ADVERTISEMENT

ತಿಂಗಳಿಗೊಮ್ಮೆ ನಡೆಯದ ಸಾಮಾನ್ಯ ಸಭೆ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 4:58 IST
Last Updated 18 ಜನವರಿ 2017, 4:58 IST
ತಿಂಗಳಿಗೊಮ್ಮೆ ನಡೆಯದ ಸಾಮಾನ್ಯ ಸಭೆ!
ತಿಂಗಳಿಗೊಮ್ಮೆ ನಡೆಯದ ಸಾಮಾನ್ಯ ಸಭೆ!   

ವಿಜಯಪುರ: ನಗರ/ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಆಡಳಿತ ಮಂಡಳಿ ತಿಂಗಳಿಗೊಮ್ಮೆ ಮಾಸಿಕ ಸಭೆ ನಡೆಸುವುದು ಕಡ್ಡಾಯ ಎಂಬ ನಿಯಮವಿದ್ದರೂ, ಬಹುತೇಕ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಸಭೆ ನಡೆಸದಿರುವುದನ್ನು ನಗರಾಭಿವೃದ್ಧಿ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ 2016ರ ಡಿ 12ರಂದು ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಡ್ಡಾಯವಾಗಿ ಮಾಸಿಕ ಸಭೆ ನಡೆಸಬೇಕು ಎಂದು ನೀಡಿದ ಸೂಚನೆ ಯನ್ನು, ಪೌರಾಡಳಿತ ನಿರ್ದೇಶನಾಲಯ ಎಲ್ಲ ಮಹಾನಗರ ಪಾಲಿಕೆ (ಬಿಬಿಎಂಪಿ ಹೊರತುಪಡಿಸಿ) ನಗರ ಸಭೆ/ಪುರಸಭೆ/ ಪಟ್ಟಣ ಪಂಚಾಯ್ತಿಯ ಮೇಯರ್, ಅಧ್ಯಕ್ಷರು, ಆಯುಕ್ತರು/ ಪೌರಾಯುಕ್ತರು/ ಮುಖ್ಯಾಧಿಕಾರಿ ಹಾಗೂ ರಾಜ್ಯದ ಎಲ್ಲ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಡಿ 12ರಂದೇ ಸುತ್ತೋಲೆ ಮೂಲಕ ಸೂಚನೆ ರವಾನಿಸಿದೆ.

ಸುತ್ತೋಲೆಯ ಒಕ್ಕಣೆ ಇಂತಿದೆ: ಕರ್ನಾಟಕ ಪೌರ ನಿಗಮಗಳ ಅಧಿ ನಿಯಮದಂತೆ ಮಹಾನಗರ ಪಾಲಿಕೆ ತಿಂಗಳಿಗೊಮ್ಮೆ ಮಾಸಿಕ ಸಾಮಾನ್ಯ ಸಭೆ ನಡೆಸುವುದು ಕಡ್ಡಾಯ.
ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದವರು ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮಾಸಿಕ ಸಾಮಾನ್ಯ ಸಭೆ ನಡೆಸಿರುವ ಬಗ್ಗೆ ಪರಿಶೀಲಿಸಿ ನಿಯಮಾ ನುಸಾರ ವರದಿ ಪಡೆದು, ಠರಾವುಗಳನ್ನು ಅಂಗೀಕ ರಿಸಲು /ತಿರಸ್ಕರಿಸಲು ಅಗತ್ಯ ಕ್ರಮ ವಹಿಸಬೇಕು ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಮಾಸಿಕ ಸಾಮಾನ್ಯ ಸಭೆಯನ್ನು ನಡೆಸಲು ವಿಫಲವಾಗುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರಿಗೆ, ಮೇಯರ್‌ಗೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಲಾಗುವುದು. ಆಯುಕ್ತರು /ಪೌರಾಯುಕ್ತರು/ಮುಖ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಲಾಗುವುದು ಎಂದು ಪೌರಾಡಳಿತ ನಿರ್ದೇಶ ನಾಲಯದ ಸುತ್ತೋಲೆ ಸ್ಪಷ್ಟಪಡಿಸಿದೆ.

