ADVERTISEMENT

ಫಲಪುಷ್ಪ ಪ್ರದರ್ಶನ ಫೆ.18ರಿಂದ

ಹೂಗಳಲ್ಲಿ ಮೈದಳೆಯಲಿರುವ ವಿಮಾನ, ತಬಲಾ, ವೀಣೆ; ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:40 IST
Last Updated 15 ಫೆಬ್ರುವರಿ 2017, 13:40 IST

ಶಿರಸಿ: ನಗರದ ಜನರಿಗೆ ಮುದನೀಡುವ ಫಲಪುಷ್ಪ ಪ್ರದರ್ಶನ ಈ ಬಾರಿ ಇದೇ 18ರಿಂದ 20ರವರೆಗೆ ಇಲ್ಲಿನ ತೋಟಗಾ ರಿಕಾ ಇಲಾಖೆಯ ಆವರಣದಲ್ಲಿ ನಡೆಯ ಲಿದೆ. ಪ್ರದರ್ಶನದ ಯಶಸ್ಸಿಗೆ ಭರದ ಸಿದ್ಧತೆಗಳು ಪ್ರಾರಂಭವಾಗಿವೆ.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಶಿಕಾಂತ ಕೋಟಿಮನಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ರೈತರಲ್ಲಿ ಪುಷ್ಪ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಫಲ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಪುಷ್ಪದಲ್ಲಿ ಮೂಡಿಬರಲಿರುವ ಯುದ್ಧ ವಿಮಾನ, ಹೂವಿನ ತಬಲಾ, ವೀಣೆ ವಿಶೇಷ ಆಕರ್ಷಣೆಗಳಾಗಿವೆ. ಬಗೆ ಬಗೆಯ ಹೂಗಳ ಜೋಡಣೆ, ಅಲಂಕಾ ರಿಕ ಉದ್ಯಾನ ವಿನ್ಯಾಸ, ಕಲಾಕೃತಿಗಳು ನೋಡುಗರನ್ನು ಸೆಳೆಯಲಿವೆ ಎಂದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ಬೆಳೆದ ತೋಟಗಾರಿಕಾ ಬೆಳೆ ಗಳಾದ ಹಣ್ಣು, ತರಕಾರಿ, ಸಂಬಾರ ಬೆಳೆ ಗಳು, ಸಂಸ್ಕರಣಾ ಪದಾರ್ಥಗಳ ಪ್ರದ ರ್ಶನ ನಡೆಯಲಿದೆ. ಆಯ್ಕೆಯಾದ ಉತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ನೀಡಲಾಗುತ್ತದೆ. ವಿವಿಧ ಇಲಾಖೆಗಳು, ಸ್ವ ಸಹಾಯ ಸಂಘಗಳ 50ಕ್ಕೂ ಅಧಿಕ ಮಳಿಗೆಗಳು ಇರುತ್ತವೆ. ಕೃಷಿಕರಿಗೆ ಅನು ಕೂಲವಾಗುವ ಉದ್ದೇಶದಿಂದ ಕೃಷಿ ಯಂತ್ರೋಪಕರಣ, ಕೀಟ ಮತ್ತು ರೋಗ ನಿಯಂತ್ರಣಕ್ಕೆ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಇದೇ 18ರ ಬೆಳಿಗ್ಗೆ 10 ಗಂಟೆ ಯಿಂದ ಪುಷ್ಪ ರಂಗೋಲಿ, ಹೂ ಜೋಡಣೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಫೆ.17ರ ಒಳಗಾಗಿ ಹೆಸರು ನೋಂದಾಯಿಸಬಹುದು. 19ರ ಬೆಳಿಗ್ಗೆ 10.30 ಗಂಟೆಯಿಂದ ವಿಚಾರ ಗೋಷ್ಠಿ ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆಯ ಲಿದೆ.

ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞ ವಿ.ಎಂ. ಹೆಗಡೆ, ಕಾಳುಮೆಣಸು ಬೇಸಾಯ ಮತ್ತು ಸಂಸ್ಕರಣೆ ಮಹತ್ವದ ಕುರಿತು ತೋಟ ಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಲಕ್ಷ್ಮಿನಾರಾಯಣ ಹೆಗಡೆ ಉಪನ್ಯಾಸ ನೀಡುವರು ಎಂದರು.

ಲಭ್ಯ ಅನುದಾನ: ಫಲಪುಷ್ಪ ಪ್ರದರ್ಶನಕ್ಕೆ ಸರ್ಕಾರದಿಂದ ₹ 9.20 ಲಕ್ಷ ಅನುದಾನ ದೊರೆತಿತ್ತು. ಅನುದಾನ ಈ ಬಾರಿ ಹಂಚಿ ಕೆಯಾಗಿದೆ. ಕಾರವಾರದಲ್ಲಿ ನಡೆದ ಕರಾ ವಳಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಹೀಗಾಗಿ ಇಲಾಖೆ ಯಲ್ಲಿ ಪ್ರಸ್ತುತ ₹ 5.20 ಲಕ್ಷ ಮಾತ್ರ ಅನುದಾನ ಲಭ್ಯವಿದೆ. ಮೂರು ದಿನಗಳ ಕಾರ್ಯಕ್ರಮಕ್ಕೆ ₹ 7.80 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಇಲಾಖೆ ಅಧಿಕಾರಿಗಳಾದ ನಾಗಾರ್ಜುನ ಗೌಡ, ಸತೀಶ ಹೆಗಡೆ, ಕೆ.ವಿ. ಕೂರ್ಸೆ ಇದ್ದರು.

ಉದ್ಘಾಟನೆ: ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಆತ್ಮ ಯೋಜನೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಜಂಟಿ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ 18ರ ಸಂಜೆ 4 ಗಂಟೆಗೆ ಚಾಲನೆ ನೀಡುವರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT