ADVERTISEMENT

ಹೊನ್ನಾವರ ತಾಲ್ಲೂಕು ಸಮ್ಮೇಳನ ನಾಳೆ

ಹಿರಿಯ ಪತ್ರಕರ್ತ, ಬರಹಗಾರ ಜಿ.ಯು.ಭಟ್ ಅಧ್ಯಕ್ಷರಾಗಿ ಆಯ್ಕೆ; ಯಕ್ಷ ಸೌರಭ ಕುರಿತು ವಿಚಾರ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:37 IST
Last Updated 15 ಫೆಬ್ರುವರಿ 2017, 13:37 IST

ಹೊನ್ನಾವರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ನೇತೃತ್ವದಲ್ಲಿ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇ ಳನ ಸಮೀಪದ ಹಳದೀಪುರದ ಆರ್.ಇ.ಎಸ್. ಪಿಯು ಕಾಲೇಜು ಮೈದಾನದಲ್ಲಿ ಇದೇ 16ರಂದು ನಡೆಯಲಿದೆ.

ಸಮ್ಮೇಳನ ಸ್ಥಳಕ್ಕೆ ಯಕ್ಷಗಾನ ಮಹಾ ಕವಿ ವಿಷ್ಣು ಸಭಾಹಿತ ನಗರ ಎಂದು ನಾಮಕರಣ ಮಾಡಲಾಗಿದ್ದು, ಉಪ್ಪಿನ ಸತ್ಯಾಗ್ರಹ ಸಂಸ್ಮರಣಾ ವೇದಿಕೆಯಲ್ಲಿ ಸಮ್ಮೇಳನದ ಕಾರ್ಯ–ಕಲಾಪಗಳು ನಡೆಯಲಿವೆ.

ಫೆ.16ರಂದು ಬೆಳಿಗ್ಗೆ 8ಕ್ಕೆ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ರಾಷ್ಟ್ರ ಧ್ವಜಾರೋಹಣ ಮಾಡುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ನೆರವೇರಿಸುವರು.

8.30ಕ್ಕೆ ಪಂಚವಾದ್ಯ, ಕಲಾ ತಂಡಗಳ ಹಿನ್ನೆಲೆಯಲ್ಲಿ ಸಮ್ಮೇಳನ ಅಧ್ಯಕ್ಷರನ್ನು ನವಿಲಗೋಣ ಕ್ರಾಸ್‌ನಿಂದ ಸಮ್ಮೆಳನಾಂಗಣದವರೆಗೆ ಮೆರವಣಿಗೆ ಯಲ್ಲಿ ಕರೆತರಲಾಗುವುದು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗುಣಮಾಲಾ ಇಂದ್ರ ಮೆರವಣಿಗೆಗೆ ಚಾಲನೆ ನೀಡುವರು.
9.30ಕ್ಕೆ ಶಾಸಕಿ ಶಾರದಾ ಶೆಟ್ಟಿ ಸಮ್ಮೇಳನದ ಉದ್ಘಾಟನೆ ನೆರವೇರಿಸ ಲಿದ್ದು, ಹಿರಿಯ ಪತ್ರಕರ್ತ ಹಾಗೂ ಬರಹಗಾರ ಜಿ.ಯು.ಭಟ್ ಅಧ್ಯಕ್ಷತೆ ವಹಿ ಸುವರು. ಶಾಸಕ ಮಂಕಾಳ ವೈದ್ಯ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದು, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ವೆಂ.ಭ.ವಂದೂರು ಅವರಿಂದ ಧ್ವಜ ಹಸ್ತಾಂತರ ನಡೆಯ ಲಿದೆ.

ತಹಶೀಲ್ದಾರ್ ವಿ.ಆರ್.ಗೌಡ, ಉದ್ಯಮಿ ಎನ್.ಆರ್.ಹೆಗಡೆ ರಾಘೊಣ, ಸಾರಿಗೆ ಉದ್ಯಮಿ ವೆಂಕಟ್ರಮಣ ವಿ. ಹೆಗಡೆ, ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ, ಜಿಲ್ಲಾ ಪಂಚಾಯ್ತಿ ಸದಸ್ಯ ದೀಪಕ ನಾಯ್ಕ, ಶ್ರೀಕಲಾ ಶಾಸ್ತ್ರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅಣ್ಣಯ್ಯ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ ಕುರಿಯವರ, ಜಿ.ಸಿ.ನಾಯ್ಕ ಭಾಗವಹಿಸುವರು.

