ADVERTISEMENT

ಜ್ಞಾನದ ಕಣಜ ಬಿ.ಆರ್.ಅಂಬೇಡ್ಕರ್‌: ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:40 IST
Last Updated 17 ಏಪ್ರಿಲ್ 2017, 5:40 IST

ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಒಂದು ಬೃಹತ್ ವಿಶ್ವವಿದ್ಯಾಲಯವಿದ್ದಂತೆ, ಆದ್ದರಿಂದ ಅವರು ಜ್ಞಾನದ ಕಣಜವೇ ಆಗಿದ್ದರು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಪಿ.ವಿ.ಕಣ್ಣನ್ ಶ್ಲಾಘಿಸಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ವತಿಯಿಂದ ಅಂಬೇಡ್ಕರರ 126ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಜ್ಞಾನ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್‌ ಇಲ್ಲಿ ಹುಟ್ಟಿರದೆ ಇದ್ದಿದ್ದರೇ ಭಾರತವನ್ನು ಕುರಿತು ಕಲ್ಪನೆ ಸಹ ಮಾಡಿಕೊಳ್ಳಲು ನಮಗೆ ಆಗುತ್ತಿರಲ್ಲಿಲ್ಲ. ಬೇರೆ ದೇಶದಲ್ಲಿದ್ದರೂ ಸಹ ಅವರು ಭಾರತದ ಮುನ್ನಡೆಗೆ ಸತತವಾಗಿ ಹೋರಾಡಿದರು ಎಂದರು.ಪ್ರಸ್ತುತವೂ ಪ್ರತಿ 18 ನಿಮಿಷಕ್ಕೆ ಒಬ್ಬ ದಲಿತನ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಶೇ 80ರಷ್ಟು ದಲಿತ ಮಕ್ಕಳು ಹಸಿವಿಗೆ ಬಲಿಯಾಗುತ್ತಿರುವುದು ಕಳವಳದ ಸಂಗತಿ ಎಂದು ವಿಷಾದಿಸಿದರು.

ಮಹಿಳಾ ವಿ.ವಿ. ಕುಲಸಚಿವ ಪ್ರೊ.ಕೆ.ಪಿ.ಶ್ರೀನಾಥ ಮಾತನಾಡಿ ಅಂಬೇಡ್ಕರ್ ಮೊದಲ ಬಾರಿಗೆ ಅವಮಾನವಾದಾಗ ಕುಗ್ಗಲಿಲ್ಲ. ಕಷ್ಟ-–ಅವಮಾನಗಳ ಮಧ್ಯೆಯೇ ಬೆಳೆದು ಇಂದು ವಿಶ್ವಮಾನವರಾಗಿ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.  ಆಯಾಸವಿಲ್ಲದೆ ಕೆಲಸ ಸಿಗಬೇಕು, ಆಯಾಸವಿಲ್ಲದೆ ಸಾವು ಬರಬೇಕು ಎನ್ನುವ ಸೋಮಾರಿತನದ ಮನೋಭಾವ ನಮ್ಮದು. ಅದನ್ನು ಕಿತ್ತೆಸೆದು ಕಷ್ಟ ಪಟ್ಟು ಮುಂದೆ ಬಂದು ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ADVERTISEMENT

ಕುಲಸಚಿವ ಮೌಲ್ಯಮಾಪನ ಪ್ರೊ.ವಿ.ವಿ.ಮಳಗಿ, ಪ್ರೊ.ಮಡಗಿ, ಪ್ರೊ.ಟಿ.ಎಂ.ಗೀತಾ, ಪ್ರೊ.ಮದರಿ, ಡಾ.ಡಿ.ಎಂ.ಜ್ಯೋತಿ, ಡಾ.ಲಕ್ಷ್ಮೀದೇವಿ ಅಲ್ಕೋಡ, ಡಾ.ವಿಷ್ಣು ಶಿಂಧೆ, ಡಾ.ಕುಲಕರ್ಣಿ, ಡಾ.ವೆಂಕೋಬ, ಡಾ.ಜ್ಯೋತಿ ಉಪಾಧ್ಯೆ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ-–ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಬುದ್ಧವಂದನೆಗೈದರು.  ಪ್ರೊ.ಸಕ್ಪಾಲ್ ಹೂವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕಿ ಡಾ.ಶಾಂತಾದೇವಿ ನಿರೂಪಿಸಿದರು. ಎಂಬಿಎ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಂಜೀವ ಕುಮಾರ ವಂದಿಸಿದರು.ಸಮಾಗಾರ ಹರಳಯ್ಯ ಯುವ ವೇದಿಕೆ: ನಗರದ ಜೋರಾಪುರ ಪೇಟೆಯಲ್ಲಿ ಜಿಲ್ಲಾ ಸಮಾಗಾರ ಹರಳಯ್ಯ ಯುವ ವೇದಿಕೆಯಿಂದ ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.  ಸಂದೀಪ ಕಾಳೆ, ನಾಗರಾಜ ಕಬಾಡೆ, ಅರೋಡಸ್ವಾಮಿ ಕಬಾಡೆ, ಸುಶೀಲ ಶಿಂಧೆ, ರಾಜು ಕಬಾಡೆ, ಶಿವಮೂರ್ತಿ, ಗೋಪಾಲ ಕಬಾಡೆ, ಸಂತೋಷ ಹಂಜಗಿ, ಸುನೀಲ ಕಬಾಡೆ, ರಾಜು ನಾಗಠಾಣ, ಪರಶುರಾಮ ಸೌದಾಗರ, ಆನಂದ ಗುರಡಕರ, ವಿಜಯರಾಮ ಗುರಡಕರ, ಸಂತೋಷ ಕಬಾಡೆ, ತಬ್ಬಣ್ಣ ಹೊನ್ನಕಸ್ತೂರಿ, ರಾಘವೇಂದ್ರ ಕಾಸೆ ಇದ್ದರು.

ಶ್ರೇಷ್ಠಜ್ಞಾನಿ: ಬಸವನಬಾಗೇವಾಡಿ ತಾಲ್ಲೂಕು ಮಸೂತಿ ಗ್ರಾಮದ ಗಂಡು ಮಕ್ಕಳ ಸರ್ಕಾರಿ ಕನ್ನಡ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯ ಉಮೇಶ ಮಣ್ಣೂರ ಮಾತನಾಡಿ ಅಂಬೇಡ್ಕರ್‌ ಬಾಲ್ಯದಲ್ಲಿ ಸಾಕಷ್ಟು ಕಷ್ಟ, ಅವಮಾನ ಕಂಡರೂ, ಎದೆಗುಂದದೆ ಕಠಿಣ ಪರಿಶ್ರಮದಿಂದ ಶ್ರೇಷ್ಠಜ್ಞಾನಿಯಾಗಿ ಹೊರಹೊಮ್ಮಿದಲ್ಲದೇ, ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದರು ಎಂದರು.ದೈಹಿಕ ಶಿಕ್ಷಣ ಶಿಕ್ಷಕ ವೈ.ಎನ್.ಗೊಳಸಂಗಿ, ಎಸ್.ಐ.ಕಲ್ಯಾಣಿ, ಕೆ.ಎಸ್.ಸಿದರಡ್ಡಿ, ಎಸ್.ಎಂ.ದಿನ್ನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.