ಎಚ್ಚರಿಕೆ ಪತ್ರ: ಈ ಸುತ್ತೋಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ 2016ರ ಡಿ 19ರಂದು ಜಿಲ್ಲೆಯ ವ್ಯಾಪ್ತಿಯ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಮಾಸಿಕ ಸಭೆ ನಡೆಸಲು ವಿಫಲವಾದರೆ ಮೇಯರ್‌–ಅಧ್ಯಕ್ಷ/ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವಹಣೆ ನಡೆಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಪೌರಾ ಡಳಿತ ನಿರ್ದೇಶನಾಲಯದ ನಿರ್ದೇಶಕ ರಿಗೆ ವರದಿ ಸಲ್ಲಿಸುವ ಎಚ್ಚರಿಕೆಯ ಪತ್ರವನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ಬರೆದಿದ್ದಾರೆ.

ನಡೆಯದ ಸಭೆ:  ಪೌರಾಡಳಿತ ನಿರ್ದೇಶ ನಾಲಯ ಸುತ್ತೋಲೆ ಮೂಲಕ ಸೂಚನೆ ರವಾನಿಸಿದ್ದರೂ, ಜಿಲ್ಲಾಧಿಕಾರಿ ಎಚ್ಚರಿಕೆ ಪತ್ರ ಬರೆದಿದ್ದರೂ ಸ್ಥಳೀಯ ಸಂಸ್ಥೆಗಳು ಮಾತ್ರ ಪ್ರತಿ ತಿಂಗಳು ಸಭೆ ನಡೆಸುವಲ್ಲಿ ವಿಫಲವಾಗಿವೆ.

ಇಲ್ಲಿನ ಪಾಲಿಕೆಯ ಮೂರನೇ ಆಡಳಿತ ಅವಧಿ ಆರಂಭಗೊಂಡು ಆರು ತಿಂಗಳಾದರೂ ಇದುವರೆಗೂ ನಡೆದಿ ರುವುದು ಕೇವಲ ಎರಡು ಸಾಮಾನ್ಯ ಸಭೆ ಮಾತ್ರ. 2016ರ ಜುಲೈ 30ರಂದು ಮೇಯರ್‌ ಆಗಿ ಅನೀಸ್ ಫಾತಿಮಾ ಬಕ್ಷಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಾಮಾನ್ಯ ಸಭೆ ನಡೆದಿದ್ದು ಸೆಪ್ಟೆಂಬರ್ 27ರಂದು. ಇದರ ಬಳಿಕ ಎರಡನೇ ಸಭೆ ನಡೆದಿದ್ದು ಡಿಸೆಂಬರ್ 15ರಂದು.

ಕೊನೆಯ ಸಭೆ ನಡೆದು ತಿಂಗಳು ಗತಿಸಿದರೂ ಮತ್ತೊಂದು ಸಾಮಾನ್ಯ ಸಭೆ ಇದುವರೆಗೂ ನಿಗದಿಯಾಗಿಲ್ಲ. ಮೇಯರ್‌–ಆಯುಕ್ತರ ನಡುವಿನ ತಿಕ್ಕಾಟದಿಂದಲೇ ಸಾಮಾನ್ಯ ಸಭೆ ನಿಯ ಮಿತವಾಗಿ ಕಾನೂನಿನಂತೆ ತಿಂಗಳಿ ಗೊಮ್ಮೆ  ನಡೆಯುತ್ತಿಲ್ಲ. ಇದರಿಂದ ನಗರದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆ ಯಾಗುತ್ತಿದೆ ಎಂಬ ದೂರು ನಗರ ವಾಸಿ ಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ, ಜಿಲ್ಲಾಧಿಕಾರಿಯ ಎಚ್ಚರಿಕೆಯ ಪತ್ರ ಇನ್ನಾದರೂ  ಮಹಾ ನಗರ ಪಾಲಿಕೆಯಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನ ಗೊಳ್ಳುವುದೇ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎನ್ನುತ್ತಾರೆ ಪಾಲಿಕೆಯ ಪಕ್ಷೇತರ ಸದಸ್ಯ ರವೀಂದ್ರ ಲೋಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.