ADVERTISEMENT

ಇಂಗ್ಲೀಷ ಶಾಲೆಯಲ್ಲಿ ಕನ್ನಡ ಸಿರಿ ಸಂಭ್ರಮ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 7:23 IST
Last Updated 19 ನವೆಂಬರ್ 2017, 7:23 IST

ಇಂಡಿ: ಗಡಿಭಾಗ ಇಂಡಿಯ ಕೇಂದ್ರ ಸ್ಥಾನದಲ್ಲಿ ಈಚೆಗೆ ಸ್ಥಾಪನೆಗೊಂಡಿರುವ ಆರ್.ಎಂ. ಶಹಾ ಸಿ.ಬಿ.ಎಸ್.ಇ. ಪಬ್ಲಿಕ್ ಶಾಲೆಯಲ್ಲಿ ಕನ್ನಡದ ಸಿರಿ ಸಂಭ್ರಮ ಅತ್ಯಂತ ಅದ್ಧೂರಿಯಾಗಿ ಆಚರಣೆಗೊಳ್ಳುತ್ತಿರುವದು ಅತ್ಯಂತ ಸಂತಸ ತಂದಿದೆ ಎಂದು ಸಾಹಿತಿ ರಾಮಚಂದ್ರ ಬಿರಾದಾರ ಅಭಿಪ್ರಾಯಪಟ್ಟರು.

ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಸಿ.ಬಿ.ಎಸ್.ಇ. ಶಾಲೆಯಲ್ಲಿ ಶನಿವಾರ 62ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ಆಯೋಜಿಸಿದ್ದ ಕನ್ನಡ ಸಿರಿ ಸಂಭ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಇಂಗ್ಲೀಷ ಶಾಲೆಯಲ್ಲಿ ಕನ್ನಡ ಸಿರಿ ಸಂಭ್ರಮ ಆಚರಿಸಿ ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡಿಸುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಡಾ.ಕಾಂತು ಇಂಡಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನವ್ಹೆಂಬರ 1 ರಂದು ಮಾತ್ರ ಆಚರಿಸುತ್ತಿರುವದು ವಾಡಿಕೆ. ಆದರೆ ಆರ್.ಎಂ. ಶಹಾ ಸಿ.ಬಿ.ಎಸ್.ಇ. ಇಂಗ್ಲೀಷ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಅತ್ಯಂತ ರುಚಿಕಟ್ಟಾದ ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳ ಮನಸ್ಸು ಕನ್ನಡ ಮಾತೃಭಾಷೆಗೆ ಕೊಂಡೋಯ್ಯುತ್ತಿದ್ದಾರೆ ಎಂದರು.

ADVERTISEMENT

ತಾಲ್ಲೂಕು ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ.ಬಂಡಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ದೇವರ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ.ತಳಕೇರಿ, ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ನಾನಾಗೌಡ ಪಾಟೀಲ, ಡಿ.ಆರ್.ಶಹಾ, ಸುಧಾ ಅರಕೇರಿ, ಎ.ಎಸ್.ಗಾಣಿಗೇರ, ಸಿಂದಗಿ ಪೋರವಾಲ, ಬಿ.ಎನ್.ಪಾಟೀಲ ಉಪಸ್ಥಿತರಿದ್ದರು. ಪ್ರಾಚಾರ್ಯೆ ಸುಧಾ ಅರಕೇರಿ ಸ್ವಾಗತಿಸಿದರು. ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.