ADVERTISEMENT

ನದಿ ನೀರು ಕಲುಷಿತ: ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:00 IST
Last Updated 31 ಜನವರಿ 2017, 6:00 IST
ನದಿ ನೀರು ಕಲುಷಿತ: ಗ್ರಾಮಸ್ಥರ ಆಕ್ರೋಶ
ನದಿ ನೀರು ಕಲುಷಿತ: ಗ್ರಾಮಸ್ಥರ ಆಕ್ರೋಶ   

ಭಟ್ಕಳ: ನೀರು ಶುದ್ಧೀಕರಣ ಘಟಕದ ಪಂಪ್ ಹಾಳಾಗಿರುವ ಹಿನ್ನೆಲೆಯಲ್ಲಿ ತ್ಯಾಜ್ಯದ ನೀರೆಲ್ಲಾ ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಮುಂಡಳ್ಳಿಯ ಶರಾಬಿ ನದಿ ಕಲಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿ ದುರ್ವಾಸನೆ ಬೀರುತ್ತಿರು ವುದರಿಂದ ಆಕ್ರೋಶಗೊಂಡ ಗ್ರಾಮ ಸ್ಥರು ಕೂಡಲೇ ಪಂಪ್ ದುರಸ್ತಿಗೊಳಿ ಸುವಂತೆ ಆಗ್ರಹಿಸಿದ ಘಟನೆ ಸೋಮ ವಾರ ನಡೆದಿದೆ.

ಈ ಶರಾಬಿ ಹೊಳೆ ಚೌಥನಿ, ಮುಂಡಳ್ಳಿ, ಗೌಸಿಯಾ, ಖಾಜಿಯಾ, ಮುಶ್ಮಾ, ಖಲೀಫಾ ಸ್ಟ್ರೀಟ್, ಡಾರಂಟಾ ಮತ್ತು ಡೊಂಗರಪಳ್ಳಿಯ ಮೂಲಕ ಹಾಯ್ದು ಸಮುದ್ರ ಸೇರುತ್ತದೆ. ಈ ಹೊಳೆ ಸುತ್ತಮುತ್ತಲಿನ ಕೃಷಿಭೂಮಿಗಳಿಗೆ ಹಾಗೂ ಬಾವಿಗಳಿಗೆ ನೀರಿನ ಸೆಲೆಯಾ ಗಿದೆ. ಕೆಲವು ದಿನಗಳಿಂದ ಪಟ್ಟಣದ ಗೌಸಿಯಾ ಸ್ಟ್ರೀಟ್‌ನಲ್ಲಿ ಇರುವ ಒಳ ಚರಂಡಿ ನೀರು ಶುದ್ದೀಕರಣ ಘಟಕದ ಪಂಪ್ ಹಾಳಾಗಿರುವು ಹಿನ್ನೆಲೆಯಲ್ಲಿ ಒಳಚರಂಡಿ ಹಾಗೂ ತ್ಯಾಜ್ಯದ ನೀರನ್ನು ನೇರವಾಗಿ ಶರಾಬಿ ಹೊಳೆಗೆ ಬಿಡ ಲಾಗುತ್ತಿದೆ.

ಇದರಿಂದ ಶರಾಬಿ ಹೊಳೆ ಕಲುಷಿತ ಗೊಂಡ ಕಪ್ಪುಬಣ್ಣಕ್ಕೆ ತಿರುಗಿ ದುರ್ವಾ ಸನೆ ಬೀರುತ್ತಿದೆ. ಅಲ್ಲದೆ ಸುತ್ತಮುತ್ತಲಿನ ಬಾವಿಯ ನೀರೆಲ್ಲ ಕಲುಷಿತಗೊಂಡು ಉಪಯೋಗಕ್ಕೆ ಬಾರದಂತಾಗಿದೆ ಎಂದು  ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಇವರ ಬೆಂಬಲಕ್ಕೆ ನಿಂತ ತಂಝೀಮ್ ಸಂಸ್ಥೆಯ ಸದಸ್ಯರು ಸೋಮವಾರ ಪುರಸಭೆ ಅಧಿಕಾರಿ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಗಳು ಹೊಸ ಪಂಪ್ ಬರಲು ಇನ್ನೂ 10 ದಿನ ಆಗುತ್ತದೆ ಎಂದು ತಿಳಿಸಿದರು. ನಂತರ ತಂಝೀಮ್ ಸಂಸ್ಥೆಯ ಪದಾ ಧಿಕಾರಿಗಳು ನಿಯೋಗದೊಂದಿಗೆ ಸಹಾ ಯಕ ಆಯುಕ್ತ ಮಂಜುನಾಥರನ್ನು ಭೇಟಿ ಮಾಡಿ ಸಮಸ್ಯೆಯನ್ನು ಗಮನಕ್ಕೆ ತಂದರು. ಸಹಾಯಕ ಆಯುಕ್ತರು ತಕ್ಷಣ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೇ ತಂಝೀಮ್ ಅಧ್ಯಕ್ಷ ಮುಜ್ಹಾಮಿಲ್ ಖಾಜಿಯಾ ಅವರು ಸಚಿವ ರೋಶನ್‌ಬೇಗ್‌ ಅವರನ್ನು ದೂರ ವಾಣಿ ಮೂಲಕ ಸಂಪರ್ಕಿಸಿ ಇಲ್ಲಿನ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಫೆ. 4ರಂದು ಭಟ್ಕಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿ ಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಂಝೀಮ್‌ನ ಪ್ರಧಾನ ಕಾರ್ಯದರ್ಶಿ ಮೊಹಿದ್ದೀನ್ ಅಲ್ತಾಫ್ ಖರೂರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.