸೀತಾನದಿ ವಿಠ್ಠಲ ಶೆಟ್ಟಿ ಸ್ವಾಗತಿಸಿದರು. ಡಾ. ಶೋಬಿತ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.