ADVERTISEMENT

ನೆರೆಯ ಕಾರ್ಖಾನೆಗಳಷ್ಟು ದರ ನೀಡಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:47 IST
Last Updated 18 ನವೆಂಬರ್ 2017, 9:47 IST

ಇಂಡಿ: ನೆರೆಯ ಕಾರ್ಖಾನೆಗಳು ಪ್ರತಿ ಮೆಟ್ರಿಕ್ ಟನ್‌ ಕಬ್ಬಿಗೆ ನೀಡುವ ದರವನ್ನು ಜಮುಖಂಡಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನೀಡಲು ಸಿದ್ದವಾಗಿದೆ ಎಂದು ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಮಾಧವರಾಜು ರೈತರಿಗೆ ಭರವಸೆ ನೀಡಿದರು.

ತಾಲ್ಲೂಕಿನ ನಾದ(ಕೆಡಿ) ಗ್ರಾಮದಲ್ಲಿರುವ ಜಮುಖಂಡಿ ಶುಗರ್ಸ್‌ ಕಾರ್ಖಾನೆಯ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಬ್ಬು ಬೆಳೆಗಾರ  ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ರೈತರ ಸಹಾಯ ಸಹಕಾರದಿಂದ ಇದೇ 11 ರಂದು ಕಬ್ಬು ನುರಿಸುವ ಕಾರ್ಯ ಪ್ರಾರಂಭವಾಗಿದೆ ಎಂದರು.

2016 –20-17ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಈಗಾಗಲೇ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹2500 ಪಾವತಿಸಿಲಾಗಿದೆ. ಇಗೀಗ ಹೆಚ್ಚುವರಿಯಾಗಿ ಪ್ರತಿಟನ್ ಕಬ್ಬಿಗೆ ₹ 100 ಕೊಡಲಾಗುವುದು ಎಂದು ಅಡಳಿತ ಮಂಡಳಿ ತಿಳಿಸಿದೆ.ರೈತರು ಒಳ್ಳೆಯ ಪರಿಪಕ್ವ ಕಬ್ಬು ಕಳಿಸಿದರೆ ಕಾರ್ಖಾನೆಗೂ ಒಳ್ಳೆದಾಗುತ್ತದೆ ಎಂದರು

ADVERTISEMENT

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ದುದ್ದಗಿ, ಶಿವಾನಂದ ರಾವೂರ, ಶಿವಾನಂದ ಕಲಶೆಟ್ಟಿ, ಚಂದ್ರಶೇಖರ ಹಳ್ಳಿ, ಶ್ರೀಶೈಲ ಮದರಿ, ಶ್ರೀಶೈಲ ತೊನಶ್ಯಾಳ, ಬಸವರಾಜ ಕಸ್ಕಿ, ದಯಾನಂದ ಮದರಿ, ರಮೇಶ ಆಲಮೇಲ, ಶರಣು ಕುದರಗೊಂಡ, ಬಸವರಾಜ ಬಿರಾದಾರ, ಶ್ರೀಶೈಲ ಆಲಮೇಲ, ಶೇಖರ ಮಂದೋಲಿ, ಚಿದಾನಂದ, ಶಿವಾನಂದ ಕಲಶೆಟ್ಟಿ, ರಮೇಶ ರಾವೋರ, ಚಂದ್ರಶೇಖರ ಹಳೇಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.