ADVERTISEMENT

ಮೂರು ತಿಂಗಳಲ್ಲಿ ಜಲಾಶಯ ಎತ್ತರ

ಅಧಿಸೂಚನೆಗೆ ಕಾಯುತ್ತಿರುವ ಕೆಬಿಜೆಎನ್ಎಲ್: ಬೇಸಿಗೆಯಲ್ಲಿ ನೀರು ತುಂಬುವ ಕಾರ್ಯಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:43 IST
Last Updated 30 ಜನವರಿ 2017, 5:43 IST
ಮೂರು ತಿಂಗಳಲ್ಲಿ ಜಲಾಶಯ ಎತ್ತರ
ಮೂರು ತಿಂಗಳಲ್ಲಿ ಜಲಾಶಯ ಎತ್ತರ   
ಆಲಮಟ್ಟಿ (ನಿಡಗುಂದಿ): ಕೃಷ್ಣಾ ನ್ಯಾಯಾಧೀಕರಣ ಪ್ರಾಧಿಕಾರ–2ರ ತೀರ್ಪಿನನ್ವಯ ಆಲಮಟ್ಟಿ ಜಲಾಶಯ ವನ್ನು 519.60 ಮೀಗಳಿಂದ 524.256 ಮೀಗೆ ಎತ್ತರಿಸಬೇಕಿದೆ, ಆದರೆ ಕೇಂದ್ರ ಸರ್ಕಾರ ತೀರ್ಪಿನ ಗೆಜೆಟ್‌ ಪ್ರಕಟಿಸಿಲ್ಲ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿ ಸಿದ ಮೂರು ತಿಂಗಳಲ್ಲಿ ಆಲಮಟ್ಟಿ ಜಲಾಶಯವನ್ನು 524.256 ಮೀಗೆ ಎತ್ತರಿಸಲಾಗುವುದು ಎಂದು ಕೆಬಿಜೆ ಎನ್ಎಲ್ ತಾಂತ್ರಿಕ ನಿರ್ದೇಶಕ ಪ್ರೊ.ಅರವಿಂದ ಗಲಗಲಿ ಹೇಳಿದರು.
 
524.256 ಮೀ ಇದ್ದ ಜಲಾಶಯದ ಗೇಟ್‌ ಅನ್ನು 519.60 ಮೀಟರ್‌ಗೆ ಕತ್ತರಿಸಲಾಗಿದೆ, ಕತ್ತರಿಸಿದ ಗೇಟ್‌ಗಳನ್ನು ಸುರಕ್ಷಿತವಾಗಿಡಲಾಗಿದೆ, ಕತ್ತರಿಸಿದ ಗೇಟ್‌ಗಳನ್ನು ಅಳವಡಿಸುವುದು ಸುಲಭ ಹಾಗೂ ಅವಧಿಯೂ ಕಡಿಮೆ, ಆದರೆ ಎತ್ತರ ಮಾಡಿದ ನಂತರ ಭೂ ಸ್ವಾಧೀನ, ಕಾಲುವೆಗಳ ಜಾಲ, ಪುನರ್ವಸತಿ ಕಾರ್ಯ ಪೂರ್ಣಗೊಂಡಿದ್ದರೆ 524. 256 ಮೀವರೆಗೆ ನೀರು ನಿಲ್ಲಿಸಲಾಗು ವುದು ಎಂದು ಶನಿವಾರ ಪತ್ರಕರ್ತರಿಗೆ ಆಲಮಟ್ಟಿಯಲ್ಲಿ ಅವರು ತಿಳಿಸಿದರು.
 
ಯುಕೆಪಿ ಮೂರನೇ ಹಂತದ ಪ್ರಮುಖ ಕಾಮಗಾರಿ ಮುಳವಾಡ ಏತ ನೀರಾವರಿ ಯೋಜನೆ ಹಂತ–3 ಹಾಗೂ ಚಿಮ್ಮಲಗಿ ಪೂರ್ವ ಹಾಗೂ ಪಶ್ಚಿಮ ಕಾಲುವೆಯ ಮುಖ್ಯ ಕಾಲುವೆಗಳ ಜಾಲವನ್ನು ಮುಂಬರುವ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕ ನೀರು ಹರಿಸುವ ನಿಟ್ಟಿನಲ್ಲಿ ತಾಂತ್ರಿಕ ಅಡೆತಡೆ ನಿವಾರಿಸಲಾಗುತ್ತಿದೆ ಎಂದರು.
 
