ADVERTISEMENT

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ

ಪಕ್ಷದ ಪ್ರಗತಿಗೆ ಶ್ರಮಿಸಲು ಕಾಂಗ್ರೆಸ್‌ ಅಭ್ಯರ್ಥಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:12 IST
Last Updated 23 ಏಪ್ರಿಲ್ 2018, 10:12 IST
ಯಲ್ಲಾಪುರ ತಾಲ್ಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಗೋಣಗುಂಡಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಕಾರ್ಯಕರ್ತರು
ಯಲ್ಲಾಪುರ ತಾಲ್ಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಗೋಣಗುಂಡಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಕಾರ್ಯಕರ್ತರು   

ಯಲ್ಲಾಪುರ: ‘ಈ ಬಾರಿಯ ಗೆಲುವಿಗೆ ಕ್ಷೇತ್ರಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನೆರವಾಗಲಿವೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರ ಹೆಳಿದರು.
ತಾಲ್ಲೂಕಿನ ಕುಂದರಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಣ ಗುಂಡಿ ಯಲ್ಲಿ ಬಿಜೆಪಿ ತೊರೆದ ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.
‘ನಮ್ಮ ಪಕ್ಷದ ಅಭಿಮಾನದಿಂದ ನೀವು ಬಂದಿದ್ದಿರಿ. ಪಕ್ಷ ನಿಷ್ಠೆಯಿಂದ ಹಗಲಿರುಳು ಶ್ರಮಿಸಿ ನನ್ನ ಗೆಲುವಿಗೆ ಕಾರಣರಾಗಬೇಕು. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳುವಲ್ಲಿ ಶ್ರಮಿಸಬೇಕು’ ಎಂದರು.

ಪ್ರಮುಖರಾದ ಎಂ.ಜಿ.ಭಟ್ಟ ಸಂಕದಗುಂಡಿ, ನರಸಿಂಹ ನಾಯ್ಕ, ರಾಘು ನಾಯ್ಕ ಬೆಳಲೆ, ಯುವರಾಜ ನಾಯ್ಕ, ಜಾನ್ ಡಿಸೋಜಾ ಉಪಸ್ಥಿತರಿದ್ದರು. ಪ್ರಮುಖರಾದ ಗಿರೀಶ ನಾಯ್ಕ, ಚೇತನ ಪೂಜಾರಿ, ಸಂತೋಷ ಪೂಜಾರಿ, ಸುನೀಲ ಪೂಜಾರಿ, ಅಶೋಕ ನಾಯ್ಕ, ಮಧುಕೇಶ್ವರ ನಾಯ್ಕ, ಸಂತೋಷ ನಾಯ್ಕ, ವಿನಾಯಕ ನಾಯ್ಕ, ರಮೇಶ ದೇವಾಡಿಗ, ರಾಮಚಂದ್ರ ಅಂಬಿಗ, ಚಂದ್ರಶೇಖರ ದೇವಾಡಿಗ, ರಾಮಚಂದ್ರ ದೇವಾಡಿಗ, ರವೀಂದ್ರ ನಾಯ್ಕ, ರಾಘವೇಂದ್ರ ನಾಯ್ಕ, ದರ್ಶನ ನಾಯ್ಕ,ನರಸಿಂಹ ಸಿದ್ದಿ, ಗಣಪತಿ ಗೌಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT