ADVERTISEMENT

ಗಲೀಜಾದ ಕುಡಿಯುವ ನೀರಿನ ಟ್ಯಾಂಕ್: ನಿರ್ಲಕ್ಷ್ಯ– ಆರೋಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 5:41 IST
Last Updated 27 ಜುಲೈ 2017, 5:41 IST

=ಚಡಚಣ: ಗ್ರಾಮದ ಜನರಿಗಾಗಿ ನಿರ್ಮಿ ಸಲಾದ ಕುಡಿಯುವ ನೀರು ಶೇಖರಣಾ ತೊಟ್ಟಿಲ್ಲಿ ಹಲವು ದಿನಗಳ ಹಿಂದೆ ಬೆಕ್ಕು ಸತ್ತು ಬಿದ್ದರೂ, ಈ ನೀರನ್ನೇ ಬಳಸು ತ್ತಿರುವ ಘಟನೆ ಸಮೀಪದ ಹೊರ್ತಿ ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಸುಮಾರು 150 ಚದರ ಅಡಿ ವಿಸ್ತೀರ್ಣ ಹಾಗೂ 15 ಅಡಿ ಎತ್ತರದ ತೆರೆದ ಬಾವಿಯಂತಿರುವ ನೀರು ಶೇಖ ರಣಾ ತೊಟ್ಟಿಯಲ್ಲಿ ಕೆಲವು ದಿನಗಳ ಹಿಂದೆ ಬೆಕ್ಕೊಂದು ಆಕಸ್ಮಿಕವಾಗಿ ಬಿದ್ದಿದೆ. ಇದು ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಗಮನಕ್ಕೆ ಬಂದಿಲ್ಲ.

ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶರಣಬಸು ಡೊಣಗಿ, ತೆರೆದ ನೀರು ಶೇಖರಣಾ ತೊಟ್ಟಿಯ ಮೇಲ್ಭಾಗದಲ್ಲಿ ಹೊದಿಕೆ ಹಾಕುವಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದರು.

ADVERTISEMENT

ಎಷ್ಟು ದಿವಸಗಳ ಹಿಂದೆ ಬೆಕ್ಕು ಸತ್ತು ಬಿದ್ದಿದೆ ಎಂಬುವುದು ತಿಳಿದು ಬಂದಿಲ್ಲ ವಾದರೂ, ಸುಮಾರು 3 ದಿನಗಳ ಹಿಂದೆ ಬೆಕ್ಕು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರ ಬಹುದು. ಈ ನೀರನ್ನೇ ಗ್ರಾಮದ ಹೋಟಲ್, ಸಾರ್ವಜನಿಕರು, ಸುತ್ತಲಿನ ಮನೆಯವರು, ಅಂಗಡಿಕಾರರು, ದಾರಿ ಹೋಕರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ ಎಂದು ಹೇಳಿದರು.

ಈ ಕುರಿತು ಆರೋಗ್ಯ ಇಲಾಖೆ ಸೂಕ್ತ ಮುಂಜಾಗೃತೆ ವಹಿಸಬೇಕು. ನೀರು ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದ ಗ್ರಾಮ ಪಂಚಾಯ್ತಿ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡು,         ಮುಂದೆ ಇಂತಹ ಘಟನೆ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಬುಧವಾರ ಸಂಜೆಯಾದರೂ ಘಟನಾ ಸ್ಥಳಕ್ಕೆ ಯಾವೊಬ್ಬ ಅಧಿಕಾರಿ ಗಳ ಭೇಟಿ ನೀಡದೇ ಇರುವುದು ಗ್ರಾಮ ಸ್ಥರು ರೊಚ್ಚಿಗೇಳಿಸುಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.