ADVERTISEMENT

ಶತಮಾನದಿಂದ ಕತ್ತಲೆಯಲ್ಲಿ ಬಾಜರಕುಣಂಗ!

ರಾಜ್ಯಕ್ಕೇ ಬೆಳಕು ನೀಡಿದ ಹಿರಿಮೆಯ ತ್ಯಾಗಮಯಿ ಗ್ರಾಮ ಪಂಚಾಯ್ತಿ ಅನಾಥ

​ಪ್ರಜಾವಾಣಿ ವಾರ್ತೆ
Published 6 ಜನವರಿ 2015, 8:36 IST
Last Updated 6 ಜನವರಿ 2015, 8:36 IST

ದಾಂಡೇಲಿ: ರಾಜ್ಯಕ್ಕೇ ಬೆಳಕು ನೀಡಿದ  ಬಾಜರಕುಣಂಗ ಕತ್ತಲ ಕೂಪದಲ್ಲಿದೆ. ಈ ಗ್ರಾಮ ಪಂಚಾಯ್ತಿಯೊಳಗೆ ರಾಜ್ಯದ ಎರಡನೇ ದೊಡ್ಡ ಸುಪಾ ಅಣೆಕಟ್ಟು 52 ಹಳ್ಳಿಯ ಜನರನ್ನು ಹೊರದಬ್ಬಿ ವಿರಾಜಮಾನವಾಗಿ ಕುಳಿತಿದೆ. ಇಡೀ ರಾಜ್ಯಕ್ಕೆ ಬೆಳಕನ್ನು ನೀಡುವ ಈ ಅಣೆಕಟ್ಟು ತನಗಾಗಿ ತ್ಯಾಗ ಮಾಡಿದ ಬಾಜರಕುಣಂಗ ಗ್ರಾಮ ಪಂಚಾಯ್ತಿಗೆ ಬೆಳಕೆ ನೀಡಿಲ್ಲ.

ಇಲ್ಲಿನ 1570 ಕುಟುಂಬಗಳು ಶತಮಾನ ಗಳಿಂದ ಕತ್ತಲೆಯಲ್ಲಿ ವಾಸಿಸುತ್ತಿದ್ದಾರೆ. ಬೆಳಕಿನ ಹಿಂದೆ ಕತ್ತಲು ಎಂಬಂತೆ ಅಣೆಕಟ್ಟು ಕಟ್ಟುವಾಗ ವಾಗ್ದಾನ ನೀಡಿದ್ದ ಕೆಪಿಸಿ ಮಾತಿಗೆ ತಪ್ಪಿ ಮೂರು ದಶಕಗಳೇ ಕಳೆದಿವೆ. ಬೇರೆ ಗ್ರಾಮ ಪಂಚಾಯ್ತಿಗಳಿಗೆ ಹೋಲಿಸಿದಾಗ ಕನಿಷ್ಠ ಮೂಲ ಸೌಲಭ್ಯ ವಿಲ್ಲದ ಏಕೈಕ ಗ್ರಾಮ ಪಂಚಾಯ್ತಿ ಎಂಬ ಹೆಸರಿಗೆ ಬಾಜರಕುಣಂಗ ಭಾಜನ ವಾಗಿದೆ. ಗೋವಾ ರಾಜ್ಯದ ಗಡಿಗೆ ತಾಗಿಕೊಂಡಿರುವ ಬಾಜರಕುಣಂಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ, ಆರೋಗ್ಯ ಸೇವೆ, ವಿದ್ಯುತ್, ಪಡಿತರ ವ್ಯವಸ್ಥೆ ಎಲ್ಲವೂ ಇಲ್ಲವೆನ್ನು ವುದು ಭಾಗದ ಹಿಂದುಳಿಯು ವಿಕೆಗೆ ಪ್ರಮುಖ ಕಾರಣ.

ಈಗ ಪ್ರವಾಸೋ ದ್ಯಮ ಇಲಾಖೆಯಿಂದ ಮಂಜೂರಾದ ಕಾಮಗಾರಿಗೆ ಅರಣ್ಯ ಇಲಾಖೆ ತೊಡಕು ಮಾಡುತ್ತಿರುವುದರಿಂದ ಜ. 6 ರಿಂದ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಇವರ ಮೂಲ ಹಕ್ಕಿನ ರಕ್ಷಣೆಗಾಗಿ ನಡೆಯುವ ಹೋರಾಟ ಮತ್ತು ಬದುಕಿಗಾಗಿ ನಡೆಯುವ ಹೋರಾಟ ಎಂದೇ ಅರ್ಥೈಸಲಾಗುತ್ತದೆ..

