ADVERTISEMENT

ಗೆಲುವಿನ ನಗೆ ಬೀರಿದ ಮಮತಾ

ಬಾಲಕಿಯರ ಜೂನಿಯರ್‌ ಕುಸ್ತಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 6:44 IST
Last Updated 30 ಜನವರಿ 2017, 6:44 IST

ಹಳಿಯಾಳ (ಉತ್ತರ ಕನ್ನಡ): ಮೂಡು ಬಿದಿರೆ ಆಳ್ವಾಸ್‌ನ ಮಮತಾ ಕೆಳೋಜಿ ಹಾಗೂ ಗದಗಿನ ಮೈತ್ರಾ ವ್ಯಾಪಾರಿ ನಡುವೆ ನಡೆದ 42 ಕೆ.ಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಮಮತಾ ಕೇಳೊಜಿ ಅವರು ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.

ಸ್ಥಳೀಯ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ ಹಾಗೂ ಉತ್ಕರ್ಷ ಉತ್ತರ ಕನ್ನಡ ಸಮಗ್ರ ಗ್ರಾಮೀ ಣಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಕುಸ್ತಿ ಅಸೋಶಿಯೇಷನ್ ಸಂಯುಕ್ತ ಆಶ್ರಯ ದಲ್ಲಿ ಭಾನುವಾರ ಸ್ಥಳೀಯ ಮೋತಿಕೆರೆ ಹತ್ತಿರ ಇರುವ ಜಿಲ್ಲಾ ಕುಸ್ತಿ ಅಖಾ ಡಾದಲ್ಲಿ ನಡೆದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯ 42 ಕೆ.ಜಿ ವಿಭಾಗದಲ್ಲಿ ಮೊದಲು 3 ನಿಮಿಷದ ಅವಧಿಯಲ್ಲಿ 2–0 ಅಂಕ ಗಳಿಸಿದ ಮಮತಾ ಕೇಳೊಜಿ ನಂತರದ ಮೂರು ನಿಮಿಷದ ಅವಧಿಯಲ್ಲಿ ಗದಗಿನ ಮೈತ್ರಾಳನ್ನು ಚಿತ್‌ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.