ADVERTISEMENT

ಆಶ್ರಯ ಮನೆ ಉಳ್ಳವರ ಪಾಲು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 7:11 IST
Last Updated 7 ಜುಲೈ 2017, 7:11 IST

ಸಿಂದಗಿ: ಪಂಚಾಯತ ರಾಜ್ ಇಲಾಖೆ ಯಿಂದ ಸಿಂದಗಿ ತಾಲ್ಲೂಕಿನ ಪ್ರತಿ ಯೊಂದು ಗ್ರಾಮ ಪಂಚಾಯ್ತಿಗಳಲ್ಲಿ ನಿವೇಶನ ರಹಿತ ಕಡು ಬಡವರಿಗೆ ನೀಡ ಬೇಕಾದ ಆಶ್ರಯ ಮನೆಗಳು ಉಳ್ಳವರು, ರಾಜಕಾರಣಿಗಳ ಪಾಲಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಆಯಾ ಗ್ರಾಮ ಪಂಚಾಯ್ತಿ ಪಿಡಿಓ ಮತ್ತು ಕೆಲವು ಸದಸ್ಯರು ಇಂಥ ಅವ್ಯವಹಾರ ದಲ್ಲಿ ಭಾಗಿಗಳಾಗಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ ಎಚ್ಚರಿಕೆ ನೀಡಿದರು.

ನಗರದ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸ್ವಚ್ಛ ಭಾರತ ಯೋಜನೆ ತಾಲ್ಲೂಕು ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಶ್ರಯ ಮನೆಗಳ ಅವ್ಯವಹಾರದಲ್ಲಿ ತೊಡಗಿಕೊಂಡಿರುವ ಅಧಿಕಾರಿ ವರ್ಗ, ರಾಜಕಾರಣಿಗಳು ತಾವು ಮಾಡಿದ ತಪ್ಪನ್ನು ಕೂಡಲೇ ಸರಿಪಡಿಸಿಕೊಳ್ಳದಿ ದ್ದಲ್ಲಿ ಕಾನೂನು ಕ್ರಮ ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆಲವು ಪಿಡಿಒಗಳ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಎಲ್ಲ ಪಿಡಿಒಗಳ ಎರಡು ತಿಂಗಳ ಸಂಬಳ ತಡೆ ಹಿಡಿದಿದ್ದರೂ ಯಾವ ಒಬ್ಬ ಪಿಡಿಒ ಕೂಡ ಈ ಬಗ್ಗೆ ಪ್ರಶ್ನೆ ಮಾಡದೇ ಇದ್ದುದ್ದನ್ನು ಗಮನಿಸಿದರೆ ಅವರಿಗೆ ಬೇರೆ ಮೂಲಗಳಿವೆ ಎಂಬು ವುದು ಮೇಲ್ನೊಟಕ್ಕೆ ತೋರಿಸಿಕೊಡುತ್ತದೆ ಎಂದು ತಿಳಿಸಿದರು.

ADVERTISEMENT

ಗ್ರಾಮಗಳು ಬಯಲು ಶೌಚಮುಕ್ತ ವನ್ನಾಗಿಸಲು ಸರ್ಕಾರ ಸಹಾಯಧನ ನೀಡಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಇದರ ಸದ್ಭಳಕೆ ಮಾಡಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡರು.

ಸಿಂದಗಿ ತಾಲ್ಲೂಕಿನಲ್ಲಿ ಬಹುತೇಕ ಶಾಲೆಗಳು ಸರ್ಕಾರದಿಂದ ಅನುಮತಿ ಪಡೆಯದೇ ಪಾಲಕರಿಂದ ಕಾನೂನು ಬಾಹಿರವಾಗಿ ಲಕ್ಷಾಂತರ ಹಣ ಪಡೆದು ಮಕ್ಕಳಿಗೆ ಪ್ರವೇಶ ನೀಡುತ್ತಿವೆ. ಇಂಥ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅವುಗಳ ವಿರುದ್ದ ಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯ ದರ್ಶಿ ಶಶಿಧರ ಮಾತನಾಡಿ, 14ನೇ ಹಣಕಾಸು ಯೋಜನೆ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡ ಬೇಕು. ಅದರಲ್ಲಿ ಶೇ 25 ರಷ್ಟು ಅನು ದಾನ ಎಸ್.ಸಿ/ಎಸ್.ಟಿ ಕಾಮಗಾರಿಗಳಿ ಗಾಗಿ ಕಡ್ಡಾಯವಾಗಿ ಕಾಯ್ದಿರಿಸಬೇಕು. ಶೇ 20 ರಷ್ಟು ಅನುದಾನ ಕುಡಿಯುವ ನೀರು ಸರಬರಾಜು, ಶೇ 15 ರಷ್ಟು ಅನುದಾನ ಘನತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ವಹಣೆ, ಒಳಚರಂಡಿಗಳ ಕಾಮಗಾರಿ ಗಳಿಗಾಗಿ ವಿನಿಯೋಗಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಗೈರು ಉಳಿದ ಅಧಿಕಾರಿ ಗಳು, ಪಿಡಿಒ ಮೇಲೆ ಕ್ರಮ ಜರುಗಿಸು ವಂತೆ ಸೂಚಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ಸಿರಸಗಿ, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯ ದರ್ಶಿ ಸಿ.ಬಿ.ಕುಂಬಾರ, ಇಒ ಡಾ.ಸುಭಾಷ್ ಟಕ್ಕಳಕಿ ಇದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿಂದೂರಾಯಗೌಡ ಪಾಟೀಲ, ಗುರು ರಾಜ ಪಾಟೀಲ, ವಿಜಯಲಕ್ಷ್ಮಿ ನಾಗೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.