ಜೊಯಿಡಾ ತಾಲ್ಲೂಕು ರಾಜ್ಯದಲ್ಲಿ ಅತಿ ಹಿಂದುಳಿದ ತಾಲ್ಲೂಕಾಗಿದ್ದು ನಂಜುಡಪ್ಪ ವರದಿಯಲ್ಲಿ ಸೇರಿಸಿದ ಗಡಿ ತಾಲ್ಲೂಕಾಗಿದೆ. 15 ಗ್ರಾಮ
ಪಂಚಾಯ ್ತಿಗಳಲ್ಲಿ ಬಾಜರಕುಣಂಗ ಗ್ರಾಮ ಕಡಿಮೆ ಜನಸಂಖ್ಯೆನ್ನೊಳಗೊಂಡ ಅತಿ ಹಿಂದುಳಿದ ಗ್ರಾಮ ಪಂಚಾಯ ್ತಿಯಾಗಿದೆ. ಬ್ರಿಟಿಷರ ಕಾಲದಲ್ಲಿ ಡಿಗ್ಗಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಅಲ್ಪ ಪ್ರಮಾಣದಲ್ಲಾದರೂ ಅಭಿವೃದ್ಧಿ ಕಂಡಿತ್ತು. ಸ್ವಾತಂತ್ರ ನಂತರದ ಆರು ದಶಕಗಳಿಂದ ಈ ಬಾಜರಕುಣಂಗ ಗ್ರಾಮ ಪಂಚಾಯ್ತಿಗೆ ಅಭಿವೃದ್ಧಿ ಎನ್ನು ವುದು ಮರೀಚಿಕೆಯಾಗಿದೆ. 

ಮಳೆಗಾಲದ ಮೂರು ತಿಂಗಳಿಗಂತು ಹೊರ ಜಗತ್ತಿನ ಸಂಪರ್ಕವಿಲ್ಲದೇ ಸಂಪೂರ್ಣ ನಡುಗಡ್ಡೆಯಲ್ಲಿ ವಾಸಿಸ ಬೇಕು. ಇಲ್ಲವೆ ಗೋವಾ ಮೂಲಕ ತಾಲ್ಲೂಕು ಕೇಂದ್ರ ಸ್ಥಾನಕ್ಕೆ ಬರಬೇಕು. ಗೋವಾ ಗಡಿ ಬೊಂಡೇಲಿಯಿಂದ ತಾಲ್ಲೂಕಿನ ಮುಖ್ಯ ರಸ್ತೆ ಕಿರವತ್ತಿಗೆ ಬರಲು 38 ಕಿ.ಮೀ. ಕಾಲ್ನಡಿಗೆಯ ಲ್ಲಿಯೆ ಬರಬೇಕು.  ಜನ ಅನಾರೋಗ್ಯ ಕ್ಕೊಳಗಾದಾಗ ಮತ್ತು ಹೆರಿಗೆ ಸಂದರ್ಭ ದಲ್ಲಿ  ಕಂಬಳಿ ಜೋಲಿಯಲ್ಲಿ ತಾಲ್ಲೂಕು ಆಸ್ಪತ್ರೆಗೆ ಬರಬೇಕಾದ ಪರಿಸ್ಥಿತಿ ಇದೆ. 

ಆಹಾರದ ಹಕ್ಕಿನಿಂದ ವಂಚನೆ: ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಪರ್ಕದ ಕೊರತೆಯಿಂದ ಇಂದಿಗೂ ಸರ್ಕಾರದಿಂದ ನ್ಯಾಯಬೆಲೆ ಅಂಗಡಿ ಯನ್ನು ತೆರೆಯಲಾಗಿಲ್ಲದಿರುವುದು ಈ ಭಾಗದ ಜನರ ದುರಂತ. ಇಲ್ಲಿಯ ಎಲ್ಲಾ ಕುಟುಂಬಗಳು ಕಾತೇಲಿ ಗ್ರಾಮ ಪಂಚಾಯ್ತಿಯ ತೆರಾಳಿ ಹಾಗೂ ಕ್ಯಾಸಲ್‌ರಾಕ್ ನ್ಯಾಯಬೆಲೆ ಅಂಗಡಿ ಯಿಂದ ಆಹಾರ ಧಾನ್ಯಗಳನ್ನು 25 ಕಿ.ಮೀ ದೂರದಿಂದ ಕಾಲ್ನಡಿಯಲ್ಲಿ ಹೊತ್ತು ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.