ADVERTISEMENT

‘ಕಂಪ್ಯೂಟರ್ ಆವಿಷ್ಕಾರಕ್ಕೆ ಸಂಖ್ಯಾಶಾಸ್ತ್ರವೇ ಆಧಾರ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:37 IST
Last Updated 4 ಮಾರ್ಚ್ 2017, 6:37 IST

ವಿಜಯಪುರ: ಗಣಕ ವಿಜ್ಞಾನದ (ಕಂಪ್ಯೂಟರ್) ಆವಿಷ್ಕಾರ ಮತ್ತು ಬೆಳವಣಿಗೆಗೆ ಮೂಲ ಆಧಾರ ಸಂಖ್ಯಾಶಾಸ್ತ್ರ. ಆಧುನಿಕ ಸಂಖ್ಯಾಶಾಸ್ತ್ರಕ್ಕೆ ಆರ್ಯಭಟ ಮತ್ತು ಭಾಸ್ಕರಾಚಾರ್ಯರ ಕೊಡುಗೆ ಅಪಾರ ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಅಭಿಪ್ರಾಯಪಟ್ಟರು.

ನಗರದ ಸಮೀಪದ ರಾಜ್ಯ ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ವಿವಿಯ ಗಣಕ ವಿಜ್ಞಾನ ವಿಭಾಗದ ವತಿಯಿಂದ ಶುಕ್ರವಾರ ನಡೆದ ಗಣಕ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ 2 ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಆದಿ ಕಾಲದಿಂದಲೂ ತಂತ್ರಜ್ಞಾನಗಳ ಬೀಡಾಗಿದ್ದು, ಇವತ್ತು ಜಗತ್ತಿನೆಲ್ಲೆಡೆ 'ಐಟಿ ಕ್ಷೇತ್ರದ ರಾಜ' ಎನ್ನುವ ಹಿರಿಮೆಯನ್ನು ಪಡೆದು ಕೊಂಡಿದೆ. ಆಧುನಿಕತೆಯ ಪ್ರಭಾವ ದಿಂದ ಗಣಕ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಸುಧಾ ರಣೆಗಳಾಗಿದ್ದು, ಅವುಗಳ ಸದುಪ ಯೋಗ ಪಡೆದುಕೊಳ್ಳಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯ ಗಣಕ ವಿಜ್ಞಾನ ವಿಭಾಗದ ಪ್ರೊ. ಪಿ.ನಾಗಭೂಷಣ್ ಮಾತನಾಡಿ, ‘ಇಂದು ನಾವು ಮಾಡುತ್ತಿರುವ ಸಾಧನೆಗಳಿಗೆ ನಿನ್ನೆಯ ಪರಿಶ್ರಮ ಮತ್ತು  ಸಂಶೋಧನೆ ಗಳೇ ಕಾರಣ ಎಂದರು.

ರಾಜ್ಯ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ವಿಜ್ಞಾ ನವನ್ನು ಎಲ್ಲರೂ ಆಳವಾಗಿ ಅರಿತು, ತಮ್ಮ ತಮ್ಮ ನೆಲೆಗಟ್ಟಿನಲ್ಲಿ ಗ್ರಹಿಸಿ, ಆಧುನಿಕ ಶೈಲಿಯ ಜೀವನದಲ್ಲಿ ಅಳವಡಿ ಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಸಂಯೋಜನಾಧಿಕಾರಿ ಮತ್ತು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಅಜೀಜ್ ಮಕಾನ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿ ಕುಲಸಚಿವ ಪ್ರೊ.ಕೆ.ಪಿ.ಶ್ರೀನಾಥ ವೇದಿಕೆ ಮೇಲಿದ್ದರು. ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿನಿ ರಶ್ಮಿ ಸೋಮಶೇಖರ್ ನಿರೂಪಿಸಿ, ಅನಿತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.