11.30ಕ್ಕೆ ‘ಹೊನ್ನಾವರ: ಅಕ್ಷರ ಸೌರಭ’ ಗೋಷ್ಠಿ ನಡೆಯಲಿದ್ದು ಡಾ.ಎಚ್.ಎಸ್.ಅನುಪಮಾ ಅಧ್ಯಕ್ಷತೆ ವಹಿಸುವರು. ಡಾ.ಜಿ.ಎಸ್.ಹೆಗಡೆ, ಶಂಕರಗೌಡ ಗುಣವಂತೆ, ಪ್ರಶಾಂತ ಮೂಡಲಮನೆ ವಿಷಯ ಮಂಡಿಸುವರು.

ಮಧ್ಯಾಹ್ನ 2ಕ್ಕೆ ‘ಸಮ್ಮೇಳನದ ನೆಲ:ಸಂವಾದ’ ಗೋಷ್ಠಿ ನಡೆಯಲಿದ್ದು ಕೃಷ್ಣಮೂರ್ತಿ ಹೆಬ್ಬಾರ, ಗುಣಮಾಲಾ ಇಂದ್ರ ವಿಷಯ ಮಂಡಿಸುವರು. ಡಾ.ಸುರೇಶ ನಾಯ್ಕ ‘ಹೊನ್ನಾವರ:ಯಕ್ಷ ಸೌರಭ’ ಎಂಬ 3ನೇ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು ಶಿವಾನಂದ ಹೆಗಡೆ ಕೃತಿ ಬಿಡುಗಡೆ ಮಾಡುವರು.

ಸತೀಶ ನಾಯ್ಕ ಕೃತಿಯ ಕುರಿತು ಮಾತನಾಡು ವರು. ಸಂಜೆ 4.30ಕ್ಕೆ ‘ಕವಿ ಸಮಯ’ ಗೋಷ್ಠಿ ನಡೆಯಲಿದ್ದು ಸಾಹಿತಿ ಪ್ರಭಾಕರ ಹೆಗಡೆ ಅಧ್ಯಕ್ಷತೆ ವಹಿಸುವರು. ಶ್ರೀಪಾದ ಹೆಗಡೆ ಕಣ್ಣಿ, ಕೃಷ್ಣ ಶರ್ಮ, ಎನ್.ಎಸ್. ಹೆಗಡೆ, ರಮೇಶ ಹೆಗಡೆ ಕೆರೆಕೋಣ, ಮಾಸ್ತಿ ಗೌಡ ಡಾ.ಇಸ್ಮಾಯಿಲ್ ತಲಕಣಿ, ಡಾ.ರಾಜು ಹೆಗಡೆ, ಕೆ.ವಿ.ಹೆಗಡೆ, ಜ್ಯೋತಿ ಶಾನಭಾಗ, ಸಿದ್ಧಲಿಂಗ ಸ್ವಾಮಿ ಮತ್ತಿತರರು ಕಾವ್ಯ ವಾಚನ ಮಾಡುವರು.

ಸಂಜೆ 6ಕ್ಕೆ ಸಮಾರೋಪ ಕಾರ್ಯ ಕ್ರಮ ನಡೆಯಲಿದ್ದು ಪರಿಸರ ತಜ್ಞ ಶಿವಾ ನಂದ ಕಳವೆ ಸಮಾರೋಪ ನುಡಿಗಳ ನ್ನಾಡುವರು.
ವಿವಿಧ ಕ್ಷೇತ್ರಗಳ 16 ಮಹನೀಯರಿಗೆ ಸನ್ಮಾನ ನಡೆಯಲಿದೆ. ರಾತ್ರಿ 7–30ರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು ತಾರಾ ಭಟ್ಟ, ಶಿವಾನಂದ ಭಟ್ಟ, ಸಂಗೀತಾ ನಾಯ್ಕ ಅವರಿಂದ ಸಂಗೀತ ಹಾಗೂ ಹಳದೀಪುರದ ಹವ್ಯಾಸಿ ಕಲಾ ತಂಡದಿಂದ ‘ಪರಿವರ್ತನೆ’ ನಾಟಕ ನಡೆಯುವುದು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.