ADVERTISEMENT

‘ಝಳಕಿ ಚೆಕ್‌ಪೋಸ್ಟಿನಲ್ಲಿ ವ್ಯಾಪಕ ಭ್ರಷ್ಟಾಚಾರ’

ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ರಚನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:15 IST
Last Updated 22 ಮಾರ್ಚ್ 2017, 7:15 IST

ವಿಜಯಪುರ: ‘ರಾಜ್ಯದ ಗಡಿ ಭಾಗದಲ್ಲಿ ರುವ ವಿಜಯಪುರ ಜಿಲ್ಲೆಯ ಝಳಕಿ ಚೆಕ್‌ಪೋಸ್ಟ್‌ನಲ್ಲಿ ಮಿತಿಮೀರಿದ ಭ್ರಷ್ಟಾ ಚಾರ ನಡೆಯುತ್ತಿದ್ದು, ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಅದನ್ನು ಮುಚ್ಚಬೇಕು’ ಎಂದು ದಕ್ಷಿಣ ವಲಯ ಮೋಟಾರ್‌ ಟ್ರಾನ್ಸ್‌ ಪೋರ್ಟರ್ಸ್‌ ಹಿತರಕ್ಷಣಾ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್‌. ಷಣ್ಮು ಗಪ್ಪ ಮಂಗಳವಾರ ಇಲ್ಲಿ ಆಗ್ರಹಿಸಿದರು.

‘ದಾಖಲಾತಿಗಳು ಸಮರ್ಪಕವಾ ಗಿದ್ದರೂ ಆರ್‌.ಟಿ.ಒ ಅಧಿಕಾರಿಗಳ ಸುಲಿಗೆ ಹೇಳ ತೀರದಾಗಿದೆ. ಇದರಿಂದ ಲಾರಿ ಚಾಲಕರು ಹೈರಾಣಾಗಿದ್ದಾರೆ. ಇದನ್ನು ತಪ್ಪಿಸಬೇಕು ಎಂದರೇ ಚೆಕ್‌ ಪೋಸ್ಟ್‌ ಮುಚ್ಚುವುದೊಂದೇ ದಾರಿ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಝಳಕಿ ಚೆಕ್‌ಪೋಸ್ಟ್‌ಗೆ ನಿಯೋಜ ನೆಗೊಳ್ಳಲು, ವರ್ಗಾವಣೆಗೊಳ್ಳಲು ಅಧಿ ಕಾರಿಗಳು ತುದಿಗಾಲಲ್ಲಿ ಕಾತರದಿಂದ ಕಾಯುತ್ತಾರೆ. ಎರಡು ತಿಂಗಳ ಅವಧಿ ಕರ್ತವ್ಯ ನಿರ್ವಹಿಸಲು ₹50 ಲಕ್ಷ ಲಂಚ ನೀಡುವ ಅಧಿಕಾರಿಗಳಿದ್ದಾರೆ. ವಸೂಲಿ ಗಾಗಿಯೇ ಝಳಕಿ ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ₹25 ಲಕ್ಷಕ್ಕೂ ಅಧಿಕ ಲಂಚದ ಹಣ ಸಂಗ್ರಹವಾ ಗುತ್ತದೆ’ ಎಂದು ಅವರು ಆರೋಪಿಸಿದರು.

‘ರಾಜ್ಯದ ವಿವಿಧೆಡೆ ಆರ್‌.ಟಿ.ಒ, ಬ್ರೇಕ್‌ ಇನ್‌ಸ್ಪೆಕ್ಟರ್‌ಗಳ ಕೊರತೆಯಿ ದ್ದರೂ, ಇಲ್ಲಿ ನಿಗದಿಗಿಂತ ಹೆಚ್ಚಿನ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಾಖಲೆ ಗಳು ಸರಿಯಿದ್ದರೂ ಲಾರಿ ಚಾಲಕರು ಹಣ ನೀಡದೆ ಚೆಕ್‌ಪೋಸ್ಟ್‌ ದಾಟು ವಂತಿಲ್ಲ.

ಸ್ಥಳೀಯ ಜನಪ್ರತಿನಿಧಿಯಿಂದ ಸಾರಿಗೆ ಸಚಿವರ ಕಚೇರಿ ತನಕವೂ ಲಂಚದ ಹಣ ಇಲ್ಲಿನ ಚೆಕ್‌ಪೋಸ್ಟ್‌ ನಿಂದ ರವಾನೆಯಾಗುತ್ತದೆ. ಇದಕ್ಕಾಗಿ 40ಕ್ಕೂ ಹೆಚ್ಚು ಖಾಸಗಿ ಗೂಂಡಾಗಳು ಇಲ್ಲಿ ಕಾರ್ಯೋನ್ಮುಖರಾಗಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ 23 ಲಕ್ಷ ವಾಣಿಜ್ಯ ಉದ್ದೇಶದ ವಾಹನಗಳಿದ್ದು, ವರ್ಷಕ್ಕೆ ₹6030 ಕೋಟಿ ತೆರಿಗೆ ಪಾವತಿಸುತ್ತವೆ. ಡೀಸೆಲ್‌ ಮೇಲಿನ ಸೆಸ್‌ನಿಂದ ₹22 ಸಾವಿರ ಕೋಟಿ ರಾಜ್ಯ ಸರ್ಕಾರಕ್ಕೆ ಸಂಗ್ರಹವಾಗುತ್ತಿದ್ದು, ಇದರ ಜತೆಗೆ ಇನ್ನೊಂದಿಷ್ಟು ಸೆಸ್‌ ಹೆಚ್ಚು ಮಾಡಲಿ.

ಕಟ್ಟಲು ನಾವು ಸಿದ್ಧ. ಆದರೆ ಲೂಟಿಗಾಗಿ ಸರ್ಕಾರ 19 ರಾಜ್ಯ ಹೆದ್ದಾರಿ ಗಳಲ್ಲಿ ಟೋಲ್‌ ರಚಿಸಲು ಮುಂದಾಗಿ ರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

‘ಈಗಾಗಲೇ ಅಸ್ತಿತ್ವದಲ್ಲಿರುವ ಟೋಲ್‌ಗಳಿಂದ ವಾಹನ ಮಾಲೀಕರಿಗೆ ವಾರ್ಷಿಕ ₹ 90 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ವಾಣಿಜ್ಯ ಉದ್ದೇಶಕ್ಕೆ ಬಳಸುವ ಲಾರಿಗೆ ವಾರ್ಷಿಕ ₹50 ಸಾವಿರ, ಬಸ್‌ಗೆ ₹90 ಸಾವಿರ ಸಂಗ್ರಹಿಸಲು ಮುಂದಾಗಿ. ಕೊಡಲು ನಾವು ಸಿದ್ಧ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.