ADVERTISEMENT

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 8:56 IST
Last Updated 20 ಜನವರಿ 2017, 8:56 IST

ಚಡಚಣ: ವಿಜಯಪುರ ಜಿಲ್ಲೆಯ ಕನಮಡಿ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಡಿದ ಅವಮಾನ ಖಂಡಿಸಿ ಗುರುವಾರ ಸ್ಥಳಿಯ ವಿರಕ್ತ ಮಠದ ಮಲ್ಲಿಕಾರ್ಜುನ ಮರಿದೇವರ ಹಾಗೂ ಹತ್ತಳ್ಳಿಯ ಗುರುಪಾದೇಶ್ವರ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ ದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ,ವಿಶೇಷ ತಹಶಿಲ್ದಾರಗೆ ಮನವಿ ಸಲ್ಲಿಸಿದರು.

ಬಸವೇಶ್ವರ ವೃತ್ದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸ್ಥಳಿಯ ವಿರಕ್ತಮಠದ ಮಲ್ಲಿಕಾರ್ಜುನ ಮರಿದೇವರು, ಮಹಾನ್ ಮಾನವತಾವಾದಿ ಬಸವಣ್ಣನವರು ಸಾಮಾಜಿಕ ಸಮಾನತೆಗೆ ಶ್ರಮಿಸಿದ ಅಸವರು,ಎಲ್ಲ ವರ್ಗದವರ ಏಳಿಗೆ ಬಯಸಿದವರು. ಇಂತಹ ಮಹಾನ್ ಯೋಗಿಯ ಪುತ್ಥಳಿಗೆ ಅವಮಾನಿಸಿದ್ದು,ಅಮಾನವೀಯ ಎಂದು ಹೇಳಿದರು.

ಹತ್ತಳ್ಳಿ ಗುರುಪಾದೇಶ್ವರ ಶಿವಾಚಾರ್ಯ ಮಾತನಾಡಿದರು. ನಂತರ ಬಸವೇಶ್ವರ ವೃತ್ ದಿಂದ ವಿಶೇಷ ತಹಶೀಲ್ದಾರ್‌ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ವಿಶೇಷ ತಹಶಿಲ್ದಾರ ಎಸ್.ಎಸ್.ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸೊನ್ನಲಗಿಯ ಸಿದ್ದಲಿಂಗ ಮಹಾಸ್ವಾಮೀಜಿ,ಪಟ್ಟಣ ಪಂಚಾಯ್ತಿ ಸದಸ್ಯರಾದ ಬಾಬುಗೌಡ ಪಾಟೀಲ, ವಿಜಯಕುಮಾರ ಅವಟಿ, ಮಲ್ಲು ಧೋತ್ರೆ,ಕುಬೇರ ಶಿಂಧೆ, ನಾಗರಾಜ ನಿರಾಳೆ,ಶಿವು ಖಟ್ಟಿ,ಧರ್ಮು ಬಡಿಗೇರ, ಮುಖಂಡರಾದ ಬಸವರಾಜ ಭಮಶೆಟ್ಟಿ, ಸಿದ್ದಪ್ಪ ಉಮರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.