ADVERTISEMENT

ಕಾಂಗ್ರೆಸ್‌ ವಿದ್ಯಮಾನಗಳತ್ತ ಎಲ್ಲರ ಚಿತ್ತ!

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:33 IST
Last Updated 23 ಮೇ 2017, 8:33 IST

ವಿಜಯಪುರ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗಳು, 2018ರ ವಿಧಾನಸಭಾ ಚುನಾವಣೆಯಲ್ಲಿ ‘ಕೈ’ ಹಿಡಿಯುವ ಸಾಧ್ಯತೆಗಳು ದಟ್ಟೈಸಿವೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ನಡೆಯುವ ವಿದ್ಯಮಾನದ ಮೇಲೆ ಈ ಬೆಳವಣಿಗೆ ನಡೆಯಲಿದೆ. ನಿರೀಕ್ಷೆಯಂತೆ ಕಾಂಗ್ರೆಸ್‌ನ ಹಾಲಿ ಶಾಸಕರೊಬ್ಬರು ಪಕ್ಷ ಬದ ಲಾಯಿಸಿದರೆ, ಜೆಡಿಎಸ್‌ ಅಭ್ಯರ್ಥಿಯಾಗಿ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖ ಮುಖಂಡರೊಬ್ಬರು ‘ತೆನೆ’ ಯನ್ನು ಕೆಳಗಿಳಿಸಿ ‘ಕೈ’ ತೆಕ್ಕೆಗೆ ಜಾರು ವುದು ಬಹುತೇಕ ಖಚಿತ ಎಂಬುದನ್ನು ಜಿಲ್ಲಾ ಘಟಕದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಜಿಲ್ಲೆಯ ಕೆಲ ಹಾಲಿ ಶಾಸಕರ ವಿರುದ್ಧ ಪಕ್ಷದೊಳಗೆ ಹಾಗೂ ಕ್ಷೇತ್ರದಲ್ಲಿ ಅತೀವ ಅಸಮಾಧಾನ ವ್ಯಕ್ತವಾಗುತ್ತಿದ್ದು, 2018 ರಲ್ಲೂ ಕ್ಷೇತ್ರ ‘ಕೈ’ವಶದಲ್ಲೇ ಉಳಿಸಿ ಕೊಳ್ಳಲು ಕಾಂಗ್ರೆಸ್‌ ರಣತಂತ್ರ ರೂಪಿಸಿದೆ. ಇದು ಕಾರ್ಯಾನುಷ್ಠಾನಕ್ಕೆ ಬಂದರೆ ಹಾಲಿ ಶಾಸಕರ ಬದಲು, ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ತುರುಸಿನ ಸ್ಪರ್ಧೆಯೊಡ್ಡಿ, ಕೆಲವೇ ಮತ ಗಳ ಅಂತರದಿಂದ ಪರಾಭವ ಗೊಂಡಿದ್ದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಚಿಂತನೆಯನ್ನು ‘ಕೈ’ ಪಡೆ ನಡೆಸಿದೆ.

ADVERTISEMENT

ಈ ಸಂಬಂಧ ಈಗಾಗಲೇ ಅಭ್ಯರ್ಥಿಯ ಜತೆ ಹಲ ಸುತ್ತಿನ ಮಾತುಕತೆ ನಡೆದಿದೆ ಎಂದು ಹೆಸರು ಬಹಿರಂಗಪಡಿಸ ಬಾರದು ಎಂಬ ಷರತ್ತಿನೊಂದಿಗೆ ಜೆಡಿಎಸ್‌ ಪ್ರಮುಖರೊಬ್ಬರು ತಿಳಿಸಿದರು. ದೇವರಹಿಪ್ಪರಗಿ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಎ.ಎಸ್‌.ಪಾಟೀಲ ನಡಹಳ್ಳಿ, ಶಾಂತನಗೌಡ ಪಾಟೀಲ ನಡಹಳ್ಳಿ ಸ್ಪರ್ಧೆ ಬಹುತೇಕ ಖಚಿತ ಪಟ್ಟಿದೆ. ಹಿಂದಿನ ಚುನಾವಣೆಯಲ್ಲಿ ದೇವರ ಹಿಪ್ಪರಗಿಯಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ರೇಷ್ಮಾ ಪಡೇಕನೂರ, ಇದೀಗ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು, ಕಸರತ್ತು ನಡೆಸಿದ್ದಾರೆ.