ಸಭೆ: ಶನಿವಾರ ಇಡಿ ದಿನ ಮೂರನೇ ಹಂತದ ಯೋಜನಾವಾರು ಪ್ರಗತಿ ಪರಿ ಶೀಲನೆ ನಡೆಸಿದ ಪ್ರೊ.ಅರವಿಂದ ಗಲಗಲಿ, ಪ್ರಮುಖ ಸಮಸ್ಯೆಗಳು, ಗುತ್ತಿಗೆ ದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಸೂಚಿಸಿದರು. ಅಲ್ಲದೇ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ಭೂಸ್ವಾಧೀನಾಧಿಕಾರಿಗಳಿಗೆ ೂಚಿಸಿದರು.
 
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಇದೇ ಮುಂಗಾರು ಹಂಗಾಮಿನೊಳಗೆ ಮುಖ್ಯಕಾಲುವೆ ಗಳನ್ನು ಪೂರ್ಣಗೊಳಿಸಲು ಆದೇಶಿ ಸಿದ್ದು, ಹಣಕಾಸಿನ ಕೊರತೆ ಇಲ್ಲ. ಅದ ಕ್ಕಾಗಿ ಅಧಿಕಾರಿ ವರ್ಗದವರು ಯುದ್ಧೋ ಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಕೆರೆಗಳ ಭರ್ತಿಗೆ ಟೆಂಡರ್ಕ ರೆಯಲಾಗಿದ್ದು, ನಾಲ್ಕು ತಿಂಗಳಲ್ಲಿ ಪೂರ್ಣಗೊಂಡು ಇದೇ ಆಗಸ್ಟ್‌ ವೇಳೆಗೆ ನೀರು ಹರಿಸುವ ಪ್ರಕ್ರಿಯೆ ಆರಂಭಿಸ ಬೇಕು ಎಂದರು. ಮುಖ್ಯ ಎಂಜಿನಿಯರ್ ಎಸ್.ಎಚ್. ಮಂಜಪ್ಪ, ಎಸ್.ರಂಗ ರಾಮು, ಭೂ ಸ್ವಾಧೀನಾಧಿಕಾರಿ ಸೋಮಲಿಂಗ ಗೆಣ್ಣೂರ,  ಶಶಿಕಾಂತ ಹೊನವಾಡಕರ ಮೊದಲಾದವರಿದ್ದರು.
 
**
‘ಮುಂಗಾರು ಹಂಗಾಮಿಗೆ ಪ್ರಾಯೋಗಿಕ ನೀರು’
ಇದೇ ಮುಂಗಾರು ಹಂಗಾಮಿಗೆ ಪ್ರಾಯೋಗಿಕ ನೀರು ಹರಿಸುವುದು ಜಲಸಂಪನ್ಮೂಲ ಸಚಿವರ ಗುರಿಯಾ ಗಿದ್ದು, ಅದಕ್ಕಾಗಿ ಎಲ್ಲರೂ ಕಾರ್ಯೋನ್ಮುಖಗೊಂಡಿದ್ದೇವೆ ಎಂದು ಕೆಬಿಜೆಎನ್ಎಲ್ ತಾಂತ್ರಿಕ ನಿರ್ದೇಶಕ ಪ್ರೊ.ಅರವಿಂದ ಗಲಗಲಿ ಹೇಳಿದರು.
 
ಪ್ರಮುಖ ಅಡೆತಡೆಗಳಾದ ಕಾಲುವೆಗಳ ಜಾಲವನ್ನು ರೈಲು ಹಳಿ ಹಾಗೂ ಮೂರು ಕಡೆ ರಾಷ್ಟ್ರೀಯ ಹೆದ್ದಾರಿ ದಾಟಿಸುವುದಾಗಿದೆ. ಹೀಗಾಗಿ ಆಯಾ ಇಲಾಖೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅನು ಮತಿ ಪಡೆಯಲು ಪ್ರತ್ಯೇಕ ತಂಡ ರಚಿಸಿ ಅನುಮತಿಯ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
 
 ಮುಳವಾಡ ಏತ ನೀರಾವರಿ ಯಿಂದ 54 ಟಿಎಂಸಿ ಅಡಿಯಷ್ಟು ನೀರು ಜಿಲ್ಲೆಯಲ್ಲಿ ಹರಿಯಲಿದೆ. ವಿವಿಧ ಯೋಜನೆಗಳಿಗೆ ಮಾಸ್ಟರ್‌ ಪ್ಲ್ಯಾನ್‌ ಪ್ರಕಾರ ಹಂಚಿಕೆ ಮಾಡಲಾಗಿದೆ. ಮರುಹಂಚಿಕೆ ಮಾಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. 
 
**
ಭೂಸ್ವಾಧೀನ ಪ್ರಕ್ರಿಯೆ ನಿರಂತರವಾಗಿ ನಡೆದಿದ್ದು, ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ
-ಎಸ್‌.ಎಚ್.ಮಂಜಪ್ಪ,
ಮುಖ್ಯ ಎಂಜಿನಿಯರ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.