ADVERTISEMENT

‘ಪೋಷಕರ ಗೊಂದಲ: ಸರ್ಕಾರಿ ಶಾಲೆಗಳಿಗೆ ಹಿನ್ನಡೆ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:44 IST
Last Updated 20 ಏಪ್ರಿಲ್ 2017, 7:44 IST

ಸಿದ್ದಾಪುರ:  ‘ಮಕ್ಕಳನ್ನು ಕನ್ನಡ ಅಥವಾ ಆಂಗ್ಲ ಮಾಧ್ಯಮಕ್ಕೆ ಸೇರಿಸಬೇಕು ಎನ್ನುವ ಪೋಷಕರಲ್ಲಿನ ಗೊಂದಲ ದಿಂದಾಗಿ ಸರ್ಕಾರಿ ಶಾಲೆಗಳು ಸೊರಗುತ್ತಿವೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪೋಷಕರಲ್ಲಿ ಆಂಗ್ಲ ವ್ಯಾಮೋಹ ಜಾಸ್ತಿಯಾಗುತ್ತಿದೆ. ತಾವು ಆಂಗ್ಲ ಶಿಕ್ಷಣ ಪಡೆಯದೆ ಯಾತನೆ ಅನುಭವಿಸು ತ್ತಿದ್ದೇವೆ ಎನ್ನುವ ಕೊರಗು ಅವರಲ್ಲಿದೆ. ಸ್ವಾಭಿಮಾನದ ಬದುಕು ಸಾಗಿಸಲು ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯ. ಇದು ಸರ್ಕಾರದ ನೀತಿಗೆ ವಿರುದ್ಧ ಎಂದು ತಿಳಿದಿದ್ದರೂ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆಂಗ್ಲ-ಕನ್ನಡ ಮಾಧ್ಯಮ ಎನ್ನುವ ದ್ವಂದ್ವದ ನಡುವೆ ಸರ್ಕಾರಿ ಶಾಲೆಗಳು ಮಾತ್ರ ಸೊರಗುತ್ತಿವೆ’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಕರ್ಯ ನೀಡಿದರೂ ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಇದೆ. ಸರ್ಕಾರಿ ಶಾಲೆಯಲ್ಲಿಯು  ಆಂಗ್ಲ ಮಾಧ್ಯಮದಲ್ಲಿ ಬೋಧಿಸಿದಾಗ ಖಾಸಗಿ ಶಾಲೆಗ ಳೊಂದಿಗೆ ಪೈಪೋಟಿ ನಡೆಸಬಹುದು. ವಿದ್ಯಾರ್ಥಿಗಳನ್ನು ಆಕರ್ಷಿಸಲು ಖಾಸಗಿ ಶಾಲೆಗಳು ನಡೆಸುವ ಕಸರತ್ತು ಸರ್ಕಾರಿ ಶಾಲೆಯಲ್ಲಿಯೂ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಿದಾಗ ಪೋಷಕರ ಚಿಂತೆ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಅರಸಮ್ಮಕಾನು ಸರ್ಕಾರಿ ಶಾಲೆ ಉಳಿ ಸುವ ಪ್ರಯತ್ನ ಶ್ಲಾಘನೀಯ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಪ್ರಿತಾ ಉದಯ ಕುಲಾಲ್, ತಾಲೂಕು ಪಂಚಾ ಯಿತಿ ಸದಸ್ಯ ಚಂದ್ರಶೇಖರ ಶೆಟ್ಟಿ ಸೂರ್ಗೋಳಿ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯ ರಾಮ ಶೆಟ್ಟಿ, ಅರಸಮ್ಮಕಾನು ದೇವಳದ ಆಡಳಿತ ಮೊಕ್ತೇಸರ ಬಿ.ಚಂದ್ರಶೇಖರ ಶೆಟ್ಟಿ, ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ ಹಾಂಡ, ನಿವೃತ್ತ ಅರಣ್ಯಾಧಿಕಾರಿ ರತ್ನಾಕರ ಶೆಟ್ಟಿ, ಮುಖ್ಯ ಶಿಕ್ಷಕಿ ವೇದಾವತಿ, ಎಸ್‍ಡಿಎಂಸಿ ಅಧ್ಯಕ್ಷ ಗಣೇಶ್ ಕುಮಾರ್  ಇದ್ದರು.

ನಿವೃತ್ತ ಶಿಕ್ಷಕರುಗಳಾದ ಬಿ.ಶಿವ ರಾಮ ಶೆಟ್ಟಿ, ಸಿ.ಸಂಜೀವ ಶೆಟ್ಟಿ, ಎಸ್. ರಾಮಕೃಷ್ಣ ನಾಯ್ಕ, ಕೆ.ಆನಂದ ಕೊಠಾರಿ, ವಿ.ಜನಾರ್ದನ ಶೆಟ್ಟಿಗಾರ್ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳ ಮೊಗ್ಗು ಪುಸ್ತಕ ಬಿಡುಗಡೆಗೊಳಿಸಿದರು.ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಎಸ್.ಶೇಖರ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.