ADVERTISEMENT

ಅಕ್ಷರ ಜಾತ್ರೆಗೆ ಅಕ್ಕರೆಯ ಸ್ವಾಗತ: ಸಂಭ್ರಮ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 8:40 IST
Last Updated 29 ಏಪ್ರಿಲ್ 2017, 8:40 IST
ಹಳಿಯಾಳ ತಾಲ್ಲೂಕಿನ ತೇರಗಾಂವ ಗ್ರಾಮದಲ್ಲಿ ನಡೆಯುವ 20 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಂಡಿರುವ ಬೃಹತ್ ವೇದಿಕೆ
ಹಳಿಯಾಳ ತಾಲ್ಲೂಕಿನ ತೇರಗಾಂವ ಗ್ರಾಮದಲ್ಲಿ ನಡೆಯುವ 20 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಂಡಿರುವ ಬೃಹತ್ ವೇದಿಕೆ   

ಹಳಿಯಾಳ: ವ್ಯಸನಮುಕ್ತ ಗ್ರಾಮದ ಮೂಲಕ ಜಿಲ್ಲೆಯ ಗಮನ ಸೆಳೆದಿರುವ ತೇರಗಾಂವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಇದೇ 29 ಹಾಗೂ 30ರಂದು ನಡೆಯುವ ಅಕ್ಷರ ಜಾತ್ರೆಗೆ ಇಡೀ ಊರು ಸಿಂಗಾರಗೊಂಡಿದೆ.ಪುಟ್ಟ ಹಳ್ಳಿಯಲ್ಲಿ ಮಿಂಚುತ್ತಿರುವ ಸ್ವಾಗತ ಕಮಾನುಗಳು, ಕನ್ನಡ ಬಾವುಟ, ತಳಿರು ತೋರಣಗಳು ನುಡಿ ಹಬ್ಬಕ್ಕೆ ಬರುವ ಸಾಹಿತ್ಯ ಪ್ರೇಮಿಗಳನ್ನು ಸ್ವಾಗತಿ ಸುತ್ತಿವೆ. 5000 ಜನರು ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಲು ಅನುವಾ ಗುವಂತೆ ಬೃಹತ್ ಶಾಮಿಯಾನ ಹಾಕ ಲಾಗಿದೆ. ಸಾಹಿತ್ಯಾಸಕ್ತರ ಓದಿನ ತುಡಿತ ತಣಿಸಲು 20 ಪುಸ್ತಕ ಮಳಿಗೆಗಳು ಬರಲಿವೆ.

ಸಮ್ಮೇಳನಕ್ಕೆ ಬರುವ ಜನರಿಗೆ ಗ್ರಾಮದ ಮನೆಗಳಲ್ಲಿ ಆತ್ಮೀಯ ಆತಿಥ್ಯ ದೊರೆಯಲಿದೆ. ಗ್ರಾಮದ ಪ್ರತಿ ಮನೆ ಯವರೂ ಅತಿಥಿಗಳಿಗೆ ಊಟ, ಉಪ ಚಾರ ನೀಡಿ ಸತ್ಕರಿಸಲು ಅಣಿಯಾಗಿ ದ್ದಾರೆ. ಊರಿಗೆ ಬರುವ ಅತಿಥಿಗಳಿಗೆ ಕುಡಿಯುವ ನೀರು, ಸ್ನಾನ, ಶೌಚಾಲ ಯಕ್ಕೆ ತೊಂದರೆ ಆಗದಂತೆ ಗ್ರಾಮಸ್ಥರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾ ಧ್ಯಕ್ಷ ಸಂತೋಷ ಕುಮಾರ ಮೆಹಂದಳೆ ಅವರು ಸ್ವಂತ ವೆಚ್ಚದಲ್ಲಿ 150 ಜನರಿಗೆ ವಸತಿ ವ್ಯವಸ್ಥೆ ಮಾಡಿದ್ದಾರೆ.

ಇಂದು (ಏ.29) ಬೆಳಿಗ್ಗೆ 8 ಗಂಟೆಗೆ ಸಮ್ಮೇಳನದ ಮೆರವಣಿಗೆ ಪ್ರಾರಂಭ ವಾಗಲಿದೆ. ಐದು ವಿಶೇಷ ಬಂಡಿಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಲಿವೆ. ಈ ಬಂಡಿಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮಾಸ್ಕೇರಿ ಎಂ.ಕೆ. ನಾಯಕ ಹಾಗೂ ಅತಿಥಿಗಳು ಸಮ್ಮೇಳನ ನಡೆ ಯುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಬರುವರು. ಗ್ರಾಮೀಣ ಸೊಗಡಿನ ಡೊಳ್ಳು, ಹೆಜ್ಜೆ ಮಜಲು, ಕರಡಿ ಮಜಲು, ಪೂರ್ಣ ಕುಂಭ ಸ್ವಾಗತ ವಿಶೇಷ ಮೆರುಗನ್ನು ನೀಡಲಿದೆ.ಬೆಳಿಗ್ಗೆ 8 ಗಂಟೆಗೆ ತೇರಗಾಂವ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಲಕ್ಕನಗೌಡರ ರಾಷ್ಟ್ರ ಧ್ವಜಾರೋಹಣ,  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ ವಿಂದ ಕರ್ಕಿಕೋಡಿ ನಾಡ ಧ್ವಜಾ ರೋಹಣ ನೆರವೇರಿಸುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.