ADVERTISEMENT

ಕೈಗಾ ಘಟಕ ವಿಸ್ತರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:44 IST
Last Updated 20 ಮೇ 2017, 5:44 IST

ಶಿರಸಿ: ಜಿಲ್ಲೆಯ ಕೈಗಾ ಅಣು ಸ್ಥಾವರದಲ್ಲಿ ಮತ್ತೆರಡು ಅಣು ರಿಯಾಕ್ಟರ್ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆರೋಗ್ಯ ಸಮೀಕ್ಷೆ ವರದಿ ಬರುವ ಮುನ್ನವೇ ಸರ್ಕಾರ ಸಮ್ಮತಿ ನೀಡಿರುವ ಬಗ್ಗೆ ಪರಿಸರವಾದಿಗಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೈಗಾದಲ್ಲಿ ನಾಲ್ಕು ರಿಯಾಕ್ಟರ್ ಘಟಕ ನಿರ್ಮಾಣವಾಗಿದೆ. ಕೈಗಾದ ಈ ಘಟಕಗಳಿಂದ ಸೋರಿಕೆಯಾಗುವ ಅನಿಲದಿಂದ ಕ್ಯಾನ್ಸರ್, ಪಾರ್ಶ್ವವಾಯು ಮೊದಲಾದ ರೋಗಗಳು ಬರುತ್ತಿವೆ ಎಂಬ ಅನುಮಾನವಿದೆ.

ಇದಕ್ಕೆ ಪುಷ್ಟಿಯೆಂಬಂತೆ ಮಲವಳ್ಳಿ, ಬಾರೆ, ಕಳಚೆ, ವಜ್ರಳ್ಳಿ, ಬಾಗಿನಕಟ್ಟಾ, ಬೀಗಾರ, ಹೇರೂರ ಭಾಗಗಳಲ್ಲಿ ಕ್ಯಾನ್ಸರ್‌ನಿಂದ 20 ಜನರು ಮೃತಪಟ್ಟಿದ್ದಾರೆ. ಕೆಲವರು ಥೈರಾಯ್ಡ್‌ನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಘಟಕದ ವಿಸ್ತರಣೆಗೆ ಮೊದಲು ಆರೋಗ್ಯ ಸಮೀಕ್ಷೆ ನಡೆಯಬೇಕು.

ADVERTISEMENT

ಸುಸಜ್ಜಿತ ಆಸ್ಪತ್ರೆ ಆಗಬೇಕು ಎಂಬ ಬೇಡಿಕೆಯನ್ನು ಪರಿಸರವಾದಿಗಳು ಸರ್ಕಾರಕ್ಕೆ ಸಲ್ಲಿಸಿದ್ದರು. ಇದಕ್ಕೆ ಮಣಿದ ಸರ್ಕಾರ ಆರೋಗ್ಯ ಸಮೀಕ್ಷೆ ನಡೆಸಿತ್ತು. ಆದರೆ ಇನ್ನೂ ಇದರ ವರದಿ ಬಂದಿಲ್ಲ.

ಈಗಾಗಲೇ ಜನರ ವಿರೋಧದ ನಡುವೆ ಮೂರು ಮತ್ತು ನಾಲ್ಕನೇ ಘಟಕ ಸ್ಥಾಪಿಸಲಾಗಿದೆ. ಇದಕ್ಕೇ ಇಂಧನದ ಕೊರತೆ ಇರುವಾಗ ಅದನ್ನು ಸರಿಯಾಗಿ ನಿಭಾಯಿಸಿರುವುದನ್ನು ಬಿಟ್ಟು ಸರ್ಕಾರ ಮತ್ತೆ ವಿಸ್ತರಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.