ADVERTISEMENT

ಧರ್ಮಾಚರಣೆಯಿಂದ ಸಮಾಜ ಅಭ್ಯುದಯ

ಪೀಠಾರೋಹಣದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸ್ವರ್ಣವಲ್ಲಿ ಶ್ರೀಗಳ ಆಶೀರ್ವಚನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:39 IST
Last Updated 15 ಫೆಬ್ರುವರಿ 2017, 13:39 IST

ಶಿರಸಿ: ಮಕ್ಕಳು ಚಿಕ್ಕಂದಿನಿಂದಲೇ ಧರ್ಮಾಚರಣೆ ಅನುಷ್ಠಾನದಲ್ಲಿ ತೊಡಗಿ ಕೊಂಡರೆ ಸಮಾಜ ಅಭ್ಯುದಯದ ದಾರಿ ಯಲ್ಲಿ ಸಾಗಲು ಅನುಕೂಲವಾಗುತ್ತದೆ. ಪಾಲಕರು ಮಕ್ಕಳಲ್ಲಿ ಈ ಭಾವನೆ ಜಾಗೃತಗೊಳಿಸಬೇಕು ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ಪೀಠಾರೋಹಣದ ರಜತ ಮಹೋ ತ್ಸವ ವರ್ಷಾಚರಣೆಯ ಸಮಾರೋಪದ ಅಂಗವಾಗಿ ನಡೆದ ಸರಣಿ ಕಾರ್ಯ ಕ್ರಮದ ಕೊನೆಯ ದಿನ ಮಂಗಳವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ‘ನಮ್ಮ ಸಂಸ್ಕೃತಿ, ಉಡುಗೆ ತೊಡುಗೆ, ಆಹಾರ ಕ್ರಮದಲ್ಲಿ ಬದಲಾವಣೆ ಕಾಣುತ್ತಿದೆ. ಭಾರತದ ಶ್ರೇಷ್ಠ ಸಂಪ್ರದಾಯವನ್ನು ಬಿಡದೇ ಉಳಿಸಿಕೊಂಡು ಹೋಗಬೇಕು. ಇದು ಭವಿಷ್ಯದಲ್ಲಿ ಆದರ್ಶವಾಗಿ ಕಾಣುವ ಕಾಲ ಬರಬಹುದು’ ಎಂದರು.

ಕಾಂಚಿ ಶ್ರೀಗಳ ಭಾಗವಹಿಸುವಿಕೆ ಯಿಂದ ರಜತ ಮಹೋತ್ಸವ ಆಚರಣೆಗೆ ಪೂರ್ಣತ್ವ ಬಂದಿದೆ. ಬಹುರೂಪಿ ಶಿವ ಶ್ರೀಗಳ ರೂಪದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದಾನೆ ಎಂದು ಶ್ರೀಗಳು ಹೇಳಿದರು.

ಹುಬ್ಬಳ್ಳಿ ಆರ್ಷ ವಿದ್ಯಾಪೀಠದ ಚಿದ್ರೂಪಾನಂದ ಸ್ವಾಮೀಜಿ ಮಾತ ನಾಡಿ, ಶಂಕರರ ತತ್ವ ಪ್ರತಿಪಾದನೆ ಹಾಗೂ ದೇಶದ ರಕ್ಷಣೆ ಇವೆರಡೂ ಒಂದೇ ಆಗಿದೆ. ಶಂಕರ ತತ್ವ ಪ್ರತಿಪಾದನೆ ಯಲ್ಲಿ ಸನಾತನ ಧರ್ಮ ಅಡಗಿದೆ. ಶಂಕರ ತತ್ವ ಇದ್ದಲ್ಲಿ ಆಲಸ್ಯ, ಬಡತನ, ದಾರಿದ್ರ್ಯತೆ ಇರಲಾರದು. ವಿದೇಶದಲ್ಲಿ ಭಗವದ್ಗೀತೆ ಪಠಣವಾದರೆ ಭಾರತದಲ್ಲಿ ಅದರ ವಿಡಂಬನೆ ಹೆಚ್ಚಿದೆ ಎಂದರು.

ಸಂತ ಪರಂಪರೆಗೆ ಪ್ರಬುದ್ಧ ಹಾಗೂ ಪವಿತ್ರ ಸಮಾಜ ಬೆಂಬಲಿಸಬೇಕು. ಸಂತರ ನುಡಿಗೆ ಸಮರ್ಪಣೆ ಮಾಡುವ ಮನೋಭಾವ ಭಕ್ತರಲ್ಲಿ ಬೆಳೆಯಬೇಕು ಪ್ರತಿಯೊಬ್ಬರೂ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು, ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕೃಷ್ಣ ಭಟ್ಟ ಅರ್ತಿಕಜೆ ರಚಿಸಿದ ‘ಶತಮಾನದ ಬೆಳಕು– ಕಾಂಚಿ ಪರಮಾಚಾರ್ಯರು’, ರಮಾನಂದ ಐನಕೈ ಬರೆದ ‘ಬಹು ಮುಖಿ’, ಬಾಲಚಂದ್ರ ಶಾಸ್ತ್ರಿ ರಚಿಸಿದ ‘ಸ್ತೋತ್ರ ಸಂಗ್ರಹ’, ‘ಅಶೌಚ ನಿರ್ಣಯ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಾಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ಸ್ವಾಮೀಜಿ, ಕೊಲ್ಲಾ ಪುರ ಕರವೀರಪುರ ಮಠದ ವಿದ್ಯಾ ನೃಸಿಂಹ ಭಾರತಿ ಸ್ವಾಮೀಜಿ, ಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸಂಸದ ಅನಂತಕುಮಾರ ಹೆಗಡೆ ಇದ್ದರು. ವಿ.ಎನ್.ಹೆಗಡೆ ಸ್ವಾಗತಿಸಿದರು. ಆರ್‌.ಎಸ್. ಹೆಗಡೆ ನಿರೂಪಿಸಿದರು.

*ಪೀಠಾರೋಹಣದ ರಜತೋ ತ್ಸವ ವರ್ಷಾಚರಣೆಯ ಅಂಗ ವಾಗಿ ವರ್ಷವಿಡೀ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅತಿ ಹೆಚ್ಚು ಸನ್ಯಾಸಿಗಳುಭೇಟಿ ನೀಡಿದ್ದಾರೆ
-ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸ್ವರ್ಣವಲ್ಲಿ ಮಠಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT