ADVERTISEMENT

‘ಅಂಬಿಗರ ಚೌಡಯ್ಯ ಭವನಕ್ಕೆ ₹ 50ಲಕ್ಷ’

ಶಕ್ತಿ ಪ್ರದರ್ಶನವಾದ ಸುಣಗಾರರ ಜಾತಿ ಸಂಘಟನೆ: ವಾರದ ಸಂತೆ ರದ್ದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:20 IST
Last Updated 30 ಜನವರಿ 2017, 5:20 IST
‘ಅಂಬಿಗರ ಚೌಡಯ್ಯ ಭವನಕ್ಕೆ ₹ 50ಲಕ್ಷ’
‘ಅಂಬಿಗರ ಚೌಡಯ್ಯ ಭವನಕ್ಕೆ ₹ 50ಲಕ್ಷ’   

ಸಿಂದಗಿ: ರಾಜಕೀಯ ಸಂಘಟನೆಗೆ ಹೆಸ ರಾದ ಮಾಜಿ ಶಾಸಕ, ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶರಣಪ್ಪ ಸುಣಗಾರ ರಾಜಕೀಯವಾಗಿ ಹಿನ್ನೆಡೆ ಸಾಧಿಸಿದ ಕಾರಣ ಒಮ್ಮಿಂದೊಮ್ಮಲೇ ಜಾತಿ ಸಂಘಟನೆಗೆ ಮುಂದಾಗಿರುವುದು ರಾಜಕೀಯ ಅಸ್ತಿತ್ವದ ಹುಡುಕಾಟ ಎಂದು ರಾಜಕೀಯ ವಿಶ್ಲೇಷಕರು ‘ಪ್ರಜಾ ವಾಣಿ’ ಎದುರು ಅಭಿಮತ ವ್ಯಕ್ತಪಡಿಸಿದರು.

ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಬಹು ತೇಕ ಅತಿಥಿಗಳು ಶರಣಪ್ಪ ಸುಣಗಾರ ರದೇ ಗುಣಗಾನ ಮಾಡಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಸುಣ ಗಾರರನ್ನು ವಿಧಾನಪರಿಷತ್ ಸ್ಥಾನಕ್ಕೆ ನಾಮಕರಣ ಮಾಡುವಂತೆ ಒತ್ತಾಯಿಸಿ ದರು.
ಭಾನುವಾರ ಸಂಗಮೇಶ್ವರ ದೇವ ಸ್ಥಾನದ ಮೈದಾನದಲ್ಲಿ ಹಮ್ಮಿಕೊಂಡ ಅಂಬಿಗರ ಚೌಡಯ್ಯನವರ ಜಯಂತಿ ಸಮಾರಂಭದಲ್ಲಿ ಕೇಳಿ ಬಂದ ಮಾತುಗಳು.

ಉದ್ಘಾಟನೆ: ಶಾಸಕ ರಮೇಶ ಭೂಸ ನೂರ, ಮಾಜಿ ಶಾಸಕ ಶರಣಪ್ಪ ಸುಣ ಗಾರ ಸಮಾರಂಭ ಉದ್ಘಾಟಿಸಿದರು.
ಶಾಸಕ ಭೂಸನೂರ ಅಂಬಿಗರ ಚೌಡಯ್ಯನವರ ಭವನ ಸಿಂದಗಿಯಲ್ಲಿ ನಿರ್ಮಾಣ ಮಾಡಲು ತಮ್ಮ ಅನುದಾನ ದಲ್ಲಿ ₹ 50 ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.

‘ನಾ ಸುಳ್ಳು ಹೇಳುವ ಶಾಸಕನಲ್ಲ ಈ ಒಂದು ವರ್ಷದಲ್ಲಿ ಭವನ ನಿರ್ಮಾಣ ಮಾಡಿ ತೋರಿಸುವೆ’ ಎಂದು ಭರವಸೆ ನೀಡಿದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್.ಕೆ.ಮೇಲಕಾರ ಉಪನ್ಯಾಸ ನೀಡಿ ಈ ಸಮಾವೇಶ ಸಮಾಜದ ಪರಿವರ್ತನೆ ವೇದಿಕೆಯಾಗಲಿ ಎಂದರು.

ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಮಾಜಿ ಸಚಿವ ಎಂ.ಸಿ.ಮನಗೂಳಿ, ಕೋಲಿ ಸಮಾಜ ರಾಜ್ಯ ಘಟಕದ ಗೌರ ವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಶಿವ ಕುಮಾರ ನಾಟೀಕಾರ ಮಾತನಾಡಿದರು. ಎಸ್.ಐ ರಾಂಪೂರ ಸ್ವಾಗತಿಸಿದರು. ಡಿ.ಬಿ.ತಳವಾರ ನಿರೂಪಿಸಿದರು.

ಮೆರವಣಿಗೆ: ಶರಣ ಅಂಬಿಗರ ಚೌಡಯ್ಯ ನವರ ಭಾವಚಿತ್ರದ ಮೆರವಣಿಗೆ ಪಟ್ಟ ಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಇದಕ್ಕಾಗಿ ವಾರದ ಸಂತೆ ರದ್ದಾದ ಕಾರಣ ಸಾರ್ವಜನಿಕರು ಪೋಲಿಸರು ಮತ್ತು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.