ಟಿಕೆಟ್‌ಗಾಗಿ ಈಗಲೇ ತೀವ್ರ ಪೈಪೋಟಿ ಆರಂಭಗೊಂಡಿದೆ. ಅಲ್ಪ ಸಂಖ್ಯಾತ ವರ್ಗದವರಿಂದಲೇ ಟಿಕೆಟ್‌ಗೆ ಲಾಬಿ ನಡೆದಿರುವುದು ವಿಶೇಷ. ಕೊಂಚ ಆಸುಪಾಸಾದರೂ ಇಲ್ಲೂ ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚಿದೆ.ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಅವಧಿಗೆ ಸ್ಪರ್ಧಿಸುವಂತೆ ಸ್ಥಳೀಯರು ಮಾಜಿ ಸಚಿವ ಎಂ.ಸಿ. ಮನಗೂಳಿ ಮೇಲೆ ಒತ್ತಡ ಹಾಕುತ್ತಿ ದ್ದಾರೆ. ಮಾಜಿ ಸಚಿವರಿಗೆ ತಮ್ಮ ಕಣ್ಮುಂದೆಯೇ ಅಶೋಕ ಮನಗೂಳಿ ಯನ್ನು ವಿಧಾನಸಭೆಗೆ ಕಳುಹಿಸಬೇಕು ಎಂಬ ಆಶಯ. ಒಂದೆಡೆ ಕುರ್ಚಿ ಮೋಹ.

ಇನ್ನೊಂದೆಡೆ ಪುತ್ರ ವ್ಯಾಮೋಹ. ಎರಡರ ನಡುವೆ ಮನಗೂಳಿ ಯಾವುದನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಯಕ್ಷ ಪ್ರಶ್ನೆ ಜೆಡಿಎಸ್‌ ಕಾರ್ಯಕರ್ತರನ್ನು ಬೆಂಬಿಡದೆ ಕಾಡುತ್ತಿದೆ.

ಒಗ್ಗಟ್ಟಿಲ್ಲ: ‘ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅಪಾರ ಸಂಖ್ಯೆಯ ಕಾರ್ಯಕರ್ತರ ಪಡೆಯಿದೆ. ಆದರೆ ಕೊರತೆಯಿರುವುದು ನಾಯಕತ್ವ ದಲ್ಲೇ. ಬಹುತೇಕರು ತಮ್ಮ ಕ್ಷೇತ್ರಕ್ಕೆ ಮೀಸಲಾಗಿದ್ದಾರೆ. ಇಡೀ ಜಿಲ್ಲೆಯ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸು ವವರು, ಮುಖಂಡರನ್ನು ಒಟ್ಟಿಗೆ ಕರೆ ದೊಯ್ಯುವ ಸಾಮರ್ಥ್ಯವಿರುವ ನಾಯಕರು ಪ್ರಸ್ತುತ ಜಿಲ್ಲಾ ಜೆಡಿಎಸ್‌ ಘಟಕದಲ್ಲಿ ಯಾರೊಬ್ಬರೂ ಇಲ್ಲವಾಗಿ ದ್ದಾರೆ’ ಎಂಬ ಅಳಲು ಹಿರಿಯ ಕಾರ್ಯಕರ್ತರೊಬ್ಬರದ್ದು.

‘ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ನಾಯಕರಾಗಿ ಬೆಳೆದವರು ಸ್ಥಾನಮಾನ ಹುಡುಕಿಕೊಂಡು ರಾಷ್ಟ್ರೀಯ ಪಕ್ಷಗಳತ್ತ ತೆರಳುತ್ತಾರೆ. ಇನ್ನೂ ಇಲ್ಲಿಗೆ ಬರುವವರು ಸಹ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್‌ ವಂಚಿತಗೊಂಡವರು. ಅದೂ ಚುನಾ ವಣೆಯ ಕೊನೆ ಕ್ಷಣದಲ್ಲಿ. ಇದರಿಂದ ಜಿಲ್ಲೆಯಲ್ಲಿ ಭದ್ರವಾಗಿದ್ದ ಪಕ್ಷದ ಸಂಘಟನೆ ಪ್ರಸ್ತುತ ಬಲಹೀನವಾಗಿದೆ’ ಎಂದು ಅವರು ಬೇಸರದಿಂದ ನುಡಿದರು.

‘ಸಂಘಟನೆ ವಿಷಯ ಬಂದಾಗ ಯಾರೊಬ್ಬರೂ ಜವಾಬ್ದಾರಿ ಹೊರಲ್ಲ. ಚುನಾವಣೆ ಎದುರಾಗುತ್ತಿದ್ದಂತೆ ತಮ್ಮ ಮನೆಗಳ ಕಪಾಟಿನಲ್ಲಿಟ್ಟಿದ್ದ ಬಿಳಿ ಉಡುಪು ಧರಿಸಿ ಪಕ್ಷದ ಕಚೇರಿಗೆ ಬರುತ್ತಾರೆ. ನಮ್ಮ ನಾಯಕರು ಇಂತಹ ವರಿಗೆ ಮಣೆ ಹಾಕುತ್ತಾರೆ’ ಎಂದು ಜೆಡಿಎಸ್‌ನ ಹಿರಿಯ ಮುಖಂಡ ರೊಬ್ಬರು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

* * 

ಪಕ್ಷ ಈಗಾಗಲೇ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಆದರೂ ರಾಜಕೀಯ ಬೆಳವಣಿಗೆ ಬಿರುಸಿನಿಂದ ನಡೆದಿವೆ. ಕಾದು ನೋಡುತ್ತೇವೆ
ಎಂ.ಸಿ.ಮನಗೂಳಿ
ಅಧ್ಯಕ್ಷ, ಜೆಡಿಎಸ್‌ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.