ADVERTISEMENT

ಕಡಿಮೆಯಾಗುತ್ತಿರುವ ಕ್ರಿಯಾಶೀಲತೆ: ಆತಂಕ

ಕಲ್ಲೇಶ್ವರದಲ್ಲಿ ಅಂಕೋಲಾ ತಾಲ್ಲೂಕು ಮಟ್ಟದ ಯುವಜನ ಮೇಳ: ಸಾಂಸ್ಕೃತಿಕ ಮೆರಗು

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:01 IST
Last Updated 31 ಜನವರಿ 2017, 6:01 IST
ಕಡಿಮೆಯಾಗುತ್ತಿರುವ ಕ್ರಿಯಾಶೀಲತೆ: ಆತಂಕ
ಕಡಿಮೆಯಾಗುತ್ತಿರುವ ಕ್ರಿಯಾಶೀಲತೆ: ಆತಂಕ   

ಅಂಕೋಲಾ: 'ಭಾರತದಲ್ಲಿ ಯುವಕರ ಸಂಖ್ಯೆ ಅಧಿಕವಾಗಿದ್ದರೂ ಎಲ್ಲೋ ಒಂದು ಕಡೆ ಕ್ರಿಯಾಶೀಲತೆ ಕುಂದುತ್ತಿದೆ ಎಂಬ ಆತಂಕ ಸೃಷ್ಠಿಯಾಗುತ್ತಿದೆ. ದೇಶದ ಭವಿಷ್ಯ ಮತ್ತು ಸಂಸ್ಕೃತಿ ಉಳಿಸಬೇಕಾದ ಕರ್ತವ್ಯ ಪ್ರತಿಯೊಬ್ಬರ ಮೇಲಿದ್ದು, ಈ ನಿಟ್ಟಿನಲ್ಲಿ ಇನ್ನಷ್ಟು ಜಾಗೃತಗೊಳ್ಳ ಬೇಕಿದೆ' ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಗಾಂವಕರ ಅಭಿಪ್ರಾಯಪಟ್ಟರು.

ಜಿ.ಪಂ., ಜಿಲ್ಲಾ ಯುವ ಸಬಲೀಕ ರಣ ಮತ್ತು ಕ್ರೀಡಾ ಇಲಾಖೆ, ತಾ.ಪಂ., ಗ್ರಾ.ಪಂ. ಡೋಂಗ್ರಿ, ತಾಲ್ಲೂಕು ಯುವ ಒಕ್ಕೂಟ ಹಾಗೂ ಶ್ರೀ ಗೋಪಾಲಕೃಷ್ಣ ಯುವಕ ಸಂಘದ ಆಶ್ರಯದಲ್ಲಿ ಕಲ್ಲೇ ಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವರಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಡೋಂಗ್ರಿ ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿ ಸಿದ್ದರು. ಜಿ.ಎಂ.ಶೆಟ್ಟಿ,  ಮಂಗಲದಾಸ ಕಾಮತ, ತಾ.ಪಂ. ಅಧಿಕಾರಿ ವಿ.ಎನ್. ಮಹಾಲೆ, ವಿಲ್ಸನ್ ಡಿಕೋಸ್ತಾ ಮಾತನಾ ಡಿದರು. ಶಿವರಾಮ ಗಾಂವಕರ, ಕನಕ ನಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಕಾರ್ತಿಕ ನಾಯ್ಕ, ಪ್ರಭಾಕರ ಕೋಟೆ ಮನೆ, ರಾಘವೇಂದ್ರ ಭಟ್ ಉಪಸ್ಥಿತರಿ ದ್ದರು.  ದೇವರಾಜ ಗೋಳಿಕಟ್ಟೆ ಸ್ವಾಗತಿಸಿ ದರು. ವಿಲಾಸ ನಾಯಕ   ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಾಘವೇಂದ್ರ ಎಸ್. ಹೆಗಡೆ ನಿರ್ವಹಿಸಿದರು.  ರಾಘ ವೇಂದ್ರ ಗಾಂವಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.