ADVERTISEMENT

ಅನಧಿಕೃತ ಘಟಕಗಳಿಗೆ ಬೀಗಮುದ್ರೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 7:01 IST
Last Updated 15 ಮಾರ್ಚ್ 2017, 7:01 IST
ವಿಜಯಪುರ ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕುಡಿಯುವ ನೀರಿನ ಘಟಕಗಳ ಮೇಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿ, ಬೀಗ ಹಾಕಿದರು.
ವಿಜಯಪುರ ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕುಡಿಯುವ ನೀರಿನ ಘಟಕಗಳ ಮೇಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿ, ಬೀಗ ಹಾಕಿದರು.   

ವಿಜಯಪುರ: ನಗರ ಪ್ರದೇಶದಲ್ಲಿ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌) ಪ್ರಮಾಣ ಪತ್ರ ಪಡೆ ಯದೇ ಅನಧಿಕೃತವಾಗಿ ಕಾರ್ಯ ನಿರ್ವ ಹಿಸುತ್ತಿದ್ದ ಕುಡಿಯುವ ನೀರಿನ ಘಟಕ ಗಳ ಮೇಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿ, ಎಂಟು ಘಟಕಗಳನ್ನು ಬೀಗ(ಸೀಜ್‌) ಹಾಕಲಾಗಿದೆ.

ಅನಧಿಕೃತ ಕುಡಿಯುವ ನೀರಿನ ಘಟಕಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಜೊತೆಗೆ ಕಾಯಿಲೆಗಳು ಬರುತ್ತಿರುವುದನ್ನು ಮನಗಂಡು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಜಿಲ್ಲಾಧಿಕಾರಿ ದಾಳಿ ನಡೆಸಿದರು.

ನಗರದಲ್ಲಿರುವ ಒಟ್ಟು 9 ಅನಧಿಕೃತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕ ಗಳನ್ನು ಪರಿಶೀಲಿಸಲಾಯಿತು. ಈ ಎಲ್ಲ  ಘಟಕಗಳಿಗೆ ನೋಟಿಸ್ ಜಾರಿ ಗೊಳಿಸಿ, ಅವುಗಳಲ್ಲಿ 8 ಘಟಕಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿ ಸಿದ್ದು, ಎಲ್ಲ ಘಟಕಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ನಗರದ  ಹವೇಲಿ ಗಲ್ಲಿಯ ಅಬ್ದುಲ್‌ ಹಮೀದ್‌ ಎಸ್. ಇನಾಂದಾರ ಅವರ ನೀರಿನ ಘಟಕ, ಮನಗೂಳಿ ರಸ್ತೆಯ ಶ್ರೀಶೈಲಗೌಡ ಆರ್. ತಿಪ್ಪೆಗೌಡ ಅವರ ರುಚಿ ನೀರಿನ ಘಟಕ, ಸಾಯಿ ಪಾರ್ಕ್‌ನ ಜಮೀರ್‌ ಅಹ್ಮದ್‌ ದಖನಿ ಅವರ ಫೈನ್ ಅಕ್ವಾ ಘಟಕ, ವಿವೇಕ ನಗರದ ಸುರೇಶ ದತ್ತಾತ್ರೇಯ ಅವರ ಫ್ರೆಶ್ ಅಕ್ವಾ ಘಟಕ, ಸುಕೂನ್ ಸಿಟಿ ಹಿಂದಗಡೆಯ ಬಾಬಾಸಾಹೇಬ್ ಭದ್ರಗೊಂಡ ಅವರ ಗಂಗಾಜಲ ಘಟಕ, ಆದರ್ಶ ನಗರದ ಈರಣ್ಣ ಪಾಟೀಲ ಅವರ ನಿರ್ಮಲ್ ವಾಟರ್, ಅಥಣಿ ರಸ್ತೆಯ ಬಸನಗೌಡ ಸಾಹೇಬಗೌಡ ಪಾಟೀಲ ಅವರ ಸಹ್ಯಾದ್ರಿ ಘಟಕ, ಗೋಡಬೋಳೆ ಮಾಳಾದ ಪ್ರದೀಪ ಭೀಮಣ್ಣ ಕುವಳ್ಳಿಯವರ ನೀರು ಘಟಕ ಹಾಗೂ ಚಾಂದ್‌ ಬಾವಡಿಯ ಗುರುಲಿಂಗಪ್ಪ ಬಗಡಿ ಅವರ ಓಜೆಸ್ ಘಟಕಗಳಿಗೆ ಬೀಗ ಹಾಕಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಉಮೇಶ ನಾಯಕ್, ಜಿಲ್ಲಾ ಅಂಕಿತ ಅಧಿಕಾರಿ ಡಾ.ಎಸ್.ಎ.ಮೈಲಾರೆ, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಡಾ.ಗುಂಡ ಬಾವಡಿ, ಆಹಾರ ಸುರಕ್ಷತೆ ಅಧಿಕಾರಿ ಇ.ಎಚ್.ಫಾರೂಕಿ, ಎಂ.ಜಿ.ಜೀರ್, ದೀಪಕ ಜಿ.ಕಟವಾಕರ, ಶಾಬಾಷ ಪಟೇಲ್‌, ಅಕ್ಬರ್ ಬಾದಶಾ, ಜಿ.ಎಲ್. ರಾಠೋಡ, ಬಿ.ಎಸ್.ತಳವಾರ,  ಪಾಲಿಕೆ ಪರಿಸರ ಅಧಿಕಾರಿ ಜಗದೀಶ, ಡಾ.ಎಸ್. ಬಿ.ಕರ್ಜಗಿ, ಎ.ಎಂ.ಕಲ್ಹಾರ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.