ADVERTISEMENT

‘ಪ್ರತಿಭೆಗಳಿಗೆ ವೇದಿಕೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:25 IST
Last Updated 8 ಫೆಬ್ರುವರಿ 2017, 9:25 IST

ಅಂಕೋಲಾ: ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಅಂಕೋಲಾ ಉತ್ಸವ ಸಂಗಾತಿ ರಂಗಭೂಮಿಯ ಮೂಲಕ 5 ದಿನಗಳ ಕಾಲ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ವೇದಿಕೆಗಳು ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಸಾಧ್ಯವಾಗಿದೆ ಎಂದು ಲೋಕ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ, ಮಾಜಿ ಶಾಸಕ ಉಮೇಶ ಭಟ್ ಅಭಿಪ್ರಾಯಪಟ್ಟರು.

ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಸಂಗಾತಿ ರಂಗಭೂಮಿಯವರು ಹಮ್ಮಿಕೊಂಡ ಅಂಕೋಲಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ಜಿ.ಪ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಮಾಜಿ ಶಾಸಕ ಕೆ.ಎಚ್. ಗೌಡ, ಜಿ.ಪಂ. ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಸಾಹಿತಿ ಡಾ. ರಾಮಕೃಷ್ಣ ಗುಂದಿ, ವಕೀಲರಾದ ನಾಗರಾಜ ನಾಯಕ, ಉಮೇಶ ನಾಯ್ಕ, ಉದ್ದಿಮೆದಾರರಾದ ಸಾಯಿ ಗಾಂವಕರ, ಗಣಪತಿ ಮಾಂಗ್ರೆ, ಗೋಪಾಲಕೃಷ್ಣ ನಾಯಕ, ಪ್ರಾಚಾರ್ಯ ರವೀಂದ್ರ ಕೇಣಿ ಇತರರು ಮಾತನಾಡಿದರು.

ಪ್ರಮುಖರಾದ ಡಿ.ಎನ್. ನಾಯಕ, ವಿಠ್ಠಲದಾಸ ಕಾಮತ, ಸುಜಾತಾ ಗಾಂವಕರ, ಅಂಜಲಿ ಐಗಳ, ಮಂಜುನಾಥ ನಾಯ್ಕ, ಮಹಾಲಕ್ಷ್ಮೀ ಲಕ್ಷ್ಮೀನರಸಯ್ಯ, ಶಾಂತಾರಾಮ ನಾಯಕ ಅಗಸೂರು, ಕೆ.ಎಲ್. ನಾಯ್ಕ, ಶ್ರೀಧರ ನಾಯ್ಕ, ಮೋಹನ ಹಬ್ಬು, ಗಣಪತಿ ಬಾನಾವಳಿಕರ, ಮಂಜುಳಾ ನಾಯಕ, ಭಾಸ್ಕರ ನಾರ್ವೇಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಗಾತಿ ರಂಗಭೂಮಿಯ ಕಾರ್ಯಾಧ್ಯಕ್ಷ ಕೆ. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಾ ನಾಯ್ಕ ಬೊಬ್ರುವಾಡ ಸ್ವಾಗತಿಸಿದರು. ಸುಭಾಶ ಕಾರೇಬೈಲ್ ನಿರೂಪಿಸಿದರು